ನಗರಸಭೆ ಆರೋಗ್ಯ ನಿರೀಕ್ಷಕ ಜಂಬಯ್ಯ ಮುಂದುವರಿಕೆಗೆ ಸದಸ್ಯರ ಆಗ್ರಹ
ಕರ್ತವ್ಯ ನಿಷ್ಠೆ ಹೊಂದಿದ ಅಧಿಕಾರಿ ಜಂಬಯ್ಯ ವರ್ಗಾಯಿಸದಂತೆ ಮನವಿ
ಶಹಾಪುರಃ ಕೊರೊನಾ ಕರಿನೆರಳ ಛಾಯೆಯಲ್ಲಿ ಇಲ್ಲಿನ ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡಗಳಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದು, ನಗರದ ನಾಗರಿಕರ ಹಿತ ಕಾಪಾಡಿದ ನಗರಸಭೆಯ ಆರೋಗ್ಯ ನಿರೀಕ್ಷಕ ಜಂಬಯ್ಯ ಅವರನ್ನು ಪ್ರಸ್ತುತ ಕರ್ತವ್ಯದಲ್ಲಿಯೇ ಮುಂದುವರೆಸಬೇಕು ಎಂದು ಆಗ್ರಹಿಸಿ ನಗರಸಭೆ ಸದಸ್ಯರು ಯಾದಗಿರಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಯಾವುದೇ ಆರೋಪಗಳಿಲ್ಲದೆ ನಗರದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಾಮಾಣಿಕ ಅಧಿಕಾರಿ ಜಂಬಯ್ಯ ಅವರನ್ನು ಏಕಾಏಕಿ ಮಾತೃ ಇಲಾಖೆಗೆ ವರ್ಗಾವಣೆ ಮಾಡಿದ ಸರ್ಕಾರದ ಕ್ರಮ ಜನಾಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಅವರನ್ನು ಶಹಾಪುರ ನಗರಸಭೆ ಕರ್ತವ್ಯ ನಿರತ ಸ್ಥಳದಲ್ಲಿಯೇ ಮುಂದುವರೆಸಬೇಕು ಎಂದು ಪಕ್ಷಬೇಧ ಮರೆತು ನಗರಸಭೆ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಕರ್ತವ್ಯ ನಿಷ್ಠೆ ಮೆರೆಯುವ ಅಧಿಕಾರಿ ಜಂಬಯ್ಯನವರನ್ನು ವಿನಾಃ ಕಾರಣ ಬೇರಡೆ ವರ್ಗಾವಣೆ ಮಾಡದೆ ಶಹಾಪುರ ನಗರಸಭೆಯಲ್ಲಿಯೇ ಮುಂದುವರೆಸಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಾಗರಿಕರೊಂದಿಗೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸಯ್ಯದ್ ಹಮ್ಜಾ, ರಾಜಶೇಖರ ಪಾಟೀಲ್, ಸಿದ್ದು ಆರಬೋಳ ಸಾಹು, ಸತೀಶ ಪಂಚಬಾವಿ, ಭೀಮಬಾಯಿ, ಲಾಲಹ್ಮದ್ ಖುರೇಶಿ, ಹೊನ್ನಮ್ಮ ಕದರಾಪುರ, ಅಶೋಕ ಟಣಕೆದಾರ, ನಾಗರತ್ನ ಯಾಳಗಿ, ಜ್ಯೋತಿ ಭಾಸುತ್ಕರ್, ಪೀರದೋಶ ಖಾತೂನ, ರವಿಂದ್ರನಾಥ, ಅಯ್ಯಮ್ಮ ಮುಂಡಾಸ್, ಧರ್ಮಣ್ಣ ದಶವಂತ, ಶರಣಮ್ಮ ರುದ್ರಯ್ಯ, ಮಹೆರೋನಬೇಗಂ, ಮಹೇಶ ಮಡಿವಾಳಕರ್, ಗಿರಿಜಮ್ಮ ಹಣಮಂತ್ರಾಯ, ಜಾನಕಮ್ಮ ಯಕ್ಷಿಂತಿ, ಸಹನಾ ನಂದಿಕೋಲ್ ಸೇರಿದಂತೆ ಇತರೆ ಸದಸ್ಯರು ಇದ್ದರು.