ಪ್ರಮುಖ ಸುದ್ದಿವಿನಯ ವಿಶೇಷ
ಇನ್ಫೋಸಿಸ್ ಕಂಪನಿಯಲ್ಲಿನ ಸಾವಿರಾರು ಉದ್ಯೋಗಿಗಳಿಗೂ ಬಂತು ಕುತ್ತು.!
ಇನ್ಫೋಸಿಸ್ ನಲ್ಲೂ ಉದ್ಯೋಗ ಬಿಕ್ಕಟ್ಟು- ಸಾವಿರಾರು ಉದ್ಯೋಗಿಗಳ ವಜಾಗೆ ನಿರ್ಧಾರ
ವಿವಿಡೆಸ್ಕ್ ಃ ದೇಶದ ಪ್ರತಿಷ್ಟಿತ ಐಟಿ ಕಂಪನಿಯಾದ ಇನ್ಫೋಸಿಸ್ ನಲ್ಲೂ ಉದ್ಯೋಗ ಕಡತ ಆರಂಭವಾಗಿದೆ.
ಈ ಕಂಪನಿಯಲ್ಲಿ ಮಧ್ಯಮ ಹಾಗೂ ಉನ್ನತ ಹುದ್ದೆಯಲ್ಲಿರುವ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದು ಹಾಕಲು ಕಂಪನಿ ನಿರ್ಧರಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾದಲಿ ವರದಿಯಾಗಿದೆ.
ಕಂಪನಿಯಿಂದ ಶೇ.10 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರೊಸಲಾಗಿದೆ ಎಂದು ಹೇಳಲಾಗುತ್ತಿದೆ.
ಇನ್ಫೋಸಿಸ್ ನ ಜಾಬ್ ಲೆವೆಲ್ 6, 7, ಮತ್ತು 8 ರ ಶ್ರೇಣಿಯಲ್ಲಿ ಒಟ್ಟು 30.092 ಉದ್ಯೋಗಿಗಳಿದ್ದು, ಅದರಲ್ಲಿ ಜೆಲ್ 6 ಸೀನಿಯರ್ ವ್ಯವಸ್ಥಾಪಕರು ಲೆವೆಲ್ ನ ಒಟ್ಟು 2200 ಉದ್ಯೋಗಿಗಳನ್ನು ತೆಗೆದು ಹಾಕಲಾಗಲಿದೆ ಎಂದು ಸುದ್ದಿಯಾಗಿದೆ.
ಅಲ್ಲದೆ ಜೆಲ್ 3 ಮತ್ತು ಕೆಳ ಹಂತದ ಜೆಲ್ 4, 5 ಹಂತದಲ್ಲಿ ಶೇ.2.5 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ನಿರ್ಧಾರವನ್ನು ಕಂಪನಿ ಮಾಡಿದೆ ಎನ್ನಲಾಗಿದೆ.
ಮಧ್ಯಮ ಶ್ರೇಣಿಯಲ್ಲಿ ಒಟ್ಟು 1.1 ಲಕ್ಷ ಉದ್ಯೋಗಿಗಳಿದ್ದು, ಅದರಲ್ಲಿ 4 ರಿಂದ 10 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.