ಶಾರ್ವರಿ ನಾಮ ಸಂವತ್ಸರ ದ್ವಾದಶ ರಾಶಿಗಳ ಶುಭಾಶುಭ ಫಲಗಳು
ವರ್ಷ ಭವಿಷ್ಯ
ಶಾರ್ವರಿ ನಾಮ ಸಂವತ್ಸರ ದ್ವಾದಶ ರಾಶಿಗಳ ಶುಭಾಶುಭ ಫಲಗಳು
ಜಗತ್ತು ಒಂದು ಕುಟುಂಬ ಇದನ್ನ ಅರ್ಥ ಮಾಡಿಕೊಳ್ಳುವ ಕಾಲ ಈಗ ಕಂಡುಬಂದಿದೆ. ದೇಶ ಮತ್ತು ಪ್ರಪಂಚವೇ ವೈರಾಣುವಿನ ಸೋಂಕಿನಿಂದ ಸಮಸ್ಯೆ ಅನುಭವಿಸುತ್ತಿದೆ. ಇದು ಮನುಕುಲದ ಜೀವನಕ್ಕೆ ಮಾರಕವಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಆರೋಗ್ಯ ನಿರ್ದೇಶನಗಳನ್ನು ಪಾಲಿಸಿ. ಸಾಮಾಜಿಕ ಜೀವನದಲ್ಲಿ ಅಂತರ ಕಾಯ್ದುಕೊಳ್ಳಿ ಹಾಗೂ ನಿಮ್ಮ ಸ್ವಚ್ಛತೆ ನಿಮ್ಮ ಕುಟುಂಬಸ್ಥರ ಆರೋಗ್ಯ ಎಂಬುದನ್ನು ನೆನಪಿಡಿ. ಭಯ ಬೇಡ ಎಲ್ಲವೂ ಸರಿ ಹೋಗುತ್ತದೆ. ನಮ್ಮ ಜಾಗ್ರತೆಯಲ್ಲಿ ನಾವು ಇರುವುದು ಸೂಕ್ತ. ಮುಂದಿನ ಅಮಾವಾಸ್ಯೆಯ ಅಂತ್ಯದ ವೇಳೆಗೆ ಸೂಕ್ತ ಪರಿಹಾರ ಹಾಗೂ ಸಮಸ್ಯೆಯಿಂದ ಪಾರಾಗುವ ಎಲ್ಲ ಲಕ್ಷಣಗಳು ಕಾಣಬಹುದು. ಸರ್ವೇಜನ ಸುಖಿನೋಭವಂತು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮೇಷ ರಾಶಿ
ಈ ವರ್ಷದಲ್ಲಿ ಅಶುಭದಾಯಕ ಸಮಾಚಾರಗಳು ಹೆಚ್ಚಾಗುತ್ತದೆ. ವ್ಯವಹಾರಿಕ ಕ್ಷೇತ್ರದಲ್ಲಿ ನಷ್ಟ, ಕೆಲಸದ ನಿಮಿತ್ತ ತಿರುಗಾಟದ ಜೀವನ, ಆರ್ಥಿಕ ಸಂಕಷ್ಟಗಳನ್ನು ಎದುರಿಸುವಿರಿ, ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ, ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುವಿರಿ, ಪಾಪ ಕಾರ್ಯದಲ್ಲಿ ಆಸಕ್ತಿ, ಹಿತಶತ್ರುಗಳಿಂದ ಕೆಲಸದಲ್ಲಿ ತೊಂದರೆ, ಜಮೀನು ವಿಚಾರದಲ್ಲಿ ಪ್ರಗತಿ ಕಾಣಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ವೃಷಭ ರಾಶಿ
ಈ ವರ್ಷದಲ್ಲಿ ಮಿಶ್ರ ಫಲಗಳು ಕಾಣಬಹುದು. ಹಣಕಾಸಿನ ವಿಚಾರದಲ್ಲಿ ಸುಧಾರಣೆ, ಶುಭಕಾರ್ಯಗಳಲ್ಲಿ ಗೆಲುವು ಪಡೆಯುವಿರಿ, ಕಾರ್ಯಗಳಲ್ಲಿ ಅಲ್ಪ ಪ್ರಗತಿ ಆಗುವುದುಂಟು, ಸಂತಾನದ ಸಮಸ್ಯೆ ಬಗೆಹರಿಯುತ್ತದೆ, ಕಚೇರಿ ಕೆಲಸಗಳಲ್ಲಿ ಅಭಿವೃದ್ಧಿ ಕಾಣಬಹುದು, ಮಾನಸಿಕ ಚಿಂತೆ ಹೆಚ್ಚಳವಾಗುತ್ತದೆ ಖರ್ಚುಗಳು ವಿಪರೀತ, ಕುಟುಂಬಸ್ಥರಲ್ಲಿ ಅನಾರೋಗ್ಯ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಿಥುನ ರಾಶಿ
ಸ್ವಂತ ಜನಗಳಿಂದ ತೊಂದರೆಗಳು ಉದ್ಭವವಾಗಬಹುದು. ಶುಭ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ. ಸಾಲದ ಬಾದೆ ನಿಮಗೆ ಸಾಕಷ್ಟು ತೊಂದರೆ ನೀಡಲಿದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಸ್ಪರ್ಧೆಗಳಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗುತ್ತದೆ. ಕಲಾಸಕ್ತರಿಗೆ ಉತ್ತಮವಾದ ಅವಕಾಶಗಳು ಲಭ್ಯ. ಬರುವಂತಹ ಆದಾಯಗಳಲ್ಲಿ ಕುಂಠಿತವಾಗುವ ಸಾಧ್ಯತೆ. ಗೃಹ ನಿರ್ಮಾಣ ಕಾರ್ಯಗಳಲ್ಲಿ ಅಭಿವೃದ್ಧಿ ಕಂಡು ಬರಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಕರ್ಕಾಟಕ ರಾಶಿ
ಗುರುವಿನ ಶುಭ ದೃಷ್ಟಿಯಿಂದ ಯಶಸ್ಸು ಗೌರವ ಖ್ಯಾತಿ ಲಭ್ಯವಾಗುತ್ತದೆ. ಶತ್ರುಗಳ ಉಪಟಳ ನಿವಾರಣೆಯಾಗಲಿದೆ. ಧನಕನಕ ಸಂಗ್ರಹಣೆ ಹೆಚ್ಚಳವಾಗುತ್ತದೆ. ಕೊಟ್ಟಿರುವ ಸಾಲಗಳು ಸಕಾಲದಲ್ಲಿ ವಾಪಸ್ಸಾಗುವ ಸಾಧ್ಯತೆ ಇದೆ. ಆಶ್ಲೇಷ ನಕ್ಷತ್ರದಲ್ಲಿ ವಿಪರೀತ ಖರ್ಚುಗಳು ಹೆಚ್ಚಾಗುವ ಸಾಧ್ಯತೆ. ದುಡುಕುತನದಿಂದ ಕಾರ್ಯಗಳನ್ನು ಮಾಡಬೇಡಿ ಆದಷ್ಟು ಸಮಾಧಾನ ಯೋಚಿಸುವ ಅನಿವಾರ್ಯವಿದೆ. ವಿವಾಹ ಕಾರ್ಯಗಳು ವಿಳಂಬವಾದರೂ ಸಹ ನೆರವೇರುತ್ತದೆ ಚಿಂತೆ ಬೇಡ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಸಿಂಹ ರಾಶಿ
ಹೂಡಿಕೆಗಳಲ್ಲಿ ಅತ್ಯಂತ ಜಾಗರೂಕತೆ ಇರುವುದು ಅವಶ್ಯಕ. ಕಾಲಿಟ್ಟ ಕಡೆ ಮೋಸದ ವ್ಯಕ್ತಿಗಳು ಕಂಡುಬರುವರು ಎಚ್ಚರ. ಆರೋಗ್ಯ ಸಂಬಂಧಿತ ಬಾಧೆಗಳು ಹೆಚ್ಚಳವಾಗುತ್ತದೆ. ಆದಷ್ಟು ಉತ್ತಮ ರೀತಿಯ ಆಹಾರ ಸೇವನೆ ಇರಲಿ. ಉದ್ಯೋಗದಲ್ಲಿ ಮತ್ತು ವ್ಯವಹಾರಗಳಲ್ಲಿ ಲಾಭ ಹೆಚ್ಚಳವಾಗುತ್ತದೆ. ಜೂಜಾಟದಲ್ಲಿ ಆದಷ್ಟು ಎಚ್ಚರಿಕೆ ಇರತಕ್ಕದ್ದು. ವೃತ್ತಿ ಬದಲಾವಣೆ ಚಿಂತನೆಗೆ ಸ್ಪಂದನೆ ದೊರೆಯಲಿದೆ. ಸರಕಾರಿ ನೌಕರಿಗೆ ಉತ್ತಮವಾದ ಅವಕಾಶಗಳು ಕಂಡುಬರುತ್ತದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಕನ್ಯಾ ರಾಶಿ
ಈ ವರ್ಷದಲ್ಲಿ ಮಿಶ್ರ ಫಲಗಳು ಕಂಡುಬರುವುದು. ಆರೋಗ್ಯದಲ್ಲಿ ಸುಧಾರಣೆ ಆಗುತ್ತದೆ. ಬಯಸಿದ ಕಾರ್ಯಗಳು ಸಕಾಲದಲ್ಲಿ ನೆರವೇರುವುದು. ವ್ಯವಹಾರಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ. ಉತ್ತಮ ವ್ಯಕ್ತಿಗಳ ಸಹವಾಸದಿಂದ ಸಾಧನೆ ಕಂಡುಬರುತ್ತದೆ. ಕೆಲಸದಲ್ಲಿ ವಿಶ್ವಾಸ ಮತ್ತು ಸನ್ಮಾನಗಳು ಕಾಣಬಹುದು. ಆತ್ಮೀಯರೊಡನೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಸ್ಥಳ ಬದಲಾವಣೆಗೆ ಪ್ರಯತ್ನ ಮಾಡುವಿರಿ. ಕೆಲಸಕ್ಕಾಗಿ ಹೆಚ್ಚಿನ ತಿರುಗಾಟ ಕಾಣಬಹುದು. ಪಾಪ ಕಾರ್ಯದಲ್ಲಿ ಆಸಕ್ತಿ ಹೆಚ್ಚಾಗುತ್ತದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ತುಲಾ ರಾಶಿ
