ಯಾದಗಿರಿ – ವೀರಶೈವ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆ
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸಭೆ
ಮಾ.27 ಕ್ಕೆ ಜಗದ್ಗುರು ರೇಣುಕರ ಜಯಂತಿ, ಗುರುಸಿದ್ಧ ಶಾಸ್ತ್ರಿಗಳ ಪುಣ್ಯಸ್ಮರಣೆಗೆ ನಿರ್ಧಾರ
ಯಾದಗಿರಿ : ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರದಂದು ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಘಟಕದ ಕಾರ್ಯಕಾರಿ ಸಮಿತಿ ಸಭೆಯು ಮಹಾಸಭಾ ಜಿಲ್ಲಾ ಸೋಮಶೇಖರ್ ಮಣ್ಣೂರ ಅಧ್ಯಕ್ಷತೆಯಲ್ಲಿ ಜರುಗಿತು.
ಸಭೆಯಲ್ಲಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಗೌಡ ಬಾಡಿಯಾಳ ಮಾತನಾಡಿ, ಇದೇ ಮಾಚ್ 27 ರಂದು ಜಗದ್ಗುರು ರೇಣುಕಾಚಾರ್ಯರ ಜಯಂತಿ ಮತ್ತು ವೇ||ಮೂ|| ಗುರುಸಿದ್ಧಶಾಸ್ತ್ರಿಗಳ ಪುಣ್ಯ ಸ್ಮರಣೆಯನ್ನು ಮಹಾಸಭಾದಿಂದ ಆಚರಣೆ ಮಾಡಲು ನಿರ್ಣಯ ಮಾಡಲಾಯಿತು. ಅಲ್ಲದೆ ವೀರಶೈವ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆ, ಬಸವ ಪುತ್ಥಳಿ ನಿರ್ಮಾಣ, ಸಮಾಜದ ವಿಧ್ಯಾರ್ಥಿಗಳಿಗೆ ಉತ್ತೇಜನ ಸೇರಿದಂತೆ ಅನೇಕ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ನಿರ್ಣಯಗಳಿಗೆ ಕಾರ್ಯಕಾರಿ ಸಮಿಸಿ ಸದಸ್ಯರು ಒಪ್ಪಿಗೆ ಸೂಚಿಸಿದರು.
ಈ ವೇಳೆ ಸಮಾಜದ ಹಿರಿಯರಾದ ಬಸವಂತರಾಯಗೌಡ ಮಾ|| ಪಾ||, ಅಯ್ಯಣ್ಣ ಹುಂಡೇಕಾರ, ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರು, ಮಹಾಸಭಾ ಯುವ ಘಟಕದ ಅವಿನಾಶ ಜಗನ್ನಾಥ ಅವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಡಾ. ಸಿದ್ಧಪ್ಪ ಹೊಟ್ಟಿ, ಬಂಡೆಪ್ಪ ಆಕಳ, ಅನ್ನಪೂರ್ಣಮ್ಮ ಜವಳಿ, ನೂರಂದಪ್ಪ ಲೇವಡಿ, ರುದ್ರಗೌಡ ಮಾ.ಪಾ., ಮಹಿಪಾಲರೆಡ್ಡಿ ವಕೀಲರು, ನಾಗನಗೌಡ ಬೆಳಗೆರೆ, ಬಸವರಾಜ್ ಮೋಟ್ನಳ್ಳಿ ಸೇರಿದಂತೆ ಅನೇಕರು ಇದ್ದರು.