PM KISAN: ಈ ಕೆಲಸ ಮಾಡದಿದ್ರೆ ಬರಲ್ಲ18 ನೇ ಕಂತಿನ ಹಣ..!
(PM KISAN) ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿರುವ ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತಿನಲ್ಲಿ ತಲಾ 2000 ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18 ನೇ ಕಂತಿನ ಹಣ ಪಡೆಯಬೇಕಾದರೆ ಇ-ಕೆವೈಸಿ ಮಾಡಿಸದೇ ಇರುವವರಿಗೆ ಹಣ ಜಮಾ ಆಗುವುದಿಲ್ಲ. ಹೌದು, ಪಿಎಂ ಕಿಸಾನ್ ಯೋಜನೆಯ 18 ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು, ಮಾಡದಿದ್ದಲ್ಲಿ 18 ನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮೊದಲು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಲಿಂಕ್ ಮಾಡಿಕೊಳ್ಳಿ. ಸದ್ಯ ರೈತರು ಪಿಎಂ-ಕಿಸಾನ್ ಯೋಜನೆಯ 17 ಕಂತುಗಳನ್ನು ಪಡೆದಿದ್ದು, ರೈತರು 18 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದರೆ ಈ ಕೆಲಸ ಮಾಡದಿದ್ರೆ ನಿಮಗೆ ಹಣ ಜಮಾ ಆಗಲ್ಲ.
ನೀವು ಇನ್ನೂ ಈ e-kyc ಯನ್ನು ಪೂರ್ಣಗೊಳಿಸದಿದ್ದರೆ ನೀವು ಮೊದಲು ಈ e-kyc ಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಈ 18 ನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
(PM KISAN) ರೈತರಾಗಿದ್ದರೂ ಇವರು ಈ ಯೋಜನೆಗೆ ಅರ್ಹರಲ್ಲ:
* ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು.
* ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಗಳು ಅಥವಾ ಉದ್ಯೋಗಿಗಳು
* ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಹಾಗೂ ಅವುಗಳ ಅಧೀನದಲ್ಲಿರುವ ಸಂಸ್ಥೆಗಳ ಸಿಬ್ಬಂದಿ
* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾರ್ವಜನಿಕ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಚೇರಿ, ಸ್ವಾಯತ್ತ ಸಂಸ್ಥೆ ಅಥವಾ ಅವುಗಳ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿನ ಸಿಬ್ಬಂದಿ (ಬಹು ಕಾರ್ಯೋದ್ದೇಶದ ಸಿಬ್ಬಂದಿ, 4ನೇ ದರ್ಜೆಯ ನೌಕರರು, ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ).