ಅಂಕಣ

ಹೆಚ್ಚುತ್ತಿರುವ ಅಪರಾಧ ಪ್ರವೃತ್ತಿ – ಒಂದು ಸಮಾಜಶಾಸ್ತ್ರೀಯ ವಿವೇಚನೆ-ಹಾರಣಗೇರಾ ಬರಹ

ಹೆಚ್ಚುತ್ತಿರುವ ಅಪರಾಧ ಪ್ರವೃತ್ತಿ ಕುರಿತು ಸಾಮಾಜಿಕ ಅವಲೋಕನ

ಮೂಲಭೂತ ಅಗತ್ಯತೆ ಪೂರೈಕೆಗಾಗಿ ಯುವಕರಿಂದ ಅಪರಾಧ..ಹಾದಿ 

ಇತ್ತೀಚಿನ ದಿನಗಳಲ್ಲಿ ಕೊಲೆ, ಸುಲಿಗೆಗಳು, ಅಪಹರಣಗಳು, ಕಳ್ಳತನ, ದರೋಡೆ, ಆತ್ಮಹತ್ಯೆ, ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ದೌರ್ಜನ್ಯ ಮತ್ತು ಸಾವುಗಳು, ಹೆಣ್ಣು ಮಕ್ಕಳ ಮಾರಾಟಗಳು, ಕೋಮು-ಜಾತಿ ಸಂಘರ್ಷಗಳು, ಸಾರ್ವಜನಿಕ ಜನಬೀಡು ಸ್ಥಳಗಳಲ್ಲಿ ಕೊಲೆಗಳು, ಭಯೋತ್ಪಾದನೆ ಕೃತ್ಯಗಳು, ಹೆಣ್ಣು ಶಿಶು ಹತ್ಯೆ ಮತ್ತು ಭ್ರೂಣ ಹತ್ಯೆ, ಶಿಕ್ಷಕರಿಂದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಮುಂತಾದವುಗಳು ಅತೀ ಹೆಚ್ಚು ಕಂಡುಬರುತ್ತೀರುವುದು ಕಳವಳಕಾರಿ ಸಂಗತಿಯಾಗಿದೆ. ಈ ಘಟನೆಗಳು ಸಾರ್ವಜನಿಕರಲ್ಲಿ ಭಯದ ವಾತವರಣ ನಿರ್ಮಾಣ ಮಾಡಿದೆ ಇವುಗಳಿಂದ ಜನತೆ ತಲ್ಲಣಗೊಂಡಿದ್ದಾರೆ.

ಹಳ್ಳಿಗಳಿಂದ ನಗರಗಳಿಗೆ ಕೆಲಸ ಹುಡಿಕಿಕೊಂಡು ನಗರ-ಪಟ್ಟಣಗಳಿಗೆ ವಲಸೆ ಬರುವ ಜನಸಂಖ್ಯೆ ಹೆಚ್ಚುತ್ತೀರುವುದರಿಂದ ಅನಧಿಕೃತ ವಾಸದ ಪ್ರದೇಶಗಳು, ವಿವಿಧ ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ವ್ಯತ್ಯಾಸಗಳು, ಆರ್ಥಿಕ ಅಸಮಾನತೆಗಳು ನಗರ ಪ್ರದೇಶಗಳಲ್ಲಿ ಅಪರಾಧಿಗಳಿಗೆ ಇಂಬು ಕೊಡುತ್ತದೆ. ಯಾಂತ್ರಿಕ ಬದುಕು, ವಿಲಾಸಿ ಜೀವನದ ಆಕರ್ಷಣೆಯಿಂದ ವ್ಯವಸ್ಥಿತ ಗುಂಪುಗಳಿಂದ, ಗ್ಯಾಂಗುಗಳು, ವೃತ್ತಿಪರ ಕಳ್ಳಕಾಕರು ಮುಂತಾದವರು ಅಪರಾಧವನ್ನೆ ತಮ್ಮ ವೃತ್ತಿ ಎಂದು ಭಾವಿಸುವ ಮನೋಭಾವನೆ ಹೆಚ್ಚುತ್ತಿದೆ.

