ಪ್ರಮುಖ ಸುದ್ದಿಸಂಸ್ಕೃತಿ

ನಟರಾಜ ನೃತ್ಯ ಸಾಂಸ್ಕೃತಿಕ ಸಂಸ್ಥೆ ಉದ್ಘಾಟನೆ

ಸಂಘ ಸಂಸ್ಥೆಗಳು ಸಮಾಜಮುಖಿ ಚಿಂತನೆ ಹೊಂದಿರಲಿ-ಗದ್ದುಗೆ

ಶಹಾಪುರಃ ಸಂಘ ಸಂಸ್ಥೆಗಳು ಯುವ ಪ್ರತಿಭೆಗಳನ್ನು ಹೆಕ್ಕಿ ತರುವ ಕೆಲಸ ಮಾಡಬೇಕು. ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಸಮಾಜಮುಖಿ ಚಿಂತನೆ ಹೊಂದಿರಬೇಕು ಎಂದು ಕರವೇ ಉಕ ಅಧ್ಯಕ್ಷ ಶರಣು ಬಿ.ಗದ್ದುಗೆ ಹೇಳಿದರು.

ನಗರದ ಕಸಾಪ ಭವನದಲ್ಲಿ ನೂತನ ಶ್ರೀನಟರಾಜ ನೃತ್ಯ ಹಾಗೂ ಸಾಂಸ್ಕøತಿಕ ಸಂಸ್ಥೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಗರನಾಡು ಶರಣ ಸೋಫಿ ಸಂತರ ನಾಡು. ಅಪೂರ್ವ ಸಾಂಸ್ಕøತಿಕ ಸಂಪ್ರದಾಯ ಹೊಂದಿದ ನಾಡು. ಅತ್ಯದ್ಭುತ ಇತಿಹಾಸವು ಇಲ್ಲಿದೆ. ಜಾನಪದ ಸೊಗಡು, ನಾಟಕಗಳು ಇತರೆ ಸಾಂಸ್ಕøತಿ ಹೊಸರೂಪಕಗಳು ನಮ್ಮಲ್ಲಿವೆ. ಎಲೆಮರೆ ಕಾಯಿಯಂತೆ ಕಲಾವಿದರಿದ್ದು, ಅಂತವರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಅಲ್ಲದೆ ನಮ್ಮ ನೆಲದ ಸಂಸ್ಕøತಿ ಮಾಸದಂತೆ ಅದರ ಬೆಳವಣಿಗೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಪಿಐ ಚನ್ನಯ್ಯ ಹಿರೇಮಠ ಮಾತನಾಡಿ, ಮನುಷ್ಯ ಸಂಸಾರ ಜಂಜಾಟದಲ್ಲಿ ಮುಳುಗಿರಬಾರದು, ಆಗಾ ಅದರಿಂದ ಹೊರಬಂದು ಕಲೆ, ಸಾಹಿತ್ಯ ಸಂಗೀತ ಮತ್ತು ನೃತ್ಯದಂತಹ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂದರು.

ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಆದರ್ಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಿವರಾಜ ದೇಶಮುಖ, ನಟರಾಜ ನೃತ್ಯ ಮತ್ತು ಸಾಂಸ್ಕøತಿಕ ಸಂಸ್ಥೆ ಇದೀಗ ಜನ್ಮ ತಾಳಿದ್ದು, ಚಿಗರೊಡೆದು ಮುಂದೆ ಬಹುದೊಡ್ಡ ಹೆಮ್ಮರವಾಗಿ ಆಲದ ಮರದಂತೆ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಮೂಲಕ ನಾಡಿನ ಕೀರ್ತಿ ಹೆಚ್ಚಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.

ವೇದಿಕೆ ಮೇಲೆ ಗ್ರಾಪಂ ಮಾಜಿ ಅಧ್ಯಕ್ಷೆ ರಕ್ಷಿತಾ ಅರವಿಂದರಡ್ಡಿ, ಕಲಾವಿದೆ ಕವಿತಾ ಪತ್ತಾರ, ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಕೊಲ್ಲೂರ, ಸಂಸ್ಥೆಯ ಕಾರ್ಯದಶಿ ಸಂಗೀತಾ ಹೂಗಾರ ಉಪಸ್ಥಿತರಿದ್ದರು. ಪ್ರಾಸ್ತವಿಕವಾಗಿ ಸಂಸ್ಥೆ ಅಧ್ಯಕ್ಷೆ ಸುರೇಖಾ ಕುಂಬಾರ ಮಾತನಾಡಿದರು. ಬಸವರಾಜ ಸಿನ್ನೂರ ಅಧ್ಯಕ್ಷತೆವಹಿಸಿದ್ದರು.

ವೈಷ್ಣವಿ ಪತ್ತಾರ, ಮೇಘಾ ಕಟ್ಟಿಮನಿ, ಗಂಗಾಧರ ಹೊಟ್ಟಿ, ಸಂಜು ಬೊಮ್ಮಣ್ಣಿ, ಬಸವರಾಜ ಹಯ್ಯಾಳ ಅವರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಗಮನ ಸೆಳೆದವು. ದೇವಿಂದ್ರ ಅಂಗಡಿ ಸ್ವಾಗತಿಸಿದರು. ಸ್ವಾತಿ ಕಲಬುರ್ಗಿ ಪ್ರಾರ್ಥಿಸಿದರು. ಶರಣು ಯಡ್ರಾಮಿ ನಿರೂಪಿಸಿದರು. ಶಂಕರ ಹುಲ್ಕಲ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button