ವಾಹನ ಸವಾರರಿಗೆ ಕಹಿಸುದ್ದಿ! ಮತ್ತೆ ಏರಿಕೆ ಕಂಡ ಬೆಲೆ
ಹಲೋ ಸ್ನೇಹಿತರೇ, ಪ್ರತಿ ನಿತ್ಯದ ಬಳಕೆಯ ವಸ್ತು ಗಳು ಎಲ್ಲ ಜನರಿಗೂ ಅತೀ ಮುಖ್ಯ ವಾಗಲಿದೆ. ಆದ್ರೆ ಪ್ರತಿ ನಿತ್ಯದ ವಸ್ತುಗಳಲ್ಲಿ ಬೆಲೆ ಏರಿಕೆಯು ಇಂದಾಗಿ ಇಂದು ಸಾಮಾನ್ಯ ಜನರು ಬದುಕನ್ನು ಕಟ್ಟಿ ಕೊಳ್ಳುವುದು ಕಷ್ಟ ವಾಗಿದೆ. ಅಷ್ಟರ ಮಟ್ಟಿಗೆ ದಿನಸಿ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಅದರಲ್ಲೂ ಇಂದು ವಾಹನಗಳು ಸಹ ದಿನ ನಿತ್ಯದ ಸಂಚಾರಕ್ಕೆ ಅಗತ್ಯ ವಾಗಿ ಇರಲಿದ್ದು ವಾಹನಗಳಿಗೆ ಬೇಡಿಕೆಯು ಸಹ ಹೆಚ್ಚಾಗಿದೆ. ಆದ್ರೆ ಪೆಟ್ರೋಲ್ ಡಿಸೇಲ್ ಬೆಲೆ ಪ್ರತಿ ವರ್ಷ ಕೂಡ ಹೆಚ್ಚಾಗುತ್ತಿದೆ. ಇದೀಗ ಇಳಿಕೆ ಯಾಗುತ್ತೇ ಎನ್ನುವ ಕುತೂಹಲ ದಲ್ಲಿದ್ದ ವಾಹನ ಸವಾರರಿಗೆ ಇದೀಗ ಶಾಕಿಂಗ್ ವಿಚಾರ ಸಿಕ್ಕಿದೆ.
ಪೆಟ್ರೋಲ್ – ಡೀಸೆಲ್ ಬೆಲೆ ಹೆಚ್ಚಳ:
ಲೋಕಸಭಾ ಚುನಾವಣಾ ಫಲಿತಾಂಶ ಬರಲಿದ್ದು ಜನರು ಕಾಯುತ್ತಿದ್ದಾರೆ.ಆದರೆ ಕೆಲವೊಂದು ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಕಾಯುತ್ತಿದ್ದ ಜನರಿಗೆ ಇದೀಗ ಚುನಾವಣೆ ಫಲಿತಾಂಶ ಘೋಷಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿವಿಧ ಮೂಲಗಳು ತಿಳಿಸಿದೆ.
ಯಾಕೆ ಹೆಚ್ಚಳ?
ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಹೆಚ್ಚಿಸುವ ಸಲುವಾಗಿಯೇ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಾಗಿದೆ. ಅದೇ ರೀತಿಯಾದ ರಷ್ಯಾ ಉಕ್ರೇನ್ ಸಂಘರ್ಷವು ಆರಂಭವಾದ ಆದಾಗಿನಿಂದ ಕಚ್ಚಾತೈಲ ದರವು ಭಾರಿ ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಆಧಾರದ ಮೇಲೆ ದೈನಂದಿನ ಇಂಧನ ಬೆಲೆಗಳನ್ನು ನಿರ್ಧಾರ ಮಾಡಲಾಗುತ್ತಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆ ಕಂಡುಬರುತ್ತದೆ.
ಎಷ್ಟು ಇದೆ ಈಗ ಬೆಲೆ?
ಇಂದು ಮುಂಬೈನಲ್ಲಿ ಪ್ರತಿ 104.21 ರೂಪಾಯಿ ಆಗಿದ್ದು ಆದರೆ ಡೀಸೆಲ್ ಬೆಲೆ ಲೀಟರ್ಗೆ 92.15 ರೂಪಾಯಿಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂ ಆಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್ಗೆ ರೂ 85.93 ಆಗಿದೆ.