ಕಾವ್ಯ
ಕಪ್ಪುಕುರುಳಿಗೆ ಬೆಪ್ಪನಾಗಿಹೆ…ಕವಿತ್ರಿ ಜಯಶ್ರೀ ಭ.ಭಂಡಾರಿ ಬರೆದ ಕವಿತೆ
ಕಪ್ಪುಕುರುಳಿಗೆ ಬೆಪ್ಪನಾಗಿಹೆ…
ಮೊಂಡು ಮೂಗಿನವಳು ಮುದ್ದಾಗಿಹಳು
ತೊಂಡೆಹಣ್ಣಿನಂತ ತುಟಿಯಲಿ ತುಂಟ ನಗೆಬೀರಿಹಳು
ಓರೆಗಣ್ಣಿನಲಿ ಅದ್ಯಾರನೋ ದಿಟ್ಟಿಸುತಿಹಳು
ಓಲಾಡುವ ಜುಮುಕಿಯಲಿ ಜುಮ್ಮನೆನಿಸುತಿಹಳು
ಕಾಮನಬಿಲ್ಲಿನ ಹುಬ್ಬಿನಂದದವಳೆ
ನಿಮಿಲಿತ ನೇತ್ರದ ನೀರೆ ನೀಲವೇಣಿ
ರೇಷ್ಮೇಯಂಥ ಕಪ್ಪುಕುರುಳಿನವಳೆ
ಮುದ್ದಾಗಿ ಉಲಿದರೆ ಮುತ್ತುಗಳೆ ಉದುರುವವು
ಕಂಗಳಕಾಂತಿಯ ಕನ್ನಿಕೆಯಿವಳು
ಅಂಗಳಕೆ ಅಡಿಯಿಟ್ಟರೆ ನೈದಿಲೆ ನಾಚುವದು
ಬಾನಂಗಳದ ಶಶಿಯು ಮರೆಮಾಚುವನು
ಕಪ್ಪುಕೂದಲ ಮೇಘಗಳ ಮರೆಯಲಿ.
ಚಲುವೆಯಿವಳೊಮ್ಮೆ ಬಳಿಬಂದರೆ
ಮುಗಳ್ನಗೆಯ ಚೆಲ್ಲಿ ನಿಂತರೆ
ಹೃದಯದವಾಗುವದು ಒಲವ ಅಕ್ಕರೆ
ಸಾಂಗತ್ಯಕೆ ಸಹಿಹಾಕಿದರೆ ಬದುಕು ಸಕ್ಕರೆ
ನನ್ನಲಿ ನಾನಿಲ್ಲ ಮೈಮರೆತಿಹೆನಲ್ಲ
ಬೆಪ್ಪನಾಗಿಹೆನು ಮುದ್ದಾದ ಗುಳಿಕೆನ್ನೆಗೆ
ಅರಿವು ದೂರಾಗಿ ಬೆವರುತಿಹೆನು ಬಾರಿ ಬಾರಿ
ಇದೇನ ಮೋಹ ಇದೇನ ಭ್ರಾಂತಿ ಚಲುವೆ ಹೇಳು ಸಾರಿ ಸಾರಿ….
-ಜಯಶ್ರೀ ಭ.ಭಂಡಾರಿ.
ಬಾದಾಮಿ.
9986837446.