ಪ್ರಮುಖ ಸುದ್ದಿ
ಭೀಮಾತೀರದ ಹಂತಕನ ಹತ್ಯೆ ಕೇಸ್ : ಪಿಎಸ್ ಐ ಗೋಪಾಲ್ ಬಂಧನ!?
ವಿಜಯಪುರ : ಭೀಮಾತೀರದ ಹಂತಕ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದ್ದು ತನಿಖೆ ಚುರುಕುಗೊಂಡಿದೆ. ಡಿವೈಎಸ್ಪಿ ಜನಾರ್ಧನ್ ನೇತೃತ್ವದ ಟೀಮ್ ವಿಜಯಪುರದಲ್ಲಿ ಮೊಕ್ಕಾಂ ಹೂಡಿದ್ದು ತನಿಖೆ ನಡೆಸುತ್ತಿದೆ. ಅಂತೆಯೇ ಚಡಚಣ ಪಿಎಸ್ಐ ಆಗಿದ್ದ ಗೋಪಾಲ್ ಹಳ್ಳೂರ್ ಅವರನ್ನೂ ಸಿಐಡಿ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದು ಬಂದಿದೆ.
ಗಂಗಾಧರ ಚಡಚಣ ನಿಗೂಢ ಹತ್ಯೆಯ ಹಿಂದೆ ಪ್ರಭಾವಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪಿಎಸ್ ಐ ಹಳ್ಳೂರ್ ಅವರನ್ನೂ ಸಹ ಅಧಿಕಾರಿಗಳು ಈ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.