ಪ್ರಮುಖ ಸುದ್ದಿ

ಶಹಾಪುರಃ ಲಯನ್ಸ್ ಕ್ಲಬ್ 25 ನೇ ಅನುಸ್ಥಾಪನಾ ಸಮಾರಂಭ

ಸಮಾಜ ಸೇವೆ ಮೂಲಕ ಕ್ಲಬ್ ಹೆಸರಾಗಿದೆ-ಹಣಮಂತ್ರಾವ್

ಯಾದಗಿರಿ, ಶಹಾಪುರಃ ಲಯನ್ಸ್ ಕ್ಲಬ್ ಸದಾ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ಲಯನ್ಸ್ ಕ್ಲಬ್ ಹೆಸರಾಗಿದೆ. ಅದರ ಮುಂದುವರೆದ ಭಾಗವನ್ನು ನೂತನ ಪದಾಧಿಕಾರಿಗಳು ಜವಬ್ದಾರಿಯುತವಾಗಿ ನಡೆಸಿಕೊಂಡು ಹೋಗಬೇಕೆಂದು ಜಿಲ್ಲಾ ಗೌರವಾನ್ವಿತ ಲಯನ್ ಹಣಮಂತರಾವ್ ತಿಳಿಸಿದರು.

ನಗರದ ಮೋಟಗಿ ರೆಸಿಡೆನ್ಸಿಯಲ್ಲಿರುವ ಶ್ರೀಮಂಜುನಾಥ ಸಭಾಂಗಣದಲ್ಲಿ ನಡೆದ ಲಯನ್ಸ್ ಕ್ಲಬ್‍ನ 25 ನೇ ಅನುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಹಾಪುರ ಲಯನ್ಸ್ ಕ್ಲಬ್ ಶಾಖೆ ನಿರಂತರವಾಗಿ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಕ್ಲಬ್‍ನ ಪ್ರಮುಖ ಉದ್ದೇಶ ಗುರಿಗಳನ್ನು ಅರಿತು ನಿಯಮನುಸಾರವಾಗಿ ಇದನ್ನು ನೂತನ ಪದಾಧಿಕಾರಿಗಳು ಮುಂದುವರೆಸಿಕೊಂಡು ಹೋಗಬೇಕು.

ಪರಿಸರ ಸಂರಕ್ಷಣೆ, ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಸೇರಿದಂತೆ ಸಾಕಷ್ಟಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಂಡು ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಕುರಿತು ಹಲವರನ್ನು ಸನ್ಮಾನಿಸಿ ಗೌರವಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಿದ್ದಾರೆ.

ಬೇರೆ ಕಡೆ ಲಯನ್ಸ್ ಕ್ಲಬ್ ದೊಡ್ಡ ಗುಣಮಟ್ಟದ ಸ್ವಂತ ಆಸ್ಪತ್ರೆಗಳನ್ನು ತೆರೆದು ಬಡವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಇತರೆ ಆರೋಗ್ಯ ತಪಾಸಣೆ ಕಾರ್ಯಗಳನ್ನು ಮಾಡುತ್ತಿದೆ. ಅದರಂತೆ ಇಲ್ಲಿಯೂ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಮಾತನಾಡಿ, ಲಯನ್ಸ್ ಕ್ಲಬ್ ಕಾರ್ಯವೈಖರಿಯಿಂದ ಸಾಮಾಜಿಕವಾಗಿ ಅನುಕೂಲವಿದೆ. ಸಾಕಷ್ಟು ಜನಪರ ಉಪಯೋಗವಾದಂತ ಕಾರ್ಯಕ್ರಮಗಳನ್ನು ಅವರು ಮಾಡಿದ್ದಾರೆ.

ಹೀಗಾಗಿ ಕ್ಲಬ್ ಕಟ್ಟಡ ನಿರ್ಮಾಣಕ್ಕೆ ನಗರಸಭೆಯಿಂದ ಪಟ್ಟಣದಲ್ಲಿ ಉತ್ತಮ ನಿವೇಶನ ನೀಡುವಂತೆ ಮನವಿ ಮಾಡಲಾಗಿತ್ತು. ಪ್ರಸ್ತುತ ಉತ್ತಮ ಮಾರ್ಕೇಟ್ ಪ್ರದೇಶದಲ್ಲಿಯೇ ನಿವೇಶನ ಮಂಜೂರಿ ಮಾಡಲಾಗಿದೆ ಎಂದು ತಿಳಿಸಿದರು.

ಡಾ.ವೆಂಕಟೇಶ ಬೈರಾವಡಗಿ ಮತ್ತು ಪತ್ರಕರ್ತ ಮಲ್ಲಿಕಾರ್ಜುನ ಮುದನೂರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೂತನ ಕ್ಲಬ್ ಅಧ್ಯಕ್ಷರಾದ ವಿಜಯಕುಮಾರ ಹೊನ್ಕಲ್ ಹಾಗೂ ಕಾರ್ಯದರ್ಶಿ ಬ್ರಹ್ಮಾಯಿ ಇನ್ನಾಮುರಿ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಮುಖರಾದ ಅಂಬಾರಾವ್ ಪಾಟೀಲ್, ಅಮೃತರಾವ್, ನಿಕಟಪೂರ್ವ ಅಧ್ಯಕ್ಷ ಅವಿನಾಶ ಸಿನ್ನೂರ, ಶಿವಕುಮಾರ ಆದೋನಿ, ರಾಹುಲ್ ಕಲಬುರ್ಗಿ ಮತ್ತು ಹಿರಿಯರಾದ ಗುರುಲಿಂಗಯ್ಯ ಸಾಲಿಮಠ ಉಪಸ್ಥಿತರಿದ್ದರು.
ಡಾ.ಜಗಧೀಶ ಉಪ್ಪಿನ್, ಬಸವರಾಜ ಹಿರೇಮಠ, ಶಂಕರಗೌಡ ಯಾಳವಾರ, ಗುರುಮೂರ್ತಿ ನಾಯಿನೇಗಿಲಿ, ಜಗಧೀಶ ಹೊನ್ಕಲ್, ಸಾಯಬಣ್ಣ ಪುರ್ಲೆ, ಬಸವರಾಜ ಕಡಗಂಚಿ, ಗುರು ಮಣಿಕಂಠ, ಅರವಿಂದ ಉಪ್ಪಿನ್ ಸೇರಿದಂತೆ ಇತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button