ಬೆಳ್ಳಂಬೆಳಗ್ಗೆ ಶಹಾಪುರ ಸಂಪೂರ್ಣ ಸ್ತಬ್ಧಃ ಪೊಲೀಸರಿಗೆ ಹ್ಯಾಟ್ಸಪ್
ಶಹಾಪುರ ಬೆಳ್ಳಂಬೆಳಗ್ಗೆ ಸಂಪೂರ್ಣ ಲಾಕ್ಃ ಪೊಲೀಸ್ ಸಿಬ್ಬಂದಿಗೆ ವಿವಿ ಬಳಗ ಹ್ಯಾಟ್ಸಪ್
ವಿವಿ ಡೆಸ್ಕ್ಃ ಯಾದಗಿರಿ ಜಿಲ್ಲೆಯಾದ್ಯಂತ ಇಂದಿನಿಂದ ಮೂರು ದಿನಗಳ ಕಾಲ ಕಠಿಣ ಲಾಕ್ ಡೌನ್ ಜಾರಿಗೊಳಿಸಿರುವ ಕಾರಣ ಪೊಲೀಸರು ಬೆಳ್ಳಂಬೆಳಗ್ಗೆ ನಗರದಾದ್ಯಂತ ಸಂಚರಿಸಿ ಸಂಪೂರ್ಣ ಲಾಕ್ ಮಾಡುವಲ್ಲಿ ಕರ್ತವ್ಯ ನಿರತರಾಗಿರುವದು ಕಂಡು ಬಂದಿತು.
ನಗರದ ಪ್ರಮುಖ ರಸ್ತೆ, ಮಾರುತಿ ರಸ್ತೆ, ಸೇರಿದಂತೆ ಹಳೇ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ಎಲ್ಲಡೆ ಜನ ಹೊರಬರದಂತೆ ಬಂದ ವಾಹನಗಳನ್ನು ವಶಕ್ಕೆ ಪಡೆದರು. ಅಲ್ಲದೆ ಆಸರ್ ಮೊಹಲ್ಲಾ, ಇತರೆ ಬಡಾವಣೆಗಳಲ್ಲಿ ಗುಂಪು ಗುಂಪಾಗಿ ಕುಳಿತವರಿಗೆ ಲಾಠಿ ಬಿಸಿ ಮುಟ್ಟಿಸಿದರು.
ಬೆಳಗ್ಹೆ7-30 ರ ಸಮಯದಲ್ಲಿಯೇ ಇಡಿ ಶಹಾಪುರ ಬಿಕೋ ಎನ್ನುವಂತೆ ಮಾಟಿರುವದು ಪೊಲೀಸರ ಕರ್ತವ್ಯಪರತೆ ಎಷ್ಟಿದೆ ಎಂಬುದು ತೋರಿಸಿ ಕೊಡುತ್ತದೆ. ನಿಜಕ್ಕೂ ಅವರಿಗೊಂದು ಸಲಾಮು.
ಪಿಐ ಚನ್ನಯ್ಯ ಹಿರೇಮಠ ಹಾಗೂ ಅವರ ಸಿಬ್ಬಂದಿ ಬೆಳಗಿನ ಜಾವದಿಂದಲೇ ರಸ್ತೆಗಿಳಿದು ಬಿಸಿ ಮುಟ್ಟಿಸುವ ಕಾರ್ಯದಿಂದ ಇಡಿ ಪಟ್ಟಣ ಬಿಕೋ ಎನ್ನುವಂತಾಗಿತ್ತು. ಒಂದು ನರಪಿಳ್ಳೆಯು ಸಂಚರಿಸುವದು ಕಂಡು ಬರಲಿಲ್ಲ.
