“ಮನವೆಂಬ ಮಂದಿರದಲ್ಲಿ ಬಾಡಿದ ಹೂ”
“ಮನವೆಂಬ ಮಂದಿರದಲ್ಲಿ ಬಾಡಿದ ಹೂ”
ನನ್ನ ಮನದ ಗುಡಿಯಲ್ಲಿ ನೀನು ಅರಳುವ ಮಲ್ಲಿಗೆಯ ಹೂ ಆಗಿರು ಸದಾ ಎಂದೆ..ನಿನಾದಿ ಚುಚ್ಚುವ ಮುಳ್ಳು.
ಹೃದಯದ ದೇವಸ್ಥಾನಕ್ಕೆ ಮನಸೋತ ನೀನು ಪ್ರೀತಿಯ ನೈವೇದ್ಯ ಅರ್ಪಿಸಿದಿ ಗೆಳತಿ. ಬಡವ ನಾನೆಂದು ತಿಳಿದಾಗ.. ನೀ ಹೊಡದಿ ಗುಡಿಗೇ ಕಲ್ಲು.
ಪ್ರೀತಿಯ ಭಕ್ಷ್ಯ ನೀ ಉಣಿಸಿದಿ ಮನದ ಅಂಗಳದಲ್ಲಿ ರಂಗೋಲಿ ಹಾಕಿ. ಅದರೊಳಗೆ ನೃತ್ಯವು ನೀ ಮಾಡಿಸಿ ಮನಕ್ಕೆ ಮುದ ಕೊಟ್ಟು ಅಪ್ಪಿ ಆಲಂಗಿಸಿದಿ..ಕೊನೆಗೆ ನೀನೆ ಇಟ್ಟಿ ಎನ್ನ ಮನಕ್ಕೆ ಕೊಳ್ಳಿ.
ನಸುಕಿನ ಜಾವದಿ ಮನದ ಗುಡಿಯ ಬಾಗಿಲ ತೆರೆದು ದರ್ಶನ ಪಡೆಯದೇ ನೀ ಯಾವ ಕಾರ್ಯ ಮಾಡಲು ಹಿಂದೆಜ್ಜೆ ಹಾಕುತ್ತಿದ್ದಿ..ಆಗ..
ಈಗ ನೀ ಬಡ ಹೃದಯದ ಬಾಗಿಲಿಗೆ ಮುಳ್ಳಿನ ಬೇಲಿ.
ಬಡವನ ಗುಡಿಗೆ ಭಕ್ತರು ಕಡಿಮೆ ಹುಂಡಿಯಲ್ಲಿ ಹಣವಿಲ್ಲವೆಂದೆ ನೀ ದರ್ಶನ ಪಡೆಯುವುದ ತೊರೆದೆ.
ಹೂವಾಗಿ ಮನ ಬೆಳಗು ಎಂದುು ನಾ ಪರಿ ಪರಿಯಾಗಿ ಬೇಡಿಕೊಂಡೆ.. ಹಚ್ಚಿದ ದೀಪವೂ ನೀ ಆರಿಸಿದಿ.
ಸಿರಿತನಕ್ಕೆ ಮನಸೋತು ಚಂದುಳ್ಳ ಚಲುವನ ತೆಕ್ಕೆಗೆ ನೀ ಬಿದ್ದಿ.
ಶಿರಭಾಗಿ ಕೊರಳಿಗೆ ಮೂರು ಗಂಟು ಹಾಕಿಸಿಕೊಂಡು ನನ್ನ ಮನದ ಗುಡಿಗೆ ಕತ್ತಲು ನೀ ಹಾಕಿದಿ.
ದೇವರ ಗುಡಿಯಲ್ಲಿ ನಗುತ್ತಿರು ನೀ ಎಂದೆ ಕೊನೆಗೆ.. ಸಿರಿತನಯೆಂಬ ಕುಡಕ ಭಕ್ತನ ಹೆಂಡತಿ ನೀನಾಗಿ ಕಣ್ಣೀರಿನ ನೆತ್ತರ ಹರಿಸಿದರೆ ನಾನೇನು ಮಾಡಲಿ.. ನಾನೀಗ ಬಡವ ನೀನಾದೆ ಪರರ ವಸ್ತು. ಅದರೊಳಗೆ ನೀ ಕಟ್ಟು ಬದುಕಿನ ಗುಡಿ..!
–ಚಂದಪ್ಪ ದೋರನಹಳ್ಳಿ, ಪತ್ರಕರ್ತರು.
ವಾಸ್ತವತೆಗೆ ಹತ್ತಿರದ ಕವನ ತುಂಬಾಚನ್ನಾಗಿದೆ ಸರ್