ಆನ್‌ಲೈನ್ ಪ್ರೀತಿ : ಮದುವೆಯಾದ 12 ದಿನಕ್ಕೆ ತಿಳಿಯಿತು ಆಕೆ ಅವಳಲ್ಲ ಅವನು!
ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾಗಿದ್ದ ಪ್ರಿಯತಮೆಯನ್ನು ವಿವಾಹವಾದ 12 ದಿನಕ್ಕೆ ತಾನು ಮದುವೆಯಾಗಿರುವುದು ಅವಳನಲ್ಲ ಅವನನ್ನು ಎಂದು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, 26 ವರ್ಷದ ಪತಿ ತನ್ನ ಪತ್ನಿ ಅದಿಂಡಾ ಕನ್ಜಾ ಅವರ ಬಗ್ಗೆ ವಿವಾಹದ ಹನ್ನೆರಡು ದಿನಗಳ ನಂತರ ಮಹಿಳೆಯಲ್ಲ ಎಂಬುದನ್ನು ತಿಳಿದುಕೊಂಡರು.
ಪರಸ್ಪರ ಮಾತನಾಡಲು ಆರಂಭಿಸಿ ಆತ್ಮೀಯರಾದ ನಂತರ ಭೇಟಿಯಾಗಲು ನಿರ್ಧರಿಸಿದರು. ಆದರೆ ಅದಿಂಡಾ ಭೇಟಿಯಾದಾಗಲ್ಲೆಲ್ಲಾ ಸಂಪೂರ್ಣ ಮುಖವನ್ನು ಮುಚ್ಚುವ ಸಾಂಪ್ರದಾಯಿಕ ಮುಸ್ಲಿಂ ಉಡುಗೆಯನ್ನು ಯಾವಾಗಲೂ ಧರಿಸುತ್ತಿದ್ದರು ಎಂದು ಎಕೆ ಹೇಳಿದರು. ನಂತರ ಈತ ಮುಖ ತೋರಿಸುವಂತೆ ಒತ್ತಾಯಿಸಲೂ ಇಲ್ಲ. ನಂತರ ಒಂದು ಮನೆಯಲ್ಲೇ ಸಾಧರಣವಾಗಿ ಮದುವೆ ಮಾಡಿಕೊಂಡರು. ಆಕೆ ತನಗೆ ಯಾರು ಇಲ್ಲ ಎಂದು ತಿಳಿಸಿದ್ದಳು. ವಿವಾಹವಾದ ಬಳಿಕ ಸಂಬಂಧಿಕರೊಂದಿಗೆ ಬೆರೆಯಲು ಹಿಂಜರಿಯುತ್ತಿದ್ದಳು ಹಾಗೂ ಎಕೆಯೊಂದಿಗೆ ಲೈಂಗಿಕ ಸಂಬಂಧವನ್ನು ತಪ್ಪಿಸಲು ನೆಪವನ್ನು ಹುಡುಕುತ್ತಿದ್ದಳು. ಋತುಚಕ್ರದಿಂದ ಅನಾರೋಗ್ಯದ ಕಾರಣವನ್ನು ಹೇಳುತ್ತಿದ್ದಳು. ಹನ್ನೆರಡು ದಿನಗಳ ಅನುಮಾನಾಸ್ಪದ ವರ್ತನೆಯ ನಂತರ, ಎಕೆ ತನ್ನ ಹೆಂಡತಿಯನ್ನು ತನಿಖೆ ಮಾಡಲು ನಿರ್ಧರಿಸಿದರು. ಕೊನೆಗೆ ಆಕೆಗೆ ತಂದೆ ತಾಯಿ ಇರುವುದು ತಿಳಿದು ಬಂತು ನಂತರ ಅದಿಂಡಾ ವಾಸ್ತವವಾಗಿ 2020ರಿಂದ ಕ್ರಾಸ್ ಡ್ರೆಸ್ಸಿಂಗ್ ಮಾಡುತ್ತಿರುವ ವ್ಯಕ್ತಿ ಎಂದು ಕಂಡುಹಿಡಿದರು. ಪೊಲೀಸ್ ತನಿಖೆಯ ಸಂದರ್ಭದಲ್ಲಿ, ಅದಿಂಡಾ ಎಕೆಯ ಕುಟುಂಬದ ಆಸ್ತಿಯನ್ನು ಕದಿಯಲು ಎಕೆಯನ್ನು ವಿವಾಹವಾದರು ಎಂದು ಬಹಿರಂಗಪಡಿಸಿದರು. ಆದರೆ ಮದುವೆ ಫೋಟೋಗಳಲ್ಲಿ ಹುಡುಗಿಯಂತೆ ಕಾಣುತ್ತಾನೆ ಅಲ್ಲದೆ ಧ್ವನಿ ಕೂಡ ಸೌಮ್ಯವಾಗಿತ್ತು. ಇದೀಗ ಆತನನ್ನು ಪೊಲೀಸ್ ಬಂಧಿಸಿದ್ದು 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.