ಅಲ್ಲದೇ ನಮ್ಮ ಹಳ್ಳಿಗಳಲ್ಲಿ ನಗರೀಕರಣ ಪ್ರಭಾವದಿಂದ ಹಣಕ್ಕಾಗಿ, ಆಸ್ತಿಗಾಗಿ, ಜಾತಿ-ಜಾತಿಗಳ ಮಧ್ಯೆ, ಅಣ್ಣ-ತಮ್ಮಂದಿರ, ನೆರೆ-ಹೊರೆಯವರ ಮಧ್ಯೆ ಕ್ಷುಲಕ ಕಾರಣಗಳಿಗಾಗಿ ಜಗಳಗಳು ಸಂಭವಿಸಿ ಕೊಲೆಗಳಲ್ಲಿ ಅಂತ್ಯವಾಗುತ್ತಿವೆ. ಮತ್ತು ಅನೈತಿಕ ಸಂಬಂಧಗಳು, ಅತ್ಯಾಚಾರ ಪ್ರಕರಣಗಳು ಕೂಡ ಹೆಚ್ಚುತ್ತೀವೆ. ಗ್ರಾಮೀಣ ಜನ ಇಂದು ಪ್ರಾಥಮಿಕ ಭಾವನಾತ್ಮಕ ಸಂಬಂಧಗಳಿಂದ ದೂರ ಸರಿಯುತ್ತಿದ್ದಾರೆ.

ಪರಸ್ಪರ ದ್ವೇಷ, ಅಸೂಯೆ, ಸ್ವಾರ್ಥ ಭಾವನೆಗಳು ಹೆಚ್ಚುತ್ತಿವೆ. ರೈತರಿಗೆ ನೀರಾವರಿ ಸೌಲಭ್ಯಗಳು ದೊರೆತೀರುವುದರಿಂದ ವರ್ಷಕ್ಕೆ 3-4 ಫಸಲುಗಳು ಬೆಳೆಯುತ್ತೀರುವುದರಿಂದ ಕೈಯಲ್ಲಿ ಹಣ ಹರಿದಾಡುತ್ತಿದೆ ಆದರೆ ಈ ಹಣ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಬಳಸಿಕೊಳ್ಳುತ್ತೀಲ್ಲ ಯಾವಾಗ ನೀರಾವರಿಗಳಿಂದ ಹಣ ರೈತರ ಕೈಯಲ್ಲಿ ಬಂತೋ ಅಂದಿನಿಂದ ಹೆಣಗಳು ಬಿಳುತ್ತೀವೆ. ಅಷ್ಟೊಂದು ನೈತಿಕ ಅಧಃಪತನವನ್ನು ಹಳ್ಳಿಗಳಲ್ಲಿ ಕಂಡುಬರುತ್ತೀವೆ.

ದಿನನಿತ್ಯ ದುರ್ಬಲ ವರ್ಗಗಳ ಮೇಲೆ, ಅಲ್ಪಸಂಖ್ಯಾತರ ಮೇಲೆ, ದುಡಿಯುವ ವರ್ಗಗಳ ಮೇಲೆ ಮತ, ಪಂಥ, ಜಾತಿ, ಪಂಗಡ, ಭಾಷೆ, ಸಂಸ್ಕ್ರತಿ ಮುಂತಾದವುಗಳ ಹೆಸರಿನಲ್ಲಿ ಅನಾಚಾರಗಳು, ವೈಷಮ್ಯಗಳು, ಜಗಳಗಳು, ನೈತಿಕ ಮೌಲ್ಯಗಳ ಕುಸಿತ, ಶೀಥಿಲವಾದ ಆಡಳಿತ ಮತ್ತು ಕಾನೂನು ವ್ಯವಸ್ಥೆ, ನಕ್ಸಲ ಅಟ್ಟಹಾಸಗಳು ನಡೆಯುತ್ತೀವೆ. ಲೂಟಿ, ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ನಾಶ ಮಾಡುವುದು ಮುಂತಾದವುಗಳನ್ನು ಹೆಚ್ಚು ನಡೆಯುತ್ತೀರುವುದು ಕಾಣುತ್ತೀದ್ದೇವೆ.