ಆಸರ್ ಮೊಹಲ್ಲದಲ್ಲಿ ಬೇಕಾ ಬಿಟ್ಟಿಯಾಗಿ ಸಂಚರಿಸುವ ಹರಟೆ ಹೊಡೆಯುತ್ತಿರುವ ಜನರನ್ನು ಚದುರಿಸಿ ಮನೆಗೆ ಕಳುಹಿಸಲು ಹರಸಾಹಸವೇ ಮಾಡಿದರು. ಜನರನ್ನು ಬೆನ್ನಟ್ಟಿ ಓಡಿಸಿದರು. ಸುಕ್ಷಿತರಿಗೂ ಅಕ್ಷರಸ್ಥರಿಗೂ ವ್ಯತ್ಯಾಸವಿಲ್ಲದಂತ ಪರಿಸ್ಥಿತಿ. ತಿಳಿದವರೆ ಕೊರೊನಾ ನಿಯಮ ಮೀರಿ ನಡೆದು ಕೊಳ್ಳುತ್ತಿರುವಸು ವಿಪರ್ಯಾಸ.
ನಾಗರಿಕರೇ ಗಮನಿಸಿ ಪೊಲೀಸರು ಮನುಷ್ಯರು..ಅವರಿಗೂ ಕುಟುಂಬವಿದೆ..
ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಜೀವದ ಹಂಗು ತೊರೆದು ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ಉಡಾಫೆ ಮಾಡದೆ ಅವರ ಶ್ರಮಕ್ಕೆ ಬೆಲೆ ಕೊಡುವದನ್ನು ಕಲಿಯಬೇಕಿದೆ.

ಮೈಕ್ ಮೂಲಕ, ಮಾಧ್ಯಮದಲ್ಲಿ ಪ್ರಕಟಣೆ ಹೊರಡಿಸಿ ನಾಗರಿಕರಿಗೆ ವಿಷಯ ಮುಟ್ಟಿಸಿದರೂ, ಕೊರೊನಾ ಜಾಗೃತಿ ಮೂಡಿಸಿದರು ಜನ ಗುಂಪಾಗಿ ಕುಳಿತು ಹರಟೆ ಹೊಡೆಯುವದು ಬಿಡುತ್ತಿಲ್ಲ. ಕೊರೊನಾದಿಂದ ಸಾಕಷ್ಟು ಸಾವು ನೋವುಂಡರೂ ನಿರ್ಲಕ್ಷ್ಯ ಸಲ್ಲದು.
ಪೊಲೀಸರಿಗೂ ಅವರ ಕುಟುಂಬ ರಕ್ಷಣೆ ಕಾಳಜಿ ಇದೆ. ಅದನ್ನು ಬದಿಗೊತ್ತಿ ನಮ್ಮ ನಿಮ್ಮೆಲ್ಲರ ರಕ್ಷಣೆಗಾಗಿ ಪರಿಶ್ರಮ ಪಡುತ್ತಿದ್ದಾರೆ.
ದಯವಿಟ್ಟು ಎಲ್ಲರೂ ಕೊರೊನಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ನಿಮ್ಮ ಜೀವ ಉಳಿಸಿಕೊಳ್ಳಿ ಮತ್ತೊಬ್ಬರ ಜೀವವು ಉಳಿಸಿ. ಕೊರೊನಾ ಮಹಾಮಾರಿ ಬಗ್ಗೆ ಅರಿತಿದ್ದೂ ಉಡಾಫೆ ಮಾಡುವದು ಸರಿಯಲ್ಲ. ನಿಮಗಾಗಿ ಪೊಲೀಸರು ಹಗಲು ರಾತ್ತಿ, ಬಿಸಿಲು ಲೆಕ್ಕಿಸದೆ ಕರ್ತವ್ಯದಲ್ಲಿದ್ದಾರೆ ಎಂಬ ಅರಿವಿರಲಿ.
