ಅಂಕಣಪ್ರಮುಖ ಸುದ್ದಿ

ಕುಟುಂಬ ರಕ್ಷಣೆಯಂತೆ ಪರಿಸರ ಸಂರಕ್ಷಣೆಗೂ ಕಾಳಜಿ ಇರಲಿ

ಪರಿಸರ 'ದಿನ' ಆಚರಣೆಗೆ ಮಾತ್ರ ಸೀಮಿತವಾಗದಿರಲಿ.!

ಪರಿಸರ ‘ದಿನ‘ ಆಚರಣೆ ಗೆ ಮಾತ್ರ ಸಿಮಿತವಾಗದಿರಲಿ.!

ಜೂನ್ ೦೫ ರಂದು ನಾವು ಎಲ್ಲಾ ಕಡೆ ಪರಿಸರ ದಿನಾಚರಣೆ ಎಂದು ಸಸಿಗಳನ್ನು ನೆಡುವ ಮೂಲಕ ಆಚರಣೆ ಮಾಡುತ್ತೇವೆ. ಈ ಸಂದರ್ಭದಲ್ಲಿ ಪರಿಸರ ಕಾಳಜಿ, ಜವಾಬ್ದಾರಿಯ ಕುರಿತು ಸಹ ಮಾತನಾಡಿ ಮರೆತು ಬಿಡುತ್ತೆವೆ ಆದರೆ ಇದು ಒಂದು ದಿನ ಕಾರ್ಯಕ್ರಮದ ಉದ್ದೇಶ ನಾ ಅಂತಾ ನಾವು ಆತ್ಮಅಲೋಕನ ಮಾಡಿಕೊಳ್ಳಬೇಕು.

ಕಳೆದ ಒಂದು ದಶಕಗಳಲ್ಲಿ ಅಭಿವೃದ್ದಿ, ಜೀವನ ಶೈಲಿ, ಇತರೆ ಕಾರಣಗಳನ್ನು ಇಟ್ಟುಕೊಂಡು ಪರಿಸರ ಎಂದು ಗುರುತಿಸಿಕೊಳ್ಳುವ ಗಿಡ- ಮರಗಳುನ್ನು ಕಡೆದು ಜನವಸಿತಿಗೆ ಅನುಕೂಲಮಾಡಿಕೊಂಡು ಕಾಡು- ನಾಡಿನ ಪ್ರದೇಶಗಳನ್ನು ನಾಶ ಮಾಡುತ್ತಾ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ. ಇದು ಒಂದು ಪ್ರಮಾದದ ವಿಷಯ ಈ ಪ್ರಮಾದವನ್ನು ಸರಿದೂಗಿಸಬೇಕು ಎಂದು ಸರಕಾರ, ಇಲಾಖೆ, ಸ್ಥಳೀಯ ಸಂಸ್ಥೆ, ಶಾಲಾ- ಕಾಲೇಜು ವಿಧ್ಯಾರ್ಥಿಗಳಲ್ಲಿ ವಿಚಾರ ಸಂಕೀರ್ಣ, ಜಾಗೃತಿ ಶಿಬಿರ, ಸಂವಾದ ಸಭೆಗಳನ್ನು ಏರ್ಪಡಿಸಿ ಸಸಿನೆಟ್ಟು ನೀರು ಎರೆಯುವಂತಹ ಕಾರ್ಯವನ್ನು ನಾವು ಮಾಡುತ್ತಿದ್ದೆವೆ.

ಪರಿಸರ ಅಂದ ತಕ್ಷಣ ಅರಣ್ಯ ಇಲಾಖೆಯವರನ್ನು ಗುರುತಿಸಿಕೊಂಡು ಅರಣ್ಯ ಪ್ರದೇಶವನ್ನು ಸಂರಕ್ಷಿಸಿ ಎಂದು ಹಾಗೂ ವಾರ್ಷಿಕ ಗಿಡ- ಮರಗಳನ್ನು ನಡುವ ಗುರಿಯನ್ನು ಇರುವಂತೆ ಸಾಧಿಸುವ ಎಲ್ಲಾ ಕ್ರಮಗಳನ್ನು ಅನುಸರಿಸುಲಾಗುತ್ತಿದೆ.