ಅಶುಭ ಫಲಗಳು ಹೆಚ್ಚಾಗಿ ಗೋಚರವಾಗುತ್ತದೆ. ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ. ಮಾನಸಿಕ ಅಸಮತೋಲನ ಕಾಡಬಹುದು. ಆರ್ಥಿಕ ವ್ಯವಹಾರಗಳಲ್ಲಿ ಅನಗತ್ಯ ತೊಂದರೆಗಳು ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಉತ್ಸಾಹಭರಿತವನ್ನು ತುಂಬಿಕೊಳ್ಳುವುದು ಅವಶ್ಯಕವಿದೆ. ಮಾರಾಟ ಪ್ರಕ್ರಿಯೆ ಗಳು ಉತ್ತಮವಾಗಿ ನಡೆಯುತ್ತದೆ. ಹೊಸ ವಸ್ತು ಅಥವ ಯಂತ್ರಗಳ ಖರೀದಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ಮಧ್ಯವರ್ತಿಗಳಿಗೆ ಹೆಚ್ಚಾಗಿ ಸಮಸ್ಯೆ ಕಾಡುವುದು. ವೈವಾಹಿಕ ಜೀವನ ಮುನ್ನಡಿ ಸಿಗಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ವೃಶ್ಚಿಕ ರಾಶಿ
ಬಂಡವಾಳ ಹೂಡಿಕೆಗಳಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ವ್ಯವಹಾರಗಳಲ್ಲಿ ಮಧ್ಯವರ್ತಿಗಳಾಗಿ ಸಮಸ್ಯೆಗೆ ಸಿಲುಕುವಿರಿ. ಮನಶಾಂತಿಯ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಜಮೀನು ಮಾರಾಟ ಪ್ರಕ್ರಿಯೆ ನಡೆಯಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಉನ್ನತ ಅಧ್ಯಯನಕ್ಕಾಗಿ ವಿದೇಶ ಪ್ರಯಾಣ ಆಗಬಹುದಾದ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ಗಳಲ್ಲಿ ಶುಭಕರ ಫಲಗಳು ಕಂಡುಬರುತ್ತದೆ. ಚಿನ್ನ ಖರೀದಿಯ ಪ್ರಕ್ರಿಯೆಗಳು ಹೆಚ್ಚಾಗಿ ನಡೆಯಲಿದೆ. ಕುಶಲಕರ್ಮಿಗಳಿಗೆ ಉತ್ತಮ ಫಲಗಳು ಕಾಣಬಹುದು.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಧನಸ್ಸು ರಾಶಿ
ವ್ಯವಹಾರದಲ್ಲಿ ಉತ್ತಮ ನಿರೀಕ್ಷೆ ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿದೆ. ಸಾಮಾಜಿಕ ಜೀವನದಲ್ಲಿ ಗೌರವಾ ಸಂಪಾದನೆ ಆಗುವುದು ನಿಶ್ಚಿತ. ಸಂತಾನ ಅಪೇಕ್ಷಿತ ಫಲ ಸುದ್ದಿಗಳನ್ನು ಕೇಳುವಿರಿ. ವಿದ್ಯಾರ್ಥಿಗಳಲ್ಲಿ ಉತ್ತಮ ಸಾಧನೆ ಕಂಡುಬರುತ್ತದೆ. ರಾಜಿ ಸಂದರ್ಭಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ವ್ಯಾಪಾರದಲ್ಲಿ ಲಾಭದಾಯಕವಾಗಿದೆ. ಕೆಲವು ಕಾರ್ಯಗಳಿಗಾಗಿ ಹೆಚ್ಚಿನ ಅಲೆದಾಟ ಕಂಡುಬರುವುದು. ನಿಮ್ಮ ಕೆಲಸಗಳಿಂದ ಪ್ರಶಂಸೆ ಮತ್ತು ಪುರಸ್ಕಾರಗಳು ಹೆಚ್ಚಾಗುತ್ತದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮಕರ ರಾಶಿ