ಖಾಕಿ ಹಾಕಿಕೊಂಡವರು ಮನುಷ್ಯರೇ, ಅವರಿಗೂ ತಂದೆ, ತಾಯಿ, ಹೆಂಡತಿ ಮಕ್ಕಳು ಇದ್ದಾರೆ. ನೀವೇನೋ ನಾನೊಬ್ಬನೆ ಹೊರಗಡೆ ಹೋಗಿ ಬರುವೆ ಮನೆಯವರೆಲ್ಲ ತಮ್ಮ ಮನೆಯಲ್ಲಿಯೇ ಸೇಫ್ ಆಗಿದ್ದಾರೆ ಅಂದ್ಕೋಬೇಡಿ..
ಇನ್ನೂ ಪೊಲೀಸರಿಗೂ ಕುಟುಂಬವಿದೆ ಎನ್ನುವದು ಮರೆಯಬೇಡಿ..ಎಷ್ಟೋ ಜನರು ಹಲವಾರು ಕಂಪನಿಯಲ್ಲಿ ಕೆಲಸ ಮಾಡುವವರು ಹಲವಾರು ವೃತ್ತಿಗಳನ್ನು ತೊರೆದು ತಮ್ಮ ಮತ್ತು ಅವರ ಕುಟುಂಬ ರಕ್ಷಣೆಗಾಗಿ ವಾಪಸ್ ತಮ್ಮೂರಿಗೆ ಬಂದು ಹೊಲದಲ್ಲಿಯೋ ತೋಟದಲ್ಲಿಯೋ ಮನೆ ಮಾಡಿಕೊಂಡಿದ್ದಾರೆ.
ಆದರೆ ನಮ್ಮ ಹೆಮ್ಮೆಯ ಪೊಲೀಸರು, ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೋವಿಡ್ ಮಹಾಮಾರಿಗೆ ಹೆದರದೆ ಕರ್ತವ್ಯದ ಗೌರವ ಕಾಪಾಡುವ ಮೂಲಕ ಜೀವ ಒತ್ತೆ ಇಟ್ಟು ಕೆಲಸ ಮಾಡುತ್ತಿದ್ದಾರೆ ಎಂಬ ನೆನಪಿರಲಿ.
ಎಷ್ಟೋ ವೈದ್ಯರೂ, ಪೊಲೀಸರು ಮಹಾಮಾರಿಗೆ ಬಲಿಯಾದರೂ ಯಾರೊಬ್ಬರು ಹೆದರದೆ ಮಹಾಮಾರಿ ತಡೆಗೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ನಾವೆಲ್ಲ ಅವರೊಂದಿಗೆ ಕೈಜೋಡಿಸಬೇಕಿದೆ.
ಇಂದು ಕೊರೊನಾ ತಡೆಗೆ ಜಿಲ್ಲಾಡಳಿತ ಹೊರಡಿಸಿದ ಮೂರು ದಿನಗಳ ಕಠಿಣ ಲಾಕ್ ಡೌನ್ ಸಂಪೂರ್ಣ ಬಂದ್ ಸಮರ್ಪಕವಾಗಿ ಜಾರಿಗೆ ತರಲು ಶಹಾಪುರ ಪಿಐ ಚನ್ನಯ್ಯ ಹಿರೇಮಠ ತಂಡ ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಕ್ರಮಕ್ಕೆ ಮುಂದಾಗಿರುವದು ಅಲ್ಲದೆ ಬಡಾವಣೆಯಲ್ಲಿ ಜಮಾವಣೆಗೊಂಡು ಕುಳಿತವರಿಗೆ ಲಾಠಿ ಬೀಸಿ ಚದುರಿಸುವಲ್ಲಿ ಸಫಲರಾಗಿರುವ ಕಾರಣ ಅವರ ಕರ್ತ್ಯವಪರತೆಗೆ ವಿವಿ ಬಳಗದಿಂದ ಬಿಗ್ ಹ್ಯಾಟ್ಸಪ್.
ದಯವಿಟ್ಟು ಎಲ್ಲರೂ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಜೀವ ಉಳಿಸಿಕೊಳ್ಳಿ.. ಜೀವ ಉಳಿಸಿ.. ಎಂಬುದೇ ವಿನಯವಾಣಿ ಕಳಕಳಿ.