ಹೆಚ್ಚು ಅರ್ಥಾಮಿಡಿಕೊಳ್ಳಬೇಕಾದ ವಿಷಯ ಏನು ಅಂದ್ರೆ ಈ ಆಚರಣೆಯಲ್ಲಿ ಬರಿ ಚುನಾತಿ ಪ್ರತಿನಿದಿ, ಇಲಾಖೆಯ ಅಧಿಕಾರಿ/ ಸಿಬ್ಬಂದಿ, ಕೆಲವೇ ಕೆಲವು ಜನರು ಸೇರಿ ಒಂದು ದಿನದ ಆಚರಣೆಯ ಕಾರ್ಯಕ್ರಮವನ್ನು ವಿಜ್ಭಂಬಣೆಯಿಂದ ಆಚರಣೆಯ ಮಾಡಿದರೆ ಪರಿಸರ ದಿನಾಚರಣೆ ಉದ್ದೇಶ ಇಡೇರಿತೇ? ಅಥವಾ ಅದರ ಉದ್ದೇಶ ಅರ್ಥಮಾಡಿಕೊಂಡು ಎಷ್ಠು ಜನರು ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ಪಾಲ್ಗೊಳ್ಖುತ್ತಾರೆ ಎಂಬುದನ್ನು ಕಂಡುಕೊಳ್ಳಬೇಕಿದೆ.

ಪ್ರತಿಯೊಬ್ಬ ಪ್ರಜೆಯು ಪರಿಸರ ದಿನಾಚರಣೆಯ ದಿನದಂದು ಶಪತ ಮಾಡಿಕೊಂಡು / ದ್ಯಾನದಲ್ಲಿಟ್ಟುಕೊಂಡು ಪರಿಸರ ಸ್ನೇಹಿ ಚಟುವಟಿಕೆಯಲ್ಲಿ ಭಾಗಿಯಾಗಿ ಪರಿಸರ ಉಳಿಸುವ ಕಾರ್ಯಗಳನ್ನು/ ಚಟುವಟಿಕೆಗಳನ್ನು, ಕೈಲಾದ ಸಣ್ಣ ಸಹಾಯವನ್ನು ನಾವು ಮಾಡಿ ನಮ್ಮ ಸುತ್ತಮುತ್ತಲಿನ ಜನರಲ್ಲಿ ಪರಿಸರ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸಿ ದಿನಾಚರಣೆಯ ಮಹತ್ವ ತಿಳಿಸಿ, ನಿರಂತರವಾಗಿ ಪರಿಸರದ ಉಳಿವಿಕೆಗೆ ಪ್ರತಿಯೊಬ್ಬ ಪ್ರಜೆಯಿಂದ ಕನಿಷ್ಠ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಪರಿಸರ ಸಂರಕ್ಷಣೆಯ ಚಟುವಟಿಕೆಯಲ್ಲಿ ಭಾಗಿಯಾಗಬೇಕಾಗಿದೆ.

ಪರಿಸರ ದಿನಾಚರಣೆಯಂದು ನಾವು ಕೇವಲ ಗಿಡ ನೆಟ್ಟರೆ ಪರಿಸರ ದಿನಾಚರಣೆಗೆ ಅರ್ಥಬಂದಿತೇ ? ಇಲ್ಲಾ, ಪರಿಸರ ಎಷ್ಠು ವಿಶಾಲವಾಗಿದೇಯೊ ಪರಿಸರ ಸಂರಕ್ಷಣೆಯ ಜವಾಬ್ದಾರಿಯು ಅಷ್ಟು ವಿಶಾಲವಾದ ಪ್ರಯತ್ನದ ಮೂಲಕ ಹಾಗೂ ವಿಸ್ತೃತ ಚಟುವಟಿಕೆ/ ಕಾರ್ಯಕ್ರಮಗಳನ್ನು ಹಾಕಿಕೊಂಡು ಅದನ್ನು ಅನುಸರಿಸುವ ಮೂಲಕ ಪ್ರತಿಯೊಬ್ಬರು ಪ್ರತಿ ದಿನವು ಪರಿಸರ ಸಂರಕ್ಷಣೆಯ ಜಪ ಮಾಡಬೇಕಾಗಿದೆ.