ಪ್ರತಿಷ್ಠೆ ವಿಚಾರಗಳಲ್ಲಿ ಸಮಸ್ಯೆಗಳು ಕಂಡುಬರುತ್ತದೆ. ಆರ್ಥಿಕವಾಗಿ ಹಿನ್ನಡೆ ಆಗಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ವಿರೋಧಿಗಳ ಹೆಚ್ಚಾಗುವರು. ನಿಮ್ಮ ಅಧಿಕಾರ ಹಾಗೂ ವರ್ಚಸ್ಸು ಕೆಲವರಿಂದ ಪತನವಾಗುವ ಸಾಧ್ಯತೆ ಕಂಡುಬರುತ್ತದೆ. ಕುಟುಂಬಸ್ಥರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡುಬರುವುದು. ವಿದ್ಯಾರ್ಥಿಗಳು ಬೇರೆ ರೀತಿಯಾದಂತಹ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಿ ಮಾಡುವರು ಇದರಿಂದ ಜ್ಞಾನಾರ್ಜನೆ ಸಂಪಾದನೆ ಕಡಿಮೆಯಾಗಬಹುದು. ವಾದ-ವಿವಾದಗಳಲ್ಲಿ ವಿಜಯ ಕಾಣಬಹುದು. ಆತ್ಮೀಯರಿಂದ ಮೋಸ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಆಸ್ತಿ ಹಣಕಾಸಿನ ವಿವಾದಗಳು ಹೆಚ್ಚಾಗಿ ಜರುಗುವ ಸಾಧ್ಯತೆ. ಮಕ್ಕಳಿಂದ ನಿಮ್ಮ ಕೀರ್ತಿ ಹೆಚ್ಚಾಗಲಿದೆ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಕುಂಭ ರಾಶಿ
ಸಂಬಂಧಿಕರಿಂದ ವಿರೋಧಗಳು ಹೆಚ್ಚಾಗುವುದು. ವ್ಯಾಪಾರದಲ್ಲಿ ಮಂದ ಪ್ರಗತಿ. ವ್ಯವಹಾರದಲ್ಲಿ ವಿರೋಧಿಗಳು ಹೆಚ್ಚಾಗಿ ಕಾಣಬಹುದಾಗಿದೆ. ಶುಭಕಾರ್ಯದಲ್ಲಿ ಕೆಲವೊಂದು ವಿಘ್ನಗಳು ಜರುಗುವ ಸಾಧ್ಯತೆ ಕಂಡುಬರುವುದು. ಶತ್ರು ಬಾಧೆಯಿಂದ ಸಮಸ್ಯೆ ಅನುಭವಿಸುವಿರಿ. ವರ್ಗಾವಣೆಯಿಂದ ಸಮಸ್ಯೆ ಹೆಚ್ಚಾಗಬಹುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಹೆಚ್ಚಾಗಲಿದೆ. ಕುಟುಂಬದಲ್ಲಿ ವಿವಾದಗಳು ಹೆಚ್ಚಾಗಿ ಕಾಣಬಹುದು. ಅನಾರೋಗ್ಯದ ವಾತಾವರಣ ನಿಮಗೆ ಭಾದೆ ನೀಡಬಹುದಾದ ಸಾಧ್ಯತೆಯಿದೆ. ಈ ವರ್ಷ ಹೆಚ್ಚಾಗಿ ಪ್ರಯಾಣವು ಕಂಡುಬರುತ್ತದೆ. ಕೈಗಾರಿಕಾ ಉತ್ಪಾದನೆಯಲ್ಲಿ ಮಂದಗತಿಯ ಪ್ರಗತಿ ಕಾಣಬಹುದಾಗಿದೆ. ಹಣಕಾಸಿನ ಕೊರತೆಯಿಂದ ಸಮಸ್ಯೆ ಅನುಭವಿಸುವಿರಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಮೀನ ರಾಶಿ
ಉದ್ಯೋಗದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ಈ ವರ್ಷ ಧನಲಾಭ ನಿರೀಕ್ಷೆ ತುಂಬಾ ಕಂಡುಬರುತ್ತದೆ. ಮಕ್ಕಳಿಂದ ಸಂತೋಷ ಮತ್ತು ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಅಂದುಕೊಂಡ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸುತ್ತಿರಿ. ಸಂಶೋಧನೆಗಳಲ್ಲಿ ಉತ್ತಮ ಪ್ರಗತಿ ಕಂಡುಬರುವುದು. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆಯಿದೆ. ಹೊಸ ರೀತಿಯ ವ್ಯವಹಾರಗಳಿಂದ ಉತ್ತಮ ಲಾಭ ಪ್ರಾಪ್ತಿ.
ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಯಾವುದೇ ತರನಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
9945098262