ದಮನಕಾರಿ ಸಮಾಜಿಕ ಸ್ಥಿತಿ-ಗತಿಗಳು ಸಮಾಜ ವಿರೋಧಿ ನಡೆತೆಗೆ ಮೂಲ ಕಾರಣ ಒಬ್ಬ ವ್ಯಕ್ತಿ ಸಾಮಾಜಿಕವಾಗಿ ಹಲವಾರು ಒತ್ತಡಗಳಿಗೆ ಒಳಗಾದಾಗ ಹತಾಸೆನಾಗುತ್ತಾನೆ. ತನಗೆ ಬಂದ ಸಮಸ್ಯೆಗಳನ್ನು ಪರಿಹರಿಸಲು ವಿಫಲನಾದಾಗ ವಾಮಾ ಮಾರ್ಗಗಳನ್ನು ಅಥವಾ ಅಪರಾಧ ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಾನೆ. ಅವನು ಬೆಳೆದ ಪರಿಸರವು ಈ ರೀತಿಯ ವ್ಯತಿರಿಕ್ತ ನಡುವಳಿಕೆಗೆ ಪೂರಕವಾಗಬಲ್ಲದು. ಜೀವನದ ಬಗ್ಗೆ ಗುಣಾತ್ಮಕ ದೃಷ್ಠಿಕೋನದ ಕೊರತೆ ಮತ್ತು ಸಂಕಷ್ಟಗಳನ್ನು ಬಗೆಹರಿಸಿಕೊಳ್ಳುವ ತಂತ್ರಗಳ ಕೊರತೆಯಿಂದಾಗಿ ಹೆಚ್ಚು ಮಂದಿ ಅಪರಾಧಿಗಳಾಗುತ್ತಿದ್ದಾರೆ.

ಇಂದು ಯುವಕರು ತಮ್ಮ ಬೇಡಿಕೆಗಳನ್ನು ಹಿಡೆರಿಸಿಕೊಳ್ಳಲು ಸಣ್ಣ ಕಾರಣಗಳಿಗೆ ಅಪರಾಧಿಗಳಾಗುತ್ತೀರುವ ಪ್ರಕರಣಗಳು ಹೆಚ್ಚಾಗುತ್ತೀವೆ. ಮರ್ಡರ್, ದರೋಡೆ, ಕಳ್ಳತನ, ಭಯೋತ್ಪಾದನೆ ಮುಂತಾದ ಗಂಭೀರ ಅಪರಾಧಗಳಲ್ಲಿ ಯುವಕರು ಶಾಮೀಲಾಗಿದ್ದಾರೆಂದು ವರದಿಗಳು ತಿಳಿಸಿವೆ. ಪಾಶ್ಚಾತ್ಯ ಸಂಸ್ಕ್ರತಿಯ ಅಂಧಾನುಕರಣೆ, ಕೆಟ್ಟ ಸಂಬಂಧಗಳ ಸಂಪರ್ಕ, ದೃಶ್ಯ ಮಾಧ್ಯಮಗಳಲ್ಲಿ ಅಪರಾಧಗಳ ವೈಭವೀಕರಣ, ಕೌಟುಂಬಿಕ ನಿಯಂತ್ರಣದ ಕೊರತೆ, ಸುಲಭವಾಗಿ ದೊರೆಯುತ್ತೀರುವ ವಿವಿಧ ಮಾಧಕ ದ್ರವ್ಯಗಳು, ವಿಷಮ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳಿಗೆ ನಿರಂತರವಾಗಿ ಯುವಕರು ಒಳಗಾದಾಗ ಜೊತೆಗೆ ಬಡತನ, ನಿರುದ್ಯೋಗ ಹಾಗೂ ಇತರೆ ಋಣಾತ್ಮಕ ಸಮಸ್ಯೆಗಳು ಸೇರಿದಾಗ ಅವರು ಅತಂತ್ರರಾಗುತ್ತಾರೆ ಮತ್ತು ಕಂಗಾಲಾಗುತ್ತಾರೆ.

