ಕಾವ್ಯ
ಸೊಬಗು ಸೀಮೆಯ ಊರು ನಿನ್ನದು..ಕಾಸೆ ಕಾವ್ಯದಲ್ಲಿ ಮೂಡಿದ ಪ್ರೀತಿ, ಮಮತೆ
ಜಗವ ಮರೆವ ಒಲವಾ
ಗೆಳತಿ ನೀ ನನ್ನ ಹೃದಯದೊಡತಿ
ಸದ್ದು ಗದ್ದಲವಿಲ್ಲದೆ ನಡೆದು ಬಂದೆ
ಬಲು ಮೆಲ್ಲಗೆ ಅರಿವಾಗುವ ಮೊದಲೇ
ದಟ್ಟ ಪ್ರೇಮದ ದಿಟ್ಟ ಕುರುಹು
ಸತ್ಯ ನಿತ್ಯ ಅನುರಾಗ ಧಾರೆ
ಬೇಕಿಲ್ಲ ಬೇರೆ ಏನು ನೀನಲ್ಲದೆ
ತುತ್ತು ಮುತ್ತಿಟ್ಟು ಬೆಳೆಸಿದ ವಾತ್ಸಲ್ಯ
ಬೇಕಾದ್ದು ಕೊಡಿಸಿ ಕಾಪಾಡಿದ ಮಮತೆ
ತೋರಿಸಲಿ ಹೇಗೆ ನಾ ಅಷ್ಟು ಪ್ರೀತಿಯಾ
ತಂದೆ ಆಗಲೇ ತಾಯಿ ಆಗಲೇ
ತೊರೆದು ಬಂದಿರುವೆ ನನಗಾಗಿ ಅವರ
ತುಂಬಬೇಕಿದೆ ಜಗವ ಮರೆವ ಒಲವಾ
ತುಂಟಾಟದಿ ಕಚಗುಳಿ ಇಟ್ಟು ನಕ್ಕ ಅಕ್ಕರೆ
ಬೆನ್ನೆಲುಬಾಗಿ ನಿಂತ ಧೈರ್ಯದ ಸಕ್ಕರೆ
ನೋಡಿಕೊಳ್ಳಬೇಕು ನಿನ್ನ ಅಷ್ಟು ಚೆನ್ನಾಗಿ
ಸಹೋದರ ಸಹೋದರಿ ಗೆಳತಿಯರು
ನಾನಾಗಬಲ್ಲೆನಾ ಅವು ಎಲ್ಲವೂ
ನೀಗುವಂತೆ ಪ್ರತಿ ಕೊರತೆ ಏನು ಮಾಡಲಿ
ನೀ ಬರುವ ದಾರಿಲಿ ಮಲ್ಲೆ ಹೂ ಹಾಸು
ಸೊಬಗು ಸೀಮೆಯ ಊರು ನಿನ್ನದು
ಸೃಷ್ಟಿಸಬೇಕೆ ನಾನಿಲ್ಲಿ ಆ ಹಿತ ವಾತಾವರಣ
ಆದರೂ ಆಗದಿದ್ದರೂ ಪ್ರಯತ್ನಿಸುವೆ
ಜೀವವೆಂದೂ ನಂಬಿಕೊಂಡು ಬಂದ ನಿನ್ನ
ನನ್ನ ಉಸಿರಂತೆ ನೋಡಿಕೊಳ್ಳುವ ಹಂಬಲ
ಜಗವ ಮರೆವ ಒಲವ
ಬಸವರಾಜ ಕಾಸೆ ಸರ್ ಅವರ ಈ ಕವನ
ತುಂಬಾ ಸುಂದರವಾಗಿದೆ