ಶಹಾಪುರಃ ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ
ಶಹಾಪುರಃ ನಗರಸಭೆ ಎದುರು ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ
ಶಹಾಪುರ ನಗರಸಭೆ ಎದುರು ಬೆಳ್ಳಂಬೆಳಗ್ಗೆ ಕಾರ್ಮಿಕರಿಂದ ಧರಣಿ
ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಬೆಳ್ಳಂಬೆಳಗ್ಗೆ ಧರಣಿ
ಯಾದಗಿರಿ, ಶಹಾಪುರ ನಗರದ ನಗರಸಭೆ ಪೌರ ಕಾರ್ಮಿಕರ ಮೇಲಿನ ಮೇಲಧಿಕಾರಿಗಳ ದೌರ್ಜನ್ಯ ಖಂಡಿಸಿ ಕಾರ್ಮಿಕರು ಇಂದು ಬುಧವಾರ ಬೆಳ್ಳಂಬೆಳಗ್ಗೆ ಧರಣಿ ಆರಂಭಿಸಿದ್ದಾರೆ.
ನಮ್ಮ ನ್ಯಾಯಯುತ ಬೇಡಿಕೆ ಸಲ್ಲಿಸಿರುವ ಹಿನ್ನೆಲೆ’ ಜೊತೆಗೆ ಸಚಿವರಾದ ದರ್ಶನಾಪುರ ಅವರ ಮುಂದೆ ಅಳಲು ತೊಡಿಕೊಂಡ ಹಿನ್ನೆಲೆ ನಮ್ಮನ್ನು ಹೆಚ್ಚು ತುಚ್ಛವಾಗಿ ಕಾಣುತ್ತಿರುವಾಗ, ಚರಂಡಿ ಮಾಡುವ ಕಾರ್ಮಿಕರಾದ ತಮಗೆ ಇಷ್ಟು ಸೊಕ್ಕು ಇದ್ದರೆ ನಿಮ್ಮ ಜೀವ ನಮ್ಮ ಕೈಯಲ್ಲಿದೆ, ಯಾರೋ ಮಾತು ಕೇಳಿ ನಮಗೆ ಕೇಳುವಷ್ಟು ಶಕ್ತಿ ಬಂದಿದೆಯೇ ಎಂದು ಈ ಕುರಿತು ಬೆದರಿಕೆ ಹಾಕಿದ್ದಾರೆ.
ಜೊತೆಗೆ ನಿನ್ನೆ ಸಚಿವರೆದುರು ಅಳಲು ತೋಡಿಕೊಂಡ ಎರಡು ತಾಸಿನಲ್ಲಿ ನಮ್ಮ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡಿ ಆದೇಶ ಪ್ರತಿ ನೀಡಿ ಇವತ್ತೇ ಬಿಡುಗಡೆಗೊಳಿಸಬೇಕು ನಡಿರಿ ಯಾವುದಾದರೂ ಮಾತಾಡೋದಿಲ್ಲವೆಂದು ದರ್ಪ ತೋರುತ್ತಿದ್ದಾರೆ ಎಂದು ಧರಣಿನಿರತರು ಆರೋಪಿಸಿದ್ದಾರೆ.
ನಮ್ಮ ವೇತನದಲ್ಲಿ ಕಡಿತಗೊಳಿಸಿರುವ ಐಪಿಎಫ್, ಇಎಸ್ ಹಣ ಜಮೆ ಮಾಡುವಂತೆ ಕಳೆದ 7-8 ತಿಂಗಳಿಂದ ಮೌಖಿಕವಾಗಿ ಹೇಳಿದರೂ, ಮನವಿ ಪತ್ರ ಕೊಟ್ಟಿದ್ದರೂ, ಧರಣಿ ನಡೆಸಿದಾಗ ಎಲ್ಲರ ಎದುರೇ ಭರವಸೆ ನೀಡಿ ಮತ್ತೆ ತಡೆದು ಬಂದಿದ್ದು ನಮಗಾದ ಅನ್ಯಾಯ ಯಾ ಕಣ್ಣೀರು ಕೇಳುವ ಕಾರ್ಮಿಕರಿಗೆ ಎಂದು ಕಾರ್ಮಿಕರು ನೀಡಿದ ಘಟನೆ ನಡೆದಿದೆ.
ಜೊತೆಗೆ ಪರಿಸರ ಅಭಿಯಂತರರು , ಪೌರಾಯುಕ್ತರು ಕೂಡಲೇ ಸರಿ ಪಡಿಸುವೆ ಎಂದು ಭರವಸೆ ನೀಡಿ ನಮ್ಮಲ್ಲಿಯೇ ದೌರ್ಜನ್ಯ ಎಸಗುವ’ ಬೆದರಿಕೆಯೊಡ್ಡುವ ಕಾರ್ಯಾಲಯದ ಕಾರಣ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅಭಿವೃದ್ಧಿ ಯೋಜನಾ ನಿರ್ದೇಶಕರು ಆಗಮಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು.
ನ್ಯಾಯಯುತ ಬೇಡಿಕೆ ಇಟ್ಟಿರುವ ಕಾರ್ಮಿಕ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಇಬ್ಬರನ್ನು ಬೇರಡೆ ವರ್ಗಾವಣೆ ಮಾಡುವ ಮೂಲಕ ನಮ್ಮನ್ನು ಒಕ್ಮಲೆಬ್ಬಿಸುವ ಹುನ್ನಾರ ನಡೆಸಿದ್ದು, ಈ ಕೂಡಲೇ ವರ್ಗಾವಣೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಇಲ್ಲಿಯೇ ಯಥಾರೀತಿ ಮುಂದುವರೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಿರತರಾಗಿದ್ದಾರೆ. ಸ್ಥಳಕ್ಕೆ ಪೌರಾಯುಕ್ತ ರಮೇಶ ಬಡಿಗೇರ ಇದೀಗ ಭೇಟಿ ನೀಡಿದ್ದು ಧರಣಿನಿರತರ ಮಧ್ಯ ಮಾತಿನ ಚಕಮಕಿ ನಡೆಯುತ್ತಿದೆ.