ಶಹಾಪುರಃ ಜೂ.6 ರಂದು ಸಚಿವ ದರ್ಶನಾಪುರರಿಂದ ನೂತನ ದೇವಮಂದಿರ ಉದ್ಘಾಟನೆ
ಅಯ್ಯಪ್ಪಸ್ವಾಮಿ, ಗಣೇಶ, ಷಣ್ಮುಖಸ್ವಾಮಿ ನೂತನ ಮಂದಿರ ಉದ್ಘಾಟನೆ
ಅಯ್ಯಪ್ಪಸ್ವಾಮಿ, ಗಣೇಶ, ಷಣ್ಮುಖಸ್ವಾಮಿ ದೇವಸ್ಥಾನ ಉದ್ಘಾಟನೆ
ಜೂ.6,7,8 ವಿವಿಧ ಧಾರ್ಮಿಕ ಕಾರ್ಯಕ್ರಮ ಸರ್ವರಿಗೂ ಆಹ್ವಾನ
ಸಚಿವ ದರ್ಶನಾಪುರ ಅಮೃತ ಹಸ್ತದಿಂದ ಉದ್ಘಾಟನೆ
ಶಹಾಪುರಃ ಬಾಪುಗೌಡ ನಗರದ ನೂತನ ಶ್ರೀಅಯ್ಯಪ್ಪಸ್ವಾಮಿ, ಶ್ರೀಗಣೇಶ ಹಾಗೂ ಶ್ರೀಷಣ್ಮುಖಸ್ವಾಮಿ ನೂತನ ದೇವಸ್ಥಾನವನ್ನು ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಉದ್ಘಾಟಿಸಲಿದ್ದು, ಸರ್ವ ಭಕ್ತರು ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗಬೇಕೆಂದು ಕೃಷ್ಣಮೂರ್ತಿ ಗುರುಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೂ,೬ ರಂದು ನೂತನ ದೇವಾಲಯ ಉದ್ಘಾಟನೆಗೊಳ್ಳಲಿದ್ದು, ಜೂನ್ 6, 7, 8 ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಕಲ ಕಾರ್ಯಕ್ರಮಗಳ ಸಾನ್ನಿಧ್ಯವನ್ನು ಏಕದಂಡಿಗಿ ಮಠದ ಶ್ರೀಕಾಳಹಸ್ತೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಅಯ್ಯಪ್ಪಸ್ವಾಮಿ, ಗಣೇಶ, ಷಣ್ಮುಖಸ್ವಾಮಿ ಅಲ್ಲದೆ ಶಿವಪಾರ್ವತಿ, ವೆಂಕಟೇಶ್ವರ, ನಂದಿಈಶ್ವರ, ನಾಗದೇವತೆ, ಮಾಳಿಗೆ ಪುರತಮ್ಮ, ಹಾಗೂ ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಳು ಜರುಗಲಿವೆ.
ಜೂನ್ 6 ರಂದು ಬೆಳಗ್ಗೆ 8 ಗಂಟೆಗೆ ಧ್ವಜಾರೋಹಣ, ಗಂಗಾಪೂಜೆ, ಗೋಪೂಜೆ ಯಾಗಶಾಲೆ ಪ್ರವೇಶ, ಗುರುಪೂಜೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾವಾಚನ ಮತ್ತು ಆಚಾರ್ಯವರ್ಣವ ನಂತರ ನವಗ್ರಹ ಪೂಜೆ,ದೇವತಾ ಅಧಿದೇವತಾ ಪ್ರತ್ಯಾಧಿದೇವತಾ ಪೂಜೆ, ಅಗ್ನಿ ಪ್ರತಿಷ್ಠಾಪನಾ, ಗಣಪತಿ ಹೋಮ, ವಾಸ್ತು ಹೋಮ ಮತ್ತು ನವಗ್ರಹ ಹೋಮ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮದ್ಯಾಹ್ನ 4 ಗಂಟೆಗೆ ದೇವತೆಗಳಿಗೆ ಜಲಾಧಿವಾಸ, ಕ್ಷೀರಾಧಿವಾಸ, ಪುಳ್ಪಾಧಿವಾಸ, ಧಾನ್ಯಾಧಿವಾಸ ನಂತರ ಸಪ್ತಶತಿ ಪರಾಯಣ ಹೋಮ ರಾತ್ರಿ ಶಯ್ಯಾಧಿವಾಸ ಹಾಗೂ ಮಹಾ ಮಂಗಳಾರತಿ ನಡೆಯಲಿದೆ. ನಂತರ ಪೂಜ್ಯ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.
8 ನೇ ತಾರೀಕಿನಂದ ಚಂಡಿ ಜೋಮ ನಡೆಯಲಿದ್ದು, ನಂತರ ಧರ್ಮಸಭೆ ಜರುಗಲಿದೆ. ಹೀಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿದ್ದು, ಭಕ್ತಾಧಿಗಳು ಭಾಗವಹಿಸಿ ಶ್ರೀದೇವರ ಕೃಪೆಗೆ ಪಾತ್ರರಾಗುವಂತೆ ಗುರುಸ್ವಾಮಿ ತಿಳಿಸಿದ್ದಾರೆ.
———————-