ಪುಟಪರ್ತಿ ಸಾಯಿಬಾಬರ ಜನ್ಮ ದಿನಾಚರಣೆ ಅನ್ನಸಂತರ್ಪಣೆ
ಪುಟಪರ್ತಿ ಸಾಯಿಬಾಬರ ಜನ್ಮ ದಿನಾಚರಣೆ ಅನ್ನಸಂತರ್ಪಣೆ
yadgiri, ಶಹಾಪುರಃ ದೇಶ ಕಂಡ ಅಪರೂಪದ ಸಂತ ಪುಟಪರ್ತಿ ಸಾಯಿಬಾಬರ ಜನ್ಮ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿನ ಜ್ಯೋತಿರ್ಲಿಂಗ ಮಠದ ಆವರಣದಲ್ಲಿ ಪುಟಪರ್ತಿ ಸಾಯಿಬಾಬರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಅಲ್ಲದೆ ನಗರದ ಕೊರವರ ಓಣಿ, ಫಿಲ್ಟರ್ ಬೆಡ್ ಬಡಾವಣೆಯ ವೃದ್ಧಾಶ್ರಮ, ಚರಬಸವೇಶ್ವರ ಶಾಲೆ ಪಕ್ಕದ ಜೋಪಡಿ ಪಟ್ಟಿಯಲ್ಲಿ ವಾಸವಿದ್ದ ಜನರಿಗೆ ಆಹಾರದ ಪಾಕೆಟ್‍ಗಳನ್ನು ವಿತರಿಸುವ ಮೂಲಕ ಸರಳವಾಗಿ ಭಕ್ತಿಪೂರ್ವಕವಾಗಿ ಆಚರಿಸಲಾಯಿತು ಎಂದು ಜ್ಯೋತಿರ್ಲಿಂಗ ಮಠದ ವಿಶ್ವರಾಧ್ಯ ಸ್ವಾಮೀಜಿ ತಿಳಿಸಿದರು.
ಪುಟಪರ್ತಿ ಸಾಯಿಬಾಬರ ಸಾಮಾಜಿಕ ಕಳಕಳಿ ಅನನ್ಯ. ಅವರ ಕೊಡುಗೆ ಅನಂತ. ಅವರೊಬ್ಬ ದೇವ ಮಾನವರಾಗಿ ಭಕ್ತಾಧಿಗಳಿಗೆ ಶ್ರೀರಕ್ಷೆಯಾಗಿದ್ದರು, ಅವರ ದಿವ್ಯ ದರ್ಶನದಿಂದಲೇ ಎಷ್ಟೋ ಭಕ್ತರು ಸಂಕಟಕ್ಕೆ ಪರಿಹಾರ ಕಂಡುಕೊಂಡಿದ್ದಾರೆ. ಅಲ್ಲದೆ ಪುಟಪರ್ತಿಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ಲಕ್ಷಾಂತರ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಜನಸೇವೆಗೆ ಹೆಸರು ವಾಸಿಯಾದವರು.
ಲಕ್ಷಾಂತರ ಜನರಿಗೆ ಇಂದಿಗೂ ಅನ್ನ ಸಂತರ್ಪಣೆ ಜರುಗಿತ್ತದೆ. ಪುಟಪರ್ತಿ ಸಾಯಿಬಾಬರ ಸಮಾಜ ಸೇವೆ ನಾವೆಲ್ಲ ಅನುಸರಿಸಬೇಕಿದೆ. ಆ ಹಿನ್ನೆಲೆ ಇಂದು ಸುಮಾರು 500 ಜನರಿಗೆ ಅನ್ನದಾನ ಮಾಡುವ ಮೂಲಕ ಸಾಯಿಬಾಬರ ಕೃಪೆಗೆ ಪಾತ್ರರಾದ ತೃಪ್ತಿ ನಮಗಿದೆ ಎಂದರು. ಈ ಸಂದರ್ಭದಲ್ಲಿ ಶ್ರೀಮಠದ ಭಕ್ತಾಧಿಗಳು ಜೊತೆಗಿದ್ದರು. ನಗರದ ವಿವಿಧ ಬಡಾವಣೆಗೆ ತೆರಳಿ ಆಹಾರ ಪೊಟ್ಟಣ ವಿತರಿಸಿದರು.