ಕೋಟೆನಾಡಿನಲ್ಲಿ ನಾಗಾಸಾಧುಗಳು ನುಡಿದರು ಕರ್ನಾಟಕದ ರಾಜಕೀಯ ಭವಿಷ್ಯ!
ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಬಹುಮತ, ಬಿಎಸ್ ವೈ ಸಿಎಂ -ನಾಗಾಸಾಧು ಭವಿಷ್ಯ
ಇತ್ತೀಚಿನ ದಿನಗಳಲ್ಲಿ ನಾಗಾಸಾಧುಗಳು ಕರ್ನಾಟಕ ರಾಜ್ಯ ಸಂಚಾರದಲ್ಲಿ ತೊಡಗಿರುವುದು ಕಂಡು ಬರುತ್ತಿದೆ. ನಾಗಾಸಾಧುಗಳ ಗುಂಪು ಅನೇಕ ಊರುಗಳಲ್ಲಿ ದಿಡೀರನೆ ತಮ್ಮಿಷ್ಟದ ಮನೆಗಳಿಗೆ ಭೇಟಿ ನೀಡುತ್ತಿದೆ. ನಾಗಾಸಾಧುಗಳ ಬಗ್ಗೆ ಭಯ-ಭಕ್ತಿ ಇರುವ ಜನ ಅವರನ್ನು ಕರೆದು ಉಪಚರಿಸುತ್ತಿದ್ದಾರೆ. ಹಣ್ಣು-ಹಂಪಲು ನೀಡಿ ಗೌರವಿಸುತ್ತಿದ್ದಾರೆ. ಅಲ್ಲದೆ ತಮ್ಮ ಕಷ್ಟ ಸುಖಗಳನ್ನು ಹೇಳಿಕೊಂಡು ಭವಿಷ್ಯವನ್ನು ಕೇಳುತ್ತಿರುವುದು ಸಹಜವಾಗಿದೆ.
ಚಿತ್ರದುರ್ಗದ ಭರಮಸಾಗರ ಗ್ರಾಮದಲ್ಲಿರುವ ಬಿಜೆಪಿಯ ಯುವ ಮುಖಂಡ ಕಿರಣಕುಮಾರ್ ಎಂಬುವರ ಮನೆಗೆ ನಾಗಾಸಾಧುಗಳ ಗುಂಪೊಂದು ದಿಢೀರನೆ ಭೇಟಿ ನೀಡಿದೆ. ಉತ್ತರ ಪ್ರದೇಶದ ರಾಮೇಶ್ವರಕ್ಕೆ ಹೊರಟಿದ್ದೇವೆ ಮಾರ್ಗ ಮದ್ಯೆ ನಿಮ್ಮ ಮನೆಗೆ ಭೇಟಿ ನೀಡಬೇಕೆನ್ನಿಸಿತು ಬಂದಿದ್ದೇವೆ ಎಂದು ಹೇಳಿಕೊಂಡಿದೆ. ನಾಗಾಸಾಧುಗಳನ್ನು ಭಕ್ತಿಯಿಂದ ಕಂಡ ಕಿರಣ ಕುಮಾರ್ ಕುಟುಂಬ ಫಲ ಆಹಾರ ನೀಡಿ ಗೌರವಿಸಿದೆ.
ಇದೇ ಸಂದರ್ಭದಲ್ಲಿ ರಾಜ್ಯ ರಾಜಕೀಯದ ಬಗ್ಗೆ ಬಿಜೆಪಿ ಯುವ ಮುಖಂಡ ಕಿರಣ ಕುಮಾರ್ ನಾಗಾಸಾಧುಗಳನ್ನು ಕೇಳಿದಾಗ 2018ರ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಗಳಿಸಲಿದೆ. ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ನಾಗಾಸಾಧುಗಳು ಭವಿಷ್ಯ ನುಡಿದಿದ್ದಾರೆ. ಆದರೆ, ನಾಗಾಸಾಧುಗಳು ಮನೆಗೆ ಭೇಟಿ ನೀಡಿದ ವೇಳೆ ಹಣ ಮತ್ತಿನ್ನೇನೂ ಕೇಳಿಲಿಲ್ಲ. ಬದಲಾಗಿ ಎಲ್ಲರಿಗೂ ಶುಭಾಶೀರ್ವಾದಿಸಿ ಮುಂದೆ ತೆರಳಿದ್ದಾರೆ ಎಂದು ಕಿರಣ ತಿಳಿಸಿದ್ದಾರೆ.