ಪ್ರಮುಖ ಸುದ್ದಿ
ಪಲ್ಸ್ ಪೊಲೀಯೋ ಬಗ್ಗೆ ಸುಳ್ಳು ವದಂತಿ..!
ವಿವಿ ಡೆಸ್ಕ್ಃ ಸಾಮಾಜಿಕ ಜಾಲ ತಾಣಗಳಲ್ಲಿ ಅದರಲ್ಲೂ ವಾಟ್ಸಪ್ ಗಳಲ್ಲಿ ಹರಿದಾಡುತ್ತಿರುವ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಹಾಕಿಸಬೇಡಿ ಅದರಲ್ಲಿ ವೈರಸ್ ಹರಡಿದೆ. ಲಸಿಕೆಗೆ ಸಂಬಂಧಿಸಿದಂತೆ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ ಇದು ಸತ್ಯ ಸತ್ಯ ಎಂಬ ಮೆಸೇಜ್ ನ್ನು ಎಲ್ಲೆಡೆ ಫಾರ್ವರ್ಡ್ ಮಾಡಲಾಗುತ್ತಿದೆ.
ಇದು ಅಪ್ಪಟ ಸುಳ್ಳು ಸುದ್ದಿ ರಾಜ್ಯದ ಜನತೆ ಯಾರು ನಂಬಬೇಡಿ. ಯಾರೋ ಖದೀಮರು ಸುಳ್ಳು ಸಂದೇಶ ಹರಡಿಸಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರ ಕಚೇರಿಯಿಂದ ತುರ್ತು ಸಂದೇಶ ಹೊರಡಿಸಿದ್ದು,
ಯಾರೊಬ್ಬರು ವಾಟ್ಸಪ್ ನಲ್ಲಿ ಪೊಲೀಯೋ ಲಸಿಕೆ ಕುರಿತು ಹರಡಿಸಿದ ಸುದ್ದಿ ನಂಬಬೇಡಿ.
ಅದು ಫೇಕ್ ಇದೆ ಎಂದು ಇಲಾಖೆಯ ಆಯಾ ಜಿಲ್ಲಾ ಕಚೇರಿಗಳಿಗೆ ಈ ಕುರಿತು ಸೂಕ್ತ ಕ್ರಮಕ್ಕೆ ಆದೇಶ ನೀಡಲಾಗಿದೆ. ನಾಗರಿಕರು ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.