ಅಂದ ಹಾಗೆ ಅರಣ್ಯ ಇಲಾಖೆಯು ಪರಿಸರ/ ಅರಣ್ಯ ಉಳಿಸುವಿಕೆಗಾಗಿ , ಮನುಷ್ಯ ಜೀವಿಸಲಿಕ್ಕೆ, ಆರೋಗ್ಯ ಪರಿಸರ ವೃದ್ಧಿಸಲಿಕ್ಕೆ ಸ್ವಾತಂತ್ರ್ಯ ಅಮೃತ ವರ್ಷಾಚರಣೆಯಲ್ಲಿ *ಮಿಷನ್ ಲೈಫ್* ಅಭಿಯಾನದ ಅಡಿ *೭೫ ಉಪಕ್ರಮಗಳನ್ನು* ನಾವು ಅಳವಡಿಸಿಕೊಂಡು, ಪರಿಸರ ಸಮತೋಲ ಸ್ಥಿತಿಗೆ ತರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಜಾಗೃತಿ ಅಭಿಯಾನಗಳು/ ಕಾರ್ಯಚಟುವಟಿಕೆಗಳು ನಡೆಯುತ್ತಿವೆ.

ಈ ೭೫ ಉಪಕ್ರಮಗಳನ್ನು ಯಾವ- ಯಾವ ವರ್ಗದಡಿ ಇದ್ದಾವೆ, ಯಾವಗಿಂದ, ಯಾರಿಂದ ಮಾಡಬೇಕು, ಜನರು ಈ ಅಭಿಯಾನದಲ್ಲಿ ಭಾಗವಹಿಸಬೇಕಾದ್ರೆ ಕಾರ್ಯಕ್ರಮದ ವೇದಿಕೆ ಬೇಕಾ? ಎಂಬ ವಿಚಾರ ಬರಬಹುದು ಆದರೆ ಇದು ಆಗಲ್ಲಾ,

*ಮಿಷನ್ ಲೈಫ್ ೨೦೨೨-೨೩* ಅಭಿಯಾನದ ಅಡಿ ನಾವು ಅಳವಡಿಸಿಕೊಳ್ಳಬೇಕಾಗಿರುವ *೭೫* ಉಪಕ್ರಮಗಳನ್ನು ೭ ವರ್ಗಗಳಲ್ಲಿ ತಿಳಿಸಲಾಗಿದೆ.

೧) ಶಕ್ತಿಯನ್ನು ಉಳಿತಾಯ ಮಾಡುವುದು. ( Energey Saved
೨) ನೀರನ್ನು ಉಳಿತಾಯ ಮಾಡುವುದು ( Water Saved)

3) ಏಕ ಬಳಕೆಯ ಪ್ಲಾಸ್ಟಿಕನ್ನು ಕಡಿಮೆ ಮಾಡುತ್ತಾ ಅದನ್ನು ತ್ಯೇಜಿಸುವುದು.( Single use plastic Reduced)

4) ಸುಸ್ಥಿರತೆಯ ಆಹಾರದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ( Sastanebal food system Adopted)

5) ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡುವುದು ( waste Reduced)

6) ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ( Health lifestyle Adopted)

7) ಇ- ತ್ಯಾಜ್ಯ ಕಡಿಮೆ ಮಾಡುವುದು ( e- waste Reduced)

ಈ ಎಲ್ಲಾ ವರ್ಗಗಳ ೭೫ ಅಂಶಗಳನ್ನು ಪ್ರತಿಯೊಬ್ಬರು ಅಳವಡಿಸಿ ಏನನ್ನು ಉಳಿತಾಯ ಮಾಡುವುದು, ಯಾವುದನ್ನು ತ್ಯಜಿಸಬೇಕಾಗಿದೆ ಅದನ್ನು ತ್ಯಜಿಸುವುದು
ಪರಿಸರ ಸ್ನೇಹಿ ಪದ್ದತಿಗಳನ್ನು ಅಳವಡಿಸಿಕೊಳ್ಳವುದು, ಬಿಡಲೇಬೇಕಾದ ಪದ್ದತಿಗಳನ್ನು ಬಿಟ್ಟು ಪರಿಸರ ಉಳಿವಿಗೆ ನಮ್ಮ ಪ್ರಯತ್ನ ಒಂದು ನಿರ್ದಿಷ್ಠ ಗುರಿ ಇಟ್ಟುಕೊಂಡು ಪರಿಸರ ದಿನಚರಣೆಯ  ಆಚರಿಸಬೇಕಿದೆ.

ಈ ೭ ವರ್ಗದಡಿ ಉಲ್ಲೇಖಿಸಿರುವ ಅಂಶಗಳನ್ನು ೨-೩ ವರ್ಗಗಳಲ್ಲಿ ಅಂಶಗಳನ್ನು ಗಂಬೀರವಾಗಿ ಪರಿಗಣಿಸಿ ಆದ್ಯತೆಯ ಮೇಲೆ ಅಳವಡಿಸಿಕೊಳ್ಳಬೇಕಾಗಿದೆ.

