ಶಹಾಪುರ: ಜ. 26 ರಂದು 200 ಟ್ರ್ಯಾಕ್ಟರ್‍ಗಳ ಪ್ರತಿಭಟನಾ ಮೆರವಣಿಗೆ
ಜ. 26 ರಂದು 200 ಟ್ರ್ಯಾಕ್ಟರ್‍ಗಳ ಪ್ರತಿಭಟನಾ ಮೆರವಣಿಗೆ
ಶಹಾಪುರ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ದಂಡಿಯಾತ್ರೆ ಸತ್ಯಾಗ್ರಹ ನೆನಪಿಸುವಂಥ, ದೆಹಲಿಯಲ್ಲಿ ರಕ್ತ ಹೆಪ್ಪುಗಟ್ಟುವ ಚಳಿಯಲ್ಲಿ 58 ದಿನಗಳಿಂದ ನಡೆದಿರುವ ರೈತರ ಹೋರಾಟ ಐತಿಹಾಸಿಕವಾಗಿದ್ದು, ಆಳುವ ಸರ್ಕಾರ ಒಣಪ್ರತಿμÉ್ಠ ಮೊಂಡು ಹಠ ಬಿದ್ದು, ರೈತರ ಹಿತ ಕಡೆಗಣಿಸುತ್ತ ಮಾರಕವಾಗಿರುವ ಕೃಷಿ ಕಾಯ್ದೆ ಜಾರಿಗೆ ತರಲು ಹೊರಟಿದ್ದು, ರೈತರ ಜೀವನ ವಿನಾಶಕ್ಕೆ ಕಾರಣವಾಗಿದೆ, ಎಂದು ಹಿರಿಯ ರೈತ ಮುಖಂಡರು ರೈತ ಒಕ್ಕೂಟ ಹಿತರಕ್ಷಣಾ ಸಮಿತಿಯ ಭಾಸ್ಕರರಾವ ಮುಡಬೂಳ ತಿಳಿಸಿದರು.
ದೆಹಲಿ ಕೈಗೊಂಡ ರೈತರ ಪ್ರತಿಭಟನೆಗೆ ಬೆಂಬಲಿಸಿ ನಗರದಲ್ಲಿ ಜ.26 ರಂದು ಬೃಹತ್ ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ರೈತ ಹಿತ ರಕ್ಷಣಾ ಸಮಿತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅನ್ನದಾತರನ್ನು ಸಂಕಷ್ಟಕ್ಕೆ ಗುರಿ ಮಾಡಿದ ಪರಿಣಾಮ ಹಿಂದಿನ ಸರ್ಕಾರ ಸಂಪೂರ್ಣ ಜನರಿಂದ ಅವಕೃಪೆಗೊಳಗಾದವು, ಈಗಿನ ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಏಳು ವರ್ಷಗಳಿಂದ ದೇಶವಾಳುತ್ತಿದ್ದು, ರೈತರನ್ನು ಸಂಪೂರ್ಣ ದುರ್ಗತಿಗೆ ತಳ್ಳುವಂತಹ ಕೃಷಿ ಕಾಯ್ದೆ ತಂದು ಇಡೀ ದೇಶದ ರೈತರ ವಿರೋಧಕ್ಕೆ ಕಾರಣವಾಗಿದ್ದು, ರೈತರ ಹಿತ ಮರೆತ ಸರ್ಕಾರ ಬಗ್ಗೆ ರೈತ ಆಕ್ರೋಶಗೊಂಡಿರುವುದಕ್ಕೆ 58 ದಿನಗಳಿಂದ ದೆಹಲಿಯಲ್ಲಿ ಅಹಿಂಸಾತ್ಮಕವಾಗಿ ನಡೆದ ಐತಿಹಾಸಿಕ ಹೋರಾಟ ಸಾಕ್ಷಿಯಾಗಿದೆ ಎಂದರು.
ವಿವಾದಾತ್ಮಕ 3 ಕೃಷಿ ಕಾಯ್ದೆ ಹಿಂತೆಗೆದುಕೊಂಡು ರೈತರ ಬೆಳೆಗೆ ಬೆಂಬಲ ಬೆಲೆ (ಎಂಎಸ್‍ಪಿ) ಎಲ್ಲ ಮಾನದಂಡಗಳನ್ನು ಅಳವಡಿಸಿ ನೀಡಲೇಬೇಕು, ಆದರೆ ಕೇಂದ್ರ ಸರ್ಕಾರವು ರೈತರ ಬಗ್ಗೆ ತೋರುವ ಅನುಕಂಪ ಮಾತಿಗೂ ಕೃತಿಗೂ ಸಂಬಂಧವಿಲ್ಲದಂತಾಗಿದೆ, ಹೀಗಾಗಿ ಬರುವ 26ರಂದು ದೊಡ್ಡಪ್ರಮಾಣದ ಹೋರಾಟ ದೆಹಲಿಯಲ್ಲಿ ಆಯೋಜಿಸಿದ್ದು, ಅದನ್ನು ಬೆಂಬಲಿಸಿ ನಗರದಲ್ಲಿ ಪಕ್ಷಾತೀತವಾಗಿ 11ಗಂಟೆಗೆ 200 ಟ್ರ್ಯಾಕ್ಟರ್‍ಗಳ ಪ್ರತಿಭಟನಾ ಮೆರವಣಿಗೆ ನಡೆಯಲಿದೆ, ರೈತ ಮುಖಂಡರು ಕೇಂದ್ರದ ಹೊಸ ಕೃಷಿ ಕಾಯ್ದೆಗಳನ್ನು ಖಂಡಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಖಾಲೀದ ಅವರು ಮಾತನಾಡಿ ರೈತರ ಹಿತದೃಷ್ಟಿಯಿಂದ ಅಂದಿನ ಶಾಂತಿಯುತ ಹೋರಾಟದಲ್ಲಿ ಸರ್ವರು ಪಕ್ಷಾತೀತವಾಗಿ ಭಾಗವಹಿಸಲು ಮನವಿ ಮಾಡಿದರು. ರೈತಪರ ಕಾಳಜಿಯ ಹಿತರಕ್ಷಣಾ ಸಮಿತಿಯ ಆರ್.ಚನಬಸ್ಸು ವಕೀಲರು, ಹಿರಿಯ ಮುಖಂಡ ಗಿರೆಪ್ಪ ಗೌಡ ಬಾಣತಿಹಾಳ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಸಿದ್ದಣ್ಣ ಬಡಿಗೇರ, ಮಹ್ಮದ್‍ಖಲೀಲ ಇದ್ದರು.