ನಿನ್ನ ನೆನಪು “ರಸ ಹಿಂಡಿದ ಕಬ್ಬು” ಪತ್ರಕರ್ತ ಚಂದಪ್ಪ ದೋರನಹಳ್ಳಿ ಬರೆದ ಕವಿತೆ
ನಿನ್ನ ನೆನಪು “ರಸ ಹಿಂಡಿದ ಕಬ್ಬು”
ಚಕಚಕನೆ ಹೊಳೆಯುವ ಹೃದಯದಲ್ಲಿ ನೀ ಕಟ್ಟಿದಿ ಪ್ರೀತಿಯ ತೊಟ್ಟಿಲು. ಮೃದು ಮಧುರ ಸುಗಂಧಭರಿತದ ಉಯ್ಯಾಲೆಯ ಸ್ಪರ್ಶಕ್ಕೆ ಮನದುಂಬಿಕೊಂಡು ಉಕ್ಕಿ ಹರಿಯುತ್ತು ಅಂದು ಖುಷಿಯ ರಸವು.. ಇಂದು ಹರಿಯುತ್ತಿದೆ ನಿನ್ನ ನೆನಪಿನ ಕಷ್ಟದ ರಸವು..!!
ನಿನ್ನ ತೊಳುತೆಕ್ಕೆಯಲ್ಲಿ ನಾ ಬಿಗಿದಪ್ಪಿಕೊಂಡಾಗ ಮನವೆಲ್ಲ ಕಚಗುಳಿಯಿಟ್ಟು ಆಹ್ಲಾದತೆಯ ಉನ್ಮಾದ ಅಲೆಯಲ್ಲಿ ಹೃದಯ ತೇಲಿತು. ಎದೆ ಬಡಿತ ಹೆಚ್ಚಿಸಿ ಬಿಸಿಯುಸಿರು ಬೆರೆತು ಮನದಲ್ಲಿ ಹರಿಯುತ್ತು ಅಂದು ಬೆಲ್ಲ ಸಕ್ಕರೆಯ ಪಾಣಕ…!ನೀನಿಲ್ಲದೆ ಇಂದು ಹರಿಯುತ್ತಿದೆ ಬೇವಿನ ರಸದ ಕಹಿ ಪಾಣಕ..!!
ತುಂಟತನ, ಹುಂಬತನ ಪ್ರೀತಿಯಲ್ಲಿ ಅಂಬೆಗಾಲಿಕ್ಕಿದರೂ ಕ್ಷಣಾರ್ಧದಲ್ಲಿ ಮೈಮರೆತು ಮಿಂಚಿನ ಹುಳದಂತೆ ಕಣ್ಣಲ್ಲಿ ಬೆಳಕಿನ ಮಹಾಪೂರ ಚಿಮ್ಮಿಸಿ ಮುಷ್ಟಿಬಿಗಿ ಹಿಡಿದು ಹವಳದ ತುಟಿಯಲ್ಲಿ ಝಗ್ಗನೆ ತುಳುಕುವ ಆ ತುಟಿಯ ಸವಿ ಮುತ್ತು ಅಂದು ಹರಿಸಿತು ನಗುವಿನ ಕಣ್ಣೀರು..! ನೀನಿಲ್ಲದೆ ಇಂದು ಹರಿಯುತ್ತಿದೆ ದುಃಖದ ಕಣ್ಣೀರು..!
ಪ್ರೇಯಸಿ ನೀ ಕೊಟ್ಟ ನೆನಪುಗಳು ಹಗಲು ರಾತ್ರಿ ಎನ್ನದೆ ನನ್ನ ಮಾಸಿದ ಎದೆಯಲ್ಲಿ ಗರಿಗೆದರಿ ನವಿಲುನಂತೆ ಕುಣಿಯುತ್ತಿವೆ. ನಿನ್ನ ಪ್ರತಿಬಿಂಬದ ನೋಟ ಕಾಣದಂತ ನೇತ್ರ ಥಟ್ಟನೆ ಧಾವಿಸಿ ಕೊಡುವೇಯಾ? ಮತ್ತೇ ಮನವು ಹರಿಸಲಾರೆ ಬಿರುಕುಗೊಂಡ ಹೃದಯದೊಡೆಗೆ..
–ಚಂದಪ್ಪ.ದೋರನಹಳ್ಳಿ.