ಸಾಹಿತ್ಯ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಗಂಗಾವತಿ ಪ್ರಾಣೇಶ ಹೇಳಿದ್ದೇನು ಕೇಳಿ!
ಕೊಪ್ಪಳ : ಕರ್ನಾಟಕ ರಾಜ್ಯವನ್ನು ಕೇಕ್ ನಂತೆ ಕತ್ತರಿಸಿದರೆ ಎಲ್ಲರೂ ಒಂದೊಂದು ತುಂಡು ತೆಗೆದುಕೊಂಡು ಹೋಗಬೇಕಾಗುತ್ತದೆ. ಕನ್ನಡ ನಾಡನ್ನು ಕೇಕಿನಂತೆ ಕತ್ತರಿಸುವುದು ಸರಿಯಲ್ಲ. ಅಖಂಡ ಕರ್ನಾಟಕವಿದ್ದರೇನೆ ನಮ್ಮ ನಾಡು-ನುಡಿ ಚಂದ ಎಂದು ತಮ್ಮದೇ ಶೈಲಿಯಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹೇಳಿದ್ದಾರೆ.
ಗಂಗಾವತಿ ನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆ ವಹಿಸಿದ್ದ ಅವರು ಪ್ರತ್ಯೇಕ ರಾಜ್ಯದ ಕೂಗಿನ ಬದಲು ಉತ್ತರ ಕರ್ನಾಟಕ ಅಭಿವಧ್ಧಿ ಬಗ್ಗೆ ಗಮನಸೆಳೆಯುವ ಕೆಲಸ ಆಗಬೇಕು. ಇಲ್ಲಿನ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನಮುಟ್ಟುವಂತೆ ತಿಳಿಸೋಣ ಎಂದು ಪ್ರಾಣೇಶ್ ಹೇಳಿದರು.