ಇದರಿಂದ ಯುವಕರ ಸಾಮಾಜಿಕ ನಡುವಳಿಕೆಗಳಲ್ಲಿ ಏರು-ಪೇರುಗಳು ಸಂಭವಿಸುತ್ತವೆ. ಅವರ ಮನಸ್ಸಿನಲ್ಲಿ ಅಶಾಂತಿ, ಅತೃಪ್ತಿ, ನಿರಾಸೆ ಮುಂತಾದವುಗಳು ಹೆಚ್ಚಾಗುತ್ತಾ ಹೋಗಿ ಅವರು ಅಡ್ಡ ಮಾರ್ಗ ತುಳಿಯಲು ಪ್ರಯತ್ನಿಸುತ್ತಾರೆ. ಅಲ್ಲದೇ ಆಹಾರ, ವಸತಿ, ಬಟ್ಟೆ, ರಕ್ಷಣೆ, ಪ್ರೀತಿ, ಆಸರೆ, ಸ್ಥಾನಮಾನಗಳು ಆಯಾ ಸಂದರ್ಭಗಳಲ್ಲಿ ಸಿಗದೇ ಇದ್ದಾಗ ಅಪರಾಧ ಪ್ರವೃತ್ತಿಗಳು ಹೆಚ್ಚಾಗುತ್ತ ಹೋಗುವುದರಲ್ಲಿ ಸಂದೇಹವೇ ಇಲ್ಲ.

ಮಕ್ಕಳ ಮತ್ತು ಪೋಷಕರ ನಡುವಿನ ಸಂಬಂಧದಲ್ಲಿ ಉಂಟಾಗಿರುವ ಗಣನೀಯ ಬದಲಾವಣೆ, ಕೌಟುಂಬಿಕ ವಿಘಟಣೆ ಇತರ ಕಾರಣಗಳಿಂದ ಸೂಕ್ತ ಮಾರ್ಗದರ್ಶನವೇ ಇಲ್ಲದಂತಾಗಿ ಯುವಕರು ದಾರಿ ತಪ್ಪುತ್ತಿದ್ದಾರೆ. ಹಲವಾರು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಬಲಿಯಾಗುತ್ತಿದ್ದಾರೆ. ಇತ್ತಿಚಿಗೆ ಸಂಬಂವಿಸಿದ ಅತ್ಯಾಚಾರ ಪ್ರಕರಣಗಳೇ ಇದಕ್ಕೆ ಸಾಕ್ಷಿ ಎಂದು ಹೇಳಬಹುದು

ಜಾತಿ ರಾಜಕಾರಣ, ಭ್ರಷ್ಟಾಚಾರ, ರಾಜಕೀಯ ಭ್ರಷ್ಟಾಚಾರ, ಕೋಮು ಗಲಭೆಗಳು, ಕುಟುಂಬದ ಸಂಬಂಧಿಕರಿಂದ, ಶಿಕ್ಷಕರಿಂದ ಯುವಕರಿಂದ ಬಾಲಕಿಯರ ಮತ್ತು ಯುವತಿಯರ ಅತ್ಯಾಚಾರ, ದೌರ್ಜನ್ಯ ಮುಂತಾದವು ಅಸೂರೆ ಕೃತ್ಯಗಗಳು ಹೆಚ್ಚುತ್ತಿವೆÉ. ಸಂಬಂಧಪಟ್ಟ ಪೋಲಿಸ್‍ರು ಅಪರಾಧಗಳನ್ನು ದಾಖಲಿಸದಿರುವುದು, ವಿಳಂಬಿತ ತನಿಖೆ, ಅತೀ ಸುಲಭವಾಗಿ ದೊರೆಯುವ ಜಾಮೀನಿನ ವ್ಯವಸ್ಥೆ ಹಾಗೂ ವರ್ಷಾಂತರಗಳ ಕಾಲ ಇತ್ಯರ್ಥವಾಗದೇ ಉಳಿಯುವ ಕೇಸುಗಳು, ಸಾಕ್ಷಿಗಳ ಭಯ ಇವೆಲ್ಲ ಅಪರಾಧಿಗಳಿಗೆ ಹೆಚ್ಚು ಉತ್ತೇಜನ ನೀಡುತ್ತವೆ.

