ಪೇಜಾವರಶ್ರೀಗೆ ಅಗೌರವ ತೋರಿದರಾ ಪ್ರವೀಣ್ ತೊಗಡಿಯಾ?
ಇದೇನಾ ಸಂಸ್ಕೃತಿ ಇದೇನಾ ಸಭ್ಯತೆ?
ಉಡುಪಿ: ಹಿಂದುಸ್ಥಾನದಲ್ಲಿ ಹಿಂದುತ್ವವೇ ರಾಷ್ಟ್ರಧರ್ಮ ಆಗಬೇಕೆನ್ನುವ ಆಶಯದೊಂದಿಗೆ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ಉಡುಪಿಯಲ್ಲಿ ಧರ್ಮ ಸಂಸದ್ ಆಯೋಜಿಸಲಾಗಿದೆ. ಆದರೆ, ಜೀವನದುದ್ದಕ್ಕೂ ಹಿಂದುತ್ವದ ಬಗ್ಗೆ ಭಾಷಣ ಮಾಡುತ್ತ ಬಂದಿರುವ ವಿಶ್ವ ಹಿಂದೂ ಪರಿಷತ್ ನ ಪ್ರವೀಣ್ ಭಾಯಿ ತೊಗಾಡಿಯಾ ಇಂದು ಪೇಜಾವರಶ್ರೀಗಳ ಪಕ್ಕ ಕಾಲುಮೇಲೆ ಕಾಲು ಹಾಕಿ ಕುಳಿತಿದ್ದು ವಿವಾದಕ್ಕೀಡಾಗಿದೆ.
ನಾಳೆಯಿಂದ ಉಡುಪಿಯಲ್ಲಿ ಧರ್ಮ ಸಂಸದ್ ಸಂತರ ಸಮ್ಮೇಳನ ನಡೆಯಲಿದ್ದು ಸಾವಿರಾರು ಸಾಧು, ಸಂತರು ಭಾಗಿಯಾಗಲಿದ್ದಾರೆ. ಸಂತರ ಸಮ್ಮೇಳನದ ಅಂಗವಾಗಿ ಇಂದು ಹಿಂದು ವೈಭವದ ವಸ್ತು ಪ್ರದರ್ಶನ ಮಳಿಗೆಯನ್ನು ಪ್ರವೀಣ್ ಭಾಯಿ ತೊಗಾಡಿಯಾ ಉದ್ಘಾಟಿಸಿದರು. ಈ ವೇಳೆ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.
ಪೇಜಾವರ ಸ್ವಾಮೀಜಿ ಎಡಭಾಗದಲ್ಲಿ ಕುಳಿತಿದ್ದ ಪ್ರವೀಣ್ ಭಾಯಿ ತೊಗಡಿಯಾ ಅವರು ಪೇಜಾವರಶ್ರೀ ಹಿರಿಯ ಹಿಂದು ಯತಿ ಎಂಬುದನ್ನೂ ಲೆಕ್ಕಿಸದೆ ಕಾಲು ಮೇಲೆ ಕಾಲು ಹಾಕಿ ಕುಳಿತಿದ್ದು ಹಲವರಲ್ಲಿ ಬೇಸರ ಮೂಡಿಸಿತು. ಹಿಂದುತ್ವದ ಬಗ್ಗೆ ಭಾರೀ ಭಾಷಣ ಮಾಡುವ ಮುಖಂಡರು ಹಿಂದು ಯತಿಗಳಿಗೆ ನೀಡುವ ಗೌರವ ಇದೇನಾ ಎಂಬ ಪ್ರಶ್ನೆ ಕಾಡಿತು. ಅಂತೆಯೇ ಪೇಜಾವರಶ್ರೀ ಪಕ್ಕ ಪ್ರವೀಣ್ ತೊಗಡಿಯಾ ಕಾಲು ಮೇಲೆ ಕಾಲು ಹಾಕಿ ಕುಳಿತ ಚಿತ್ರ ಎಲ್ಲೆಡೆ ವೈರಲ್ ಆಗಿದ್ದು ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ.