ಕೃಷ್ಣಾ ನದಿ ಪಾತ್ರದ ಜನ – ಜಾನುವಾರು ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಡಿಸಿ ಸ್ನೇಹಲ್ ಸೂಚನೆ
ನಾರಾಯಣಪುರ ಡ್ಯಾಂ ಭರ್ತಿಗೆ ಕೇವಲ 5.59 TMC
ಕೃಷ್ಣಾ ನದಿ ಪಾತ್ರದ ಜನ – ಜಾನುವಾರು ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಡಿಸಿ ಸ್ನೇಹಲ್ ಸೂಚನೆ
ನಾರಾಯಣಪೂರ ಆಣೆಕಟ್ಟೆ ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನ-ಜಾನುವಾರುಗಳ ಸುರಕ್ಷತೆಗೆ ಮುಂಜಾಗೃತೆ ವಹಿಸಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚನೆ
ಯಾದಗಿರಿಃ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆ ಹೆಚ್ಚಾಗಿ ನಾರಾಯಣಪೂರ ಜಲಾಶಯಕ್ಕೆ ಒಳಹರಿವು ಬಂದಲ್ಲಿ ಕೃಷ್ಣಾ ನದಿಗೆ ಯಾವುದೇ ಕ್ಷಣದಲ್ಲಿ ನೀರು ಹರಿಬಿಡುವ ಸಾಧ್ಯತೆಯಿರುವ ಕಾರಣ ನಾರಾಯಣಪೂರ ಆಣೆಕಟ್ಟು ಕೆಳಭಾಗದ ಕೃಷ್ಣಾ ನದಿ ಪಾತ್ರದ ಗ್ರಾಮಗಳ ಜನರು ಜಾನುವಾರುಗಳೊಂದಿಗೆ ಸುರಕ್ಷತೆ ಮತ್ತು ಮುಂಜಾಗೃತೆ ವಹಿಸಲು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಸೂಚಿಸಿದ್ದಾರೆ.
2022 ರ ಜೂನ್ 22 ರ ಬುಧವಾರ ದಂದು ನಾರಾಯಣಪೂರ ಜಲಾಶಯದ ನೀರಿನ ಮಟ್ಟ 490.97 ಮೀ ಆಗಿದ್ದು, ಜಲಾಶಯದ ಪ್ರಸ್ತುತ ನೀರಿನ ಶೇಖರಣೆಯು 27.72 ಟಿ.ಎಂ.ಸಿ ಯಾಗಿರುತ್ತದೆ. ಜಲಾಶಯದ ಪೂರ್ಣ ಮಟ್ಟವು 492.25 ಮೀ ಆಗಿದ್ದು, ಜಲಾಶಯವು ಭರ್ತಿಯಾಗಲು ಕೇವಲ 5.59 ಟಿ.ಎಂ.ಸಿ ನೀರು ಬೇಕಾಗಿರುತ್ತದೆ.
ಭಾರತೀಯ ಹವಾಮಾನ ಇಲಾಖೆ, ಹವಾಮಾನ ವಿಜ್ಞಾನ ಕೇಂದ್ರ, ಬೆಂಗಳೂರು ಇವರು ಜೂನ್ 24 ರಿಂದ 26 ರ ವರೆಗೆ ಕರ್ನಾಟಕದ ಉತ್ತರ ಒಳನಾಡಿನ ಯಾದಗಿರಿ, ವಿಜಯಪುರ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿರುತ್ತಾರೆ.
ಹವಮಾನ ಇಲಾಖೆ, ಮುನ್ಸೂಚನೆಯಂತೆ ನಾರಾಯಣಪೂರ ಜಲಾಶಯಕ್ಕೆ ಒಳ ಹರಿವು ಬಂದಲ್ಲಿ ಕೃಷ್ಣಾ ನದಿಗೆ ನಾರಾಯಣಪೂರ ಆಣೆಕಟ್ಟೆಯಿಂದ ಯಾವುದೇ ಕ್ಷಣದಲ್ಲಿ ನೀರನ್ನು ಹರಿಬಿಡಬೇಕಾಗುತ್ತದೆ.
ಕಾರಣ ನಾರಾಯಣಪೂರ ಆಣೆಕಟ್ಟೆಯ ಕೆಳಭಾಗದ ಕೃಷ್ಣಾ ನದಿ ಪಾತ್ರದಲ್ಲಿರುವ ಗ್ರಾಮಗಳ ಜನರು ತಮ್ಮ ಜಾನುವಾರುಗಳ ಜೊತೆ ಸುರಕ್ಷತೆಯ ಬಗ್ಗೆ ಮುಂಜಾಗೃತೆ ವಹಿಸಲು ಮುನ್ಸೂಚನೆ ನೀಡಿದೆ. ಹಾಗೂ ಸಂಬಂಧಪಟ್ಟ ಇಲಾಖೆಗಳೂ ಗಮನವಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.