ಪ್ರಮುಖ ಸುದ್ದಿ
ಯಾದಗಿರಿಃ ಮತ ಎಣಿಕೆ ಕೇಂದ್ರಕ್ಕೆ ನಿಂಬೆಕಾಯಿ ಒಯ್ದ ಅಭ್ಯರ್ಥಿಗಳು, ಕಸಿದುಕೊಂಡ ಪೊಲೀಸರು
ಯಾದಗಿರಿಃ ಮತ ಎಣಿಕೆ ಕೇಂದ್ರದಲ್ಲಿ ನಿಂಬೆಕಾಯಿಗಳು ಪ್ರತ್ಯಕ್ಷ
ನಿಂಬೆ ಕಾಯಿ ಹಿಡಿದು ಎಣಿಕೆ ಕೇಂದ್ರಕ್ಕೆ ಬಂದ ಅಭ್ಯರ್ಥಿಗಳು
ಯಾದಗಿರಿಃ ಇಂದು ಬೆಳಗ್ಗೆ ಜಿಲ್ಲೆಯ ಶಹಾಪುರದಲ್ಲಿ ಗ್ರಾಪಂ ಮತ ಎಣಿಕೆ ಕೇಂದ್ರಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತ್ತು ಏಜೆಂಟರು ಕೈಯಲ್ಲಿ ನಿಂಬೆ ಕಾಯಿ ಹಿಡಿದು ಕೇಂದ್ರಕ್ಕೆ ಬರುತ್ತಿದ್ದರು.
ಆದರೆ ಪೊಲೀಸರು ನಿಂಬೆ ಕಾಯಿ ಕಸಿದುಕೊಂಡು ಅವರನ್ನು ಎಣಿಕೆ ಕೇಂದ್ರಕ್ಕೆ ಬಿಡುತ್ತಿರುವ ಪ್ರಸಂಗ ನಡೆಯಿತು.
ಹೌದು ಈ ಘಟನೆ ಶಹಾಪುರದ ಡಿಗ್ರಿ ಕಾಲೇಜಿನಲ್ಲಿ ನಡೆಯುತ್ತಿದ್ದ ಎಣಿಕೆ ಕೇಂದ್ರದಲ್ಲಿ ಕಂಡು ಬಂದಿತು.
ಕೆಲ ಏಜೆಂಟರು, ಅಭ್ಯರ್ಥಿಗಳು ತಮ್ಮ ಶರ್ಟ್, ಪ್ಯಾಂಟ್, ಪಾಕೆಟ್ ನಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ಒಳ ನುಗ್ಗಲು ಪ್ರಯತ್ನಿಸಿದರು.
ಪೊಲೀಸರು ಪರೀಶೀಲಿಸಿ ಅವರನ್ನು ತಡೆದು ನಿಂಬೆ ಕಾಯಿ ದೊರೆತಲ್ಲಿ ಅದನ್ನು ಕಸಿದು ಕೊಂಡು ಪಕ್ಕದಲ್ಲಿ ತೆಗೆದಿಟ್ಟಿರುವ ದೃಶ್ಯಗಳು ಗೋಚರಿಸಿದವು.