ಇಂತಹ ಅಪರಾಧ ಪ್ರವೃತ್ತಿಯನ್ನು ಕಡಿಮೆ ಮಾಡಲು ಪೋಲಿಸ್ ಇಲಾಖೆ ಪ್ರಯತ್ನಿಸಿದರೆ ಸಾಲದು ಅದಕ್ಕೆ ಸಂಘಟಿತ ಪ್ರಯತ್ನ ಅಗತ್ಯವಿದೆ. ಅಪರಾಧಗಳಿಂದ ವ್ಯಕ್ತಿಗಳು ತಮ್ಮ ಕುಟುಂಬ, ಸಮೂಹ, ಸಮೂದಾಯಗಳ ಮೇಲೆ ಯಾವ ರೀತಿ ಕೆಟ್ಟ ಪರಿಣಾಮ ಬೀರುತದೆ ಮತ್ತು ತಮ್ಮ ಕುಟುಂಬ ಎಂತಹ ಸಮಸ್ಯೆಗಳು, ತಲ್ಲಣಗಳು ಎದುರಿಸಬೇಕಾಗುತ್ತದೆ ಎಂದು ಜನರಿಗೆ ಜಾಗೃತಿ ಮೂಡಿಸಬೇಕಾಗಿದೆ.

ಅಲ್ಲದೇ ಒಳ್ಳೆಯ ಸಾಮಾಜಿಕ, ಮಾನಸಿಕ ಬೆಳವಣಿಗೆಗಾಗಿ ನೈತಿಕ ಮೌಲ್ಯಗಳ ಬಗ್ಗೆ ಜನರಿಗೆ ಸಕಾರಾತ್ಮಕ ತಿಳುವಳಿಕೆ ನಿಡುವುದರಿಂದ ಅವರಲ್ಲಿನ ನಕರಾತ್ಮಕ ಧೋರಣೆಯನ್ನು ತಡೆಗಟ್ಟಬಹುದು ಮತ್ತು ಅಪರಾಧಕ್ಕೆ ಪ್ರಚೋಧನೆ ನೀಡುವಂತಹ ಸಿನಿಮಾಗಳಲ್ಲಿನ ದೃಶ್ಯಗಳು, ಧಾರವಾಹಿಗಳು, ಕಾರ್ಯಕ್ರಮಗಳು ನಿಷೇಧಿಸಬೇಕು.

ಈ ದಿಸೆಯಲ್ಲಿ ಮಾಧ್ಯಮ, ಪೋಲಿಸರು, ಸ್ವಯಂ ಸೇವಾ ಸಂಸ್ಥೆಗಳ ಪಾತ್ರ ಬಹು ಮುಖ್ಯವಾದದ್ದು. ಈ ಹಿನ್ನಲೆಯಲ್ಲಿ ಸಮಾಜಶಾಸ್ತ್ರಜ್ಞರು, ಕಾನೂನು ತಜ್ಞರು, ಅಪರಾಧಶಾಸ್ತ್ರಜ್ಞರು, ಮನಶಾಸ್ತಜ್ಞರು, ಪೋಲಿಸ ಇಲಾಖೆಯ ಹಿರಿಯ ತಜ್ಞರು, ಅಧಿಕಾರಿಗಳು ಎಲ್ಲರೂ ಕೂಡಿ ಪರಿಣಾಮಕಾರಿಯಾದ ಚಿಂಥನ-ಮಂಥನ ನಡೆಸಿ ಅಪರಾಧ ಪ್ರವೃತ್ತಿಗಳನ್ನು ಕಡಿಮೆ ಮಾಡಲು, ಪರಿಹಾರೋಪಾಯಗಳನ್ನು ಕಂಡುಹಿಡಿಯಬೇಕು. ಆ ಮೂಲಕ ಜನಜಾಗೃತಿ ಮೂಡಿಸಬೇಕು.

ರಾಘವೇಂದ್ರ ಹಾರಣಗೇರಾ
ಸಮಾಜಶಾಸ್ತ್ರ ಉಪನ್ಯಾಸಕರು
ಶಹಾಪುರ, ಜಿ|| ಯಾದಗಿರಿ.
ಸಂಚಾರ : 99015 59873.

Related Articles

One Comment

  1. very nice article sir. India is one of the much crime activities facing victim in the world. recently national crime beuro reports is released in this report all metro cities facing more crime . ncr Delhi only city having 33 percent of crime activities.mp and up states also forefront in those activities . I hope this article is very necessity for present scenario .thank you sir.

Leave a Reply

Your email address will not be published. Required fields are marked *

Back to top button