▪️ನೀರನ್ನು ಉಳಿತಾಯಿಸುವುಕೆ:

ನೀರಿನ ಜಲಮೂಲಗಳನ್ನು ಒಂದು ಕಡೆಯಿಂದ ಸಂರಕ್ಷಿಸಬೇಕು,
ನೀರಿನನ್ನು ವ್ಯಯಿಸುವ ಮೂಲಗಳಿಂದ ಕಡಿಮೇ ಮಾಡಬೇಕಾಗಿದೆ.

ನೀರಿನ ಮೂಲಗಳಾದ ನದಿ,ಕರೆ, ಭಾವಿ, ಹಳ- ಕೊಳ್ಳಗಳನ್ನು ಪುನಶ್ಚೇತವಾಗುವ ಕಾರ್ಯಗಳನ್ನು ಮಾಡಬೇಕು ಮತ್ತು ಈ ಮೂಲಗಳಲ್ಲಿ ತ್ಯಾಜ್ಯವನ್ನು ಹಾಕುವುದರಿಂದ ಇತರೆ ಗಲೀಜ‌ ನೀರು, ಹಾಗೂ ರಸಾಯಿನಿಕ ಮಿಶ್ರಿತ ನೀರನ್ನು ಸೇರಿಸುತ್ತಿರುವ ಅಭ್ಯಾಸಗಳನ್ನು ಬಿಡಬೇಕು ಅವುಗಳ ಸ್ವಚ್ಛತೆಯ ಜವಾಬ್ದಾರಿ ನಮ್ಮದಾಗಬೇಕು‌.

ಕೃಷಿಯಲ್ಲಿ ನಾವು ಹನಿ ನಿರಾವರಿ ಪದ್ದತಿ ಅಳವಡಿಸಿಕೊಳುವ ಮೂಲಕ ನೀರನ್ನು ಮಿತಬಳಕೆ ಮಾಡಬಹುದಾಗಿದೆ.

ಹೆಚ್ಚಾಗಿ ಮನೆಯಲ್ಲಿ ನೀರನ್ನು ಸ್ನಾನಕ್ಕೆ, ಪಾತ್ರೆಗಳ ತೊಳವಿಕೆಗೆ, ತರಕಾರಿ ತೊಳುವಿಕೆ ನಿರನ್ನು ಮಿತಬಳಿಕೆ ಮಾಡಿಕೊಂಡು, ಕೈತೊಟಗಳಿಗೆ ಉಪಯೋಗಿಸಬಹುದಾಗಿ ಮತ್ತು ಇಂಗು ಗುಂಡಿಯ ಮೂಲಕವು ಇಂಗಿಸಲು ಸಾಧ್ಯ. ಇಂತ ಅಭ್ಯಾಸಗಳನ್ನು ಪ್ರತಿ ಕುಟುಂಬವು ಸಹ ಅಳವಡಿಸಿಕೊಳ್ಖಬೇಕು.

ನೀರಂತರ ನೀರು ಪೋಲಾಗುವ ವಾಲ್, ನಲ್ಲಿ, ಗಳನ್ನು ಬದಲಿಸಬೇಕು.

▪️ತ್ಯಾಜ್ಯ ಉತ್ಪಾದನೆಯಲ್ಲಿ ಕಡಿಮೇ ಮಾಡುವುದು:

ಪ್ರತಿ ದಿನ – ಪ್ರತಿ ಕುಟುಂಬದಿಂದ ಉತ್ಪಾದನೆಯಾದ ತ್ಯಾಜ್ಯದಲ್ಲಿ ಶೇ ೩೦% ತ್ಯಾಜ್ಯವು ಏಕ ಬಳಕೆ ಮತ್ತು ಮರುಬಳಿಕೆಯಾಗದ ತ್ಯಾಜ್ಯವನ್ನು ಉತ್ಪಾದಿಸುತ್ತಿದ್ದೆವೆ ಇದರಿಂದ ಪರಿಸರದ ಮೇಲೇ ಪರಿಣಾಮ ಬೀರಿದೆ ಆಗಾಗಿ ನಾವು ಪ್ರತಿನಿತ್ಯ ಉಪಯೋಗಿಸಿ ಬಿಸಾಡುವ ತ್ಯಾಜ್ಯವನ್ನು ಕೆಲವು ವಿಧಾನಗಳನ್ನು ಅನುಸರಿಸಿ ವಿಲೇವಾರಿ ಮಾಡುವ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಿದೆ.

