ಸಂಶಯಕ್ಕೆ ಎಡೆ ಮಾಡಿದ ಪರಮೇಶ್ವರ ಮತ್ತು ರೇಣುಕಾಚಾರ್ಯ ಹೇಳಿಕೆ
ರಮೇಶನ ಎಲ್ಲಿಗೆ ಕರೆದುಕೊಂಡು ಹೋಗಿದ್ರು ಗೊತ್ತಿಲ್ಲ-ಪರಮೇಶ್ವರ
ವಿವಿ ಡೆಸ್ಕ್ಃ ತಮ್ಮ ಪಿಎ ರಮೇಶನ ಆತ್ಮಹತ್ಯೆ ಪ್ರಕರಣ ಕುರಿತಂತೆ ಡಾ.ಜಿ.ಪರಮೇಶ್ವರರು ರಮೇಶನನ್ನು ಬೆಳಗ್ಗೆ ಕರೆದುಕೊಂಡು ಹೋಗಿದ್ದರೂ ಸಂಜೆ ಮತ್ತೆ ವಾಪಸ್ ಬಂದ್ರೂ ಆದರೆ ರಮೇಶನನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದರೂ ವಿಚಾರಣೆಗೆ ಅಥವಾ ಅವರ ಮನೆಗೋ ಏನು ಗೊತ್ತಿಲ್ಲ ಎಂದು ಪರಮೇಶ್ವರ ಅವರು ಹೇಳಿಕೆ ನೀಡಿದ್ದಾರೆ.
ರಮೇಶ ಸಾವಿಗೆ ಬೇರಯದ್ದೆ ಟ್ವಿಸ್ಟ್ ಹುಟ್ಟಿಕೊಂಡಿರುವ ಕಾರಣ, ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ರಮೇಶನನ್ನು ಮುಗಿಸಲಾಗಿದೆ ಅದು ಆತ್ಮಹತ್ಯೆವಲ್ಲ ಎಂಬ ಹೇಳಿಕೆ ನೀಡುವ ಮೂಲಕ ಇಡಿ ರಾಜಕೀಯ ವಲಯದಲ್ಲಿ ತಲ್ಲಣ ಉಂಟಾಗಿದೆ.
ಹೀಗಾಗಿ ಜಿ.ಪರಮೇಶ್ವರರು ತಮ್ಮ ಪಿಎ ರಮೇಶ ಸಾವಿನ ಬಗ್ಗೆ ಕುರಿತು ಉತ್ತರಿಸಬೇಕಿದೆ. ಆ ನಿಟ್ಟಿನಲ್ಲಿ ಮಾತನಾಡಿದ ಪರಮೇಶ್ವರ ಅವರು, ಐಟಿ ದಾಳಿ ವೇಳೆ ನಮ್ಮನೆಯಲ್ಲಿಯೇ ರಮೇಶ ಇದ್ದ, ಆ ಮೇಲೆ ಅವನನ್ನು ಹೊರಗಡೆ ಕರೆದುಕೊಂಡು ಹೋದ್ರೂ ಮತ್ತೆ ಸಂಜೆ ಬಂದ್ರೂ ಈ ಹೇಳಿಕೆ ಜನರಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರೆ ತಪ್ಪಾಗಲಾರದು. ಒಟ್ಟಾರೆ ರಮೇಶನ ಆತ್ಮಹತ್ಯೆ ಪ್ರಕರಣ ತೀವ್ರ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ.