ಪ್ರವಾಹ ಭೀತಿಃ ಅಗತ್ಯ ಕ್ರಮಕ್ಕೆ ಪ್ರಿಯಾಂಕ್ ಖರ್ಗೆ ಸೂಚನೆ
ಪ್ರವಾಹ ಭೀತಿಃ ಅಗತ್ಯ ಕ್ರಮಕ್ಕೆ ಖರ್ಗೆ ಸೂಚನೆ
ಕಲಬುರಗಿಃ ಜಿಲ್ಲೆಯಾದ್ಯಂತ ವರುಣನ ಆರ್ಭಟ ಶುರುವಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಹಾಗೂ ಸೂಕ್ತ ಕ್ರಮಕೈಗೊಳ್ಳಲು ಚಿತ್ತಾಪುರ, ಶಹಾಬಾದ್ ಹಾಗೂ ಕಾಳಗಿ ತಾಲೂಕು ತಹಶೀಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯಾಧಿಕಾರಿಗಳೊಂದಿಗೆ ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು.
ಕಳೆದ ಬಾರಿ ಉಂಟಾದ ನೆರೆಯಿಂದಾಗಿ ಹಲವು ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡಿದ್ದರೆ, ಅನೇಕ ಜನರು ನಿರ್ವಸಿತರಾಗಿದ್ದರು.
ಅಪಾರ ಪ್ರಮಾಣದ ಆಸ್ತಿ – ಪಾಸ್ತಿಯೂ ನಷ್ಟವಾಗಿತ್ತು. ಈ ಬಾರಿಯೂ ಪ್ರವಾಹದ ಎಚ್ಚರಿಕೆ ಘಂಟೆ ಬಾರಿಸುತ್ತಿದ್ದು, ಒಂದು ವೇಳೆ ಪ್ರವಾಹ ಉಂಟಾದರೆ ಸಾರ್ವಜನಿಕರ ಆಸ್ತಿ ಪಾಸ್ತಿ ಹಾಗೂ ರೈತರ ಬೆಳೆ ಹಾನಿಯಾಗದಂತೆ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಗತ್ಯ ಸಲಹೆ ಸೂಚನೆ ನೀಡಿದರು.
ತಾಲೂಕಿನ ಎಲ್ಲಾ ಅಧಿಕಾರಿಗಳು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಸಂಭವಿಸಬಹುದಾದ ನೆರೆಯನ್ನು ಎದುರಿಸಲು ಇಡಿ ಚಿತಾಪುರ ಆಡಳಿತ ಸಜ್ಜಾಗಿ ನಿಂತಿದೆ. ನಾನೇ ಖುದ್ದಾಗಿ ಈ ಕುರಿತು ಗಮನ ಹರಿಸುತ್ತಿದ್ದು, ನೆರೆಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಕ್ಷೇತ್ರದ ಜನರಿಗೆ ಭರವಸೆ ನೀಡಿದ ಅವರು,
ವಾಟ್ಸಾಪ್ ಮೂಲಕ ಚಿತ್ತಾಪುರ ಕ್ಷೇತ್ರದ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ತಮ್ಮೊಂದಿಗೆ ಹಂಚಿಕೊಳ್ಳಲು
ವಾಟ್ಸಾಪ್ ಸಹಾಯವಾಣಿ ಸಂಖ್ಯೆ : 9900 913 913 ನೀಡಿದರು.