ಪ್ರಮುಖ ಸುದ್ದಿ

Raging : ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಆತ್ಮಹತ್ಯೆ

ಬೆಂಗಳೂರು: ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ(19) ನೇಣಿಗೆ ಶರಣಾದ ಘಟನೆ ನಡೆದಿದೆ. ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಮೇಘನಾ ಕಳೆದ ಕೆಲ ದಿನಗಳಿಂದ ಕಾಲೇಜಿಗೆ ಹೋಗುತ್ತಿರಲಿಲ್ಲ. ಸಹಪಾಠಿಗಳು ಮೇಘನಾಳನ್ನು ಒಂಟಿಯಾಗಿಸಿದ್ದರಂತೆ, Raging ಮಾಡುತ್ತಿದ್ದರಂತೆ. ಹೀಗಾಗಿ ಮೇಘನಾ ಮಾನಸಿಕವಾಗಿ ಕುಗ್ಗಿದ್ದು ಮನೆಯಲ್ಲೇ ಇರುತ್ತಿದ್ದಳಂತೆ.

ಆದರೆ, ಪೋಷಕರು ಮೇಘನಾಳಿಗೆ ಕಾಲೇಜಿಗೆ ಹೋಗುವಂತೆ ಹೇಳಿದ್ದರು. ಹೀಗಾಗಿ, ಮೇಘನಾ ಮಾನಸಿಕ ಒತ್ತಡದಿಂದಾಗಿ ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಮೃತಳ ಪೋಷಕರು ತಿಳಿಸಿದ್ದಾರೆ. ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸರ ತನಿಖೆಯಿಂದಾಗಿ ಮೇಘನಾಳ ಸಾವಿಗೆ ನಿಖರ ಕಾರಣವೇನು ಎಂಬುದು ತಿಳಿದು ಬರಬೇಕಿದೆ.

Related Articles

Leave a Reply

Your email address will not be published. Required fields are marked *

Back to top button