ಬೆಂಗಳೂರಃ ಅವಧಿಗೂ ಮುನ್ನವೇ ಬೇಸಿಗೆಯ ಬಿರು ಬಿಸಿ ಶುರುವಾಗಿದ್ದು, ಶಿವರಾತ್ರಿ ಹಬ್ಬ ಮುಗಿದ ಮರು ದಿನವೇ ಬೇಸಿಗೆ ಕಾಲಿಟ್ಟಂತಾಗಿದೆ ಎಂದು ಬಿಸಿಲುನಾಡು ಕಲ್ಯಾಣ ಕರ್ನಾಟಕ ಜನ ಉಶ್ಃ ಎಂದು ಉದ್ಘಾರ ಹೊರ ಬೀಳುತ್ತಿರುವದು ಕಾಣುತ್ತಿದೆ.
ಈ ನಡುವೆ ಹವಾಮಾನ ತಜ್ಞರು ಮಾಹಿತಿ ನೀಡಿದ್ದು, ಅವಧಿಗೂ ಮುನ್ನವೇ ಬೆಸಿಗೆ ಕಾಲಿಟ್ಟಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಾರ್ಚ್ 1 ರಿಂದ ಬೇಸಿಗೆ ಆರಂಭವಾಗುತ್ತದೆ. ಆದರೆ ಈ ಬಾರಿ ಫೆ. 24 ಕ್ಕೆ ಬೇಸಿಗೆ ಕಾಲಿಟ್ಟಂತಿದೆ ಎಂದು ಮಾಹಿತಿ ನೀಡಿದ ತಜ್ಞರು,
ಈ ಬಾರಿ ಬೇಸಿಗೆ ಝಳ ಸಾಕಷ್ಟು ಕಾಡಲಿದೆ. ತಾಪಮಾನ ದಿಢೀರ್ ಏರಿಕೆಯಾಗಲಿದ್ದು, ಜನ ತತ್ತರಿಸುವಂತಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಬಿಸಿಲ ತಾಪಮಾನ ಸೆಕೆ, ಝಳದಿಂದ ಬಚಾವಾಗಲು ಹಲವು ಟ್ರಿಕ್ ಬಳಕೆಗೂ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಆರಂಭವಾಗಲಿದೆ ಎಂದು ಮಾಹಿತಿ
ರಾಜ್ಯದಲ್ಲಿ ಸಾಮಾನ್ಯ ಮಾರ್ಚ್ 1ರ ಬದಲಿಗೆ ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭವಾಗಲಿದ್ದು, ತಾಪಮಾನ ದಿಢೀರ್ ಏರಿಕೆ ಕಾಣಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದು ಮುಂದಿನ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನದ ಮುನ್ಸೂಚನೆ ನೀಡಿದೆ. ಉತ್ತರ ಮತ್ತು ವಾಯುವ್ಯ ಮಾರುತಗಳು ಬೆಚ್ಚಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.