ಶಹಾಪುರಃ ಬಯಲು ಆಂಜನೇಯ ಶ್ರಾವಣ ಮಾಸ ಧಾರ್ಮಿಕ ಕಾರ್ಯಕ್ರಮ ಸಂಪನ್ನ
ಬಯಲು ಆಂಜನೇಯ ದೇವಸ್ಥಾನ- ಜಾತ್ರಾ ಮಹೋತ್ಸವ
ಬಯಲು ಆಂಜನೇಯ ಜಾತ್ರಾ ಮಹೋತ್ಸವ
ಶ್ರಾವಣ ಮಾಸ ಧಾರ್ಮಿಕ ಕಾರ್ಯ ಸಂಪನ್ನ
ಶಹಾಪುರ ನಗರದ ನಾಗರ ಕೆರೆಯ ಮೇಲೆ ಸಗರಾದ್ರಿ ಬೆಟ್ಟದಲ್ಲಿರುವ ಶ್ರೀಕ್ಷೇತ್ರ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಡೆದ ಭಜನೆ, ಹೋಮ ಹವನ ಧಾರ್ಮಿಕ ಕಾರ್ಯಕ್ರಮಗಳು ಶನಿವಾರ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಪ್ರತಿ ವರ್ಷದಂತೆ ಶ್ರಾವಣಸದ ಕಡೆ ಶನಿವಾರ ಶ್ರೀಬಯಲು ಆಂಜನೇಯನಿಗೆ ವಿಶೇಷ ಅಲಂಕಾರ ಅಭಿಷೇಕ ಸೇರಿದಂತೆ ಪವಮಾನ ಹೋಮ ನಡೆಯಿತು. ಸಹಸ್ರಾರು ಭಕ್ತರು ಆಗಮಿಸಿ ಶ್ರೀದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪತ್ರರಾದರು.
ಶ್ರೀದೇವರ ಅರ್ಚಕರ ಮನೆಯಿಂದ ಹನುಮಾನ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಶ್ರಾವಣ ಕಡೆ ಶನಿವಾರದಂದು ಶ್ರೀದೇವರಿಗೆ ಬೆಳ್ಳಿ ವಸ್ತ್ರ ಸೇರಿದಂತೆ ಬೆಳ್ಳಿ ಗದೆ ಹೂವಿನಿಂದ ಇಡಿ ದೇವಸ್ಥಾನ ಅಲಂಕಾರ ಮಾಡಲಾಯಿತು. ಬಂದ ಭಕ್ತರಿಗೆ ಹುಗ್ಗಿ, ಅನ್ನ ಸಾಂಬಾರು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಬಯಲು ಹನುಮಾನ್ ಮಂದಿರದ ಸುತ್ತಲೂ ಸುಂದರ ಕೆತ್ತನೆ ಮಾಡಿದ ಕಲ್ಲುಗಳಿಂದ ಶ್ರೀದೇವರ ತಳಹದಿ ಹನುಮ ಪೀಠ ನೂತನವಾಗಿ ನಿರ್ಮಿಸಿದ, ಭಕ್ತಾಧಿಗಳ ಕಣ್ಮನ ಸೆಳೆಯಿತು.
ಜೊತೆಗೆ ಮಂದಿರದ ಮುಂದೆ ಹಾಕಲಾಗಿದ್ದ ಶೆಡ್ ಮೇಲೆ ಹನುಮಾನ ಕಥೆ ನಿರ್ಮಿಸಿದ ಸೀತಾ ಶ್ರೀರಾಮ ಮತ್ತು ಲಕ್ಷ್ಮಣರ ಭಾವಚಿತ್ರದೊಂದಿಗೆ ಆಂಜನೇಯನ ಭಕ್ತಿಯ ಕಥೆ ಹೇಳುತ್ತಿತ್ತು. ಬಯಲು ಆಂಜನೇಯನ ಗುಡ್ಡದ ಪರಿಸರದಲ್ಲಿ ಕೇಸರಿ ಧ್ವಜಗಳು ಹಾರಾಡುತ್ತಿರುವ ಶ್ರೀರಾಮ ಮತ್ತು ಹನುಮನ ಚಿತ್ರಗಳು ರಾರಾಜಿಸಿದ್ದು ಕಂಡು ಬಂದಿತ್ತು.
ಶ್ರೀದೇವಸ್ಥಾನಕ್ಕೆ ಶ್ರೀಮತಿ ಭಾರತಿ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು. ಶ್ರೀಬಯಲು ಆಂಜನೇಯ ದೇವಸ್ಥಾನ ಸಮಿತಿ ಭಕ್ತಾಧಿಗಳಿಗೆ ಬಿಳಿ ಪಂಚೆ, ಬಿಳಿ ಅಂಗಿ, ಬಿಳಿ ವಸ್ತ್ರ ಧರಿಸಿ ಪ್ರಸಾದ, ಕುಡಿಯುವ ನೀರು ಸೇರಿದಂತೆ ಭಕ್ತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.