ಪ್ರಮುಖ ಸುದ್ದಿ
ಪಟ್ಟದಕಲ್ಲು ಸಂತ್ರಸ್ತರಿಂದ ಸಚಿವ ಸಿಟಿ ರವಿ, ಗದ್ದೆಗೌಡರ ಕಾರಿಗೆ ಘೇರಾವ್
ಬಾಗಲಕೋಟ್ಃ ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ಪ್ರವಾಸಿ ತಾಣ ವೀಕ್ಷಿಸಿ ವಾಪಾಸ್ ತೆರಳುವಾಗ, ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಹಾಗೂ ಸಂಸದ ಪಿ.ಸಿ.ಗದ್ದೆಗೌಡರ ಕಾರಿಗೆ ಮಾರ್ಗಮಧ್ಯದಲ್ಲಿ ಗ್ರಾಮಸ್ಥರು ತಡೆದು ಸಂಸದರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ನೆರೆ ಹಾವಳಿಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. 2009 ಕ್ಕಿಂತ ಈ ಬಾರಿ ಹೆಚ್ಚಿನ ನೆರೆ ಹಾವಳಿಯಿಂದ ಕಂಗಾಲಾಗಿದ್ದೇವೆ. ಗ್ರಾಮ ಸ್ಥಳಾಂತರಿಸುತ್ತೇವೆ ಎಂದು ಆಗನಿಂದಲೂ ಹೇಳುತ್ತಾ ಬಂದಿರುವಿರಿ. ಇದುವರೆಗೂ ಯಾವುದೇ ಕೆಲಸ ಮಾಡಿಲ್ಲ. ಸಮರ್ಪಕವಾಗಿ ನೆರೆ ಸಂತ್ರಸ್ಥರಿಗೆ ಸ್ಪಂಧನೆ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರೆನ್ನಲಾಗಿದೆ.
ಆಗ ಸಚಿವ ಸಿ.ಟಿ.ರವಿ ಗದ್ದೆಗೌಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದ ಜನರ ಭಾವನೆ ಅರ್ಥವಾಗುತ್ತಿದೆ. ಈಗ ತೆರಳಿ ಸರ್ಕಾರದಿಂದ ಸಾಧ್ಯವಾದಷ್ಟು ಸಹಕಾರ ನೀಡಲಾಗುವದು ಎಂದಿದ್ದಾರೆ. ಸಂಸದರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವದನ್ನು ನೋಡಿದ ಸಚಿವ ರವಿ ಮೌನಕ್ಕೆ ಶರಣಾದರು ಎನ್ನಲಾಗಿದೆ.