▪️ಏಕ ಬಳಕೆ ಪ್ಲಾಸ್ಟಿಕ್ ನ್ನು ತ್ಯಜಿಸುವುದು;
ಇಂದಿನ ಶೋಕಿ ಜೀವನದಲ್ಲಿ ನಾವು ಸಂತೆಗೆ, ಮಾರ್ಕೆಟಗೆ, ಅಂಗಡಿಗಳಿಗೆ ಬಟ್ಟೆಯ ಕೈ ಚೀಲಗಳನ್ನು ತೆಗೆದುಕೊಂಡು ಹೊಗುವುದನ್ನು ಬಿಟ್ಟಿದ್ದೆವೆ ಪ್ರತಿಯೊಂದು ಅಂಗಡಿಗಳಲ್ಲಿ ತೆಗೆದುಕೊಂಡ ವಸ್ತುಗಳಿಗೊಂದು ಪ್ಲಾಸ್ಟಿಕ ಕವರನ್ನು ನೀಡಿ ಎಂದು ಕೇಳುತಿದ್ದೆವೆ ಆಚನಾಕ ಕವರ್ ಇಲ್ಲಾ ಅಂದ್ರೆ, ಆ ವಸ್ತುಗಳನ್ನು ಬಿಟ್ಟು ಬರುವ ಪರಿಪಾಟ ನಮ್ಮ ಜೀವನ ಶೈಲಿಯಲ್ಲಿದೆ.
ನಾವು ಪರಿಸರ ಸ್ನೇಹಿ ಕೈಚೀಲಗಳನ್ನು , ಮಣ್ಣಲ್ಲಿ ಕರಗುವ ಚೀಲ / ಕವರಗಳನ್ನು ನಾವು ಬಳಸಬೇಕು.

▪️ಇ ತ್ಯಾಜ್ಯವನ್ನು ಕಡಿಮೆ ಮಾಡುವುದು :

ಇವತ್ತಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲಿ ಟಿ.ವಿ., ರಿಪೇರಿಯಾಗದ ಮೊಬೈಲ್, ಪ್ರೀಜ್, ಎಸಿ. ಎರಕೂಲರ್, ಬಲ್ಬಗಳು, ಕಂಪ್ಯೂಟರ್ ಇತ್ಯಾದಿಗಳ ಉಪಯೋಗಕ್ಕೆ ಬಾರದ ಇಂತಹ ಎಲೆಟ್ರಾನಿಕ ವಸ್ತುಗಳನ್ನು ಇ-ತ್ಯಾಜ್ಯ ಎಂದು ಗುರುತಿಸುತ್ತೆವೆ ಇವುಗಳನ್ನು ಸರಿಯಾಗಿ ವಿಲೇವಾರಿ ಮಾಡದೇ ಪರಿಸರಕ್ಕೆ ಮಾರಕವಾಗುವಂತೆ ನಾವು ಮಾಡಿದ್ದೆವೆ.

ಈ ಎಲ್ಲಾ ಮಾರಕ ಕ್ರಮಗಳನ್ನು ಪ್ರತಿಯೊಬ್ಬರಿಂದ ತ್ಯಜಿಸಬೇಕು ಪರಿಸರಕ್ಕೆ ಪೂರಕ / ಸ್ನೇಹಿಯ ಪದ್ದತಿಗಳನ್ನು ಅಳವಡಿಸಿಕೊಂಡು *ಮಿಷನ್ ಲೈಪ್ ೭೫ ಉಪಕ್ರಗಳ* ಎಲ್ಲಾ ಕ್ರಮಗಳನ್ನು ಅನುಸರಿಸಿ ಅನುಕರಣೆ ಮಾಡಿಕೊಂಡಾಗ ಪರಿಸರ ದಿನಾಚರಣೆಗೆ ಒಂದು ಅರ್ಥಾ ಬರಲು ಸಾಧ್ಯ ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಿದೆ.

ಶಿವಕುಮಾರ ಬಿ.
ಸ್ವಚ್ಛ ಭಾರತ ಮಿಷನ್ ( ಗ್ರಾ)
ಜಿಲ್ಲಾ ಐ.ಇ.ಸಿ ಸಮಾಲೋಚಕರು
ಜಿ.ಪಂ.ಯಾದಗಿರಿ.

Related Articles

Leave a Reply

Your email address will not be published. Required fields are marked *

Back to top button