
ಶಹಾಪುರದಲ್ಲಿ ಇಂದು ನಾಳೆ ಭಾರಿ ಮಳೆ ಸಾಧ್ಯತೆ.!
ಶಹಾಪುರದಲ್ಲಿ ಇಂದು, ನಾಳೆ ಭಾರಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮಾಹಿತಿ
ಯದಗಿರಿ, ಶಹಾಪುರಃ ಹವಾಮಾನ ಇಲಾಕೆ ನೀಡಿದ ಮಾಹಿತಿ ಪ್ರಕಾರ ಇಂದು ಮತ್ತು ನಾಳೆ ಶಹಾಪುರ ವ್ಯಾಪ್ತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ನಾಗರಿಕರು ಎಚ್ಚರಿಕೆವಹಿಸುವದು ಒಳಿತು.
ಕಳೆದ ಹದಿನೈದು ದಿನದಿಂದಲೂ ಮಳೆ ಪ್ರಮಾಣ ಜಾಸ್ತಿಯಾಗಿದ್ದು, ಹಲವಡೆ ಹತ್ತಿ, ತೊಗರಿ ಸೇರಿದಂತೆ ಹಲವಾರು ಬೆಳೆಗಳು ಅತಿವೃಷ್ಟಿಯಿಂದ ನಾಶ ಹೊಂದಿವೆ.
ಅಲ್ಲದೆ ಪ್ರತಿ ವರ್ಷಕ್ಕಿಂತ ಈ ಬಾರಿ ಮಳೆ ಪ್ರಮಾಣ ಜಾಸ್ತಿಯಾಗಿದ್ದರಿಂದ ಎಲ್ಲಡೆ ಹಳ್ಳ, ಕೊಳ್ಳ,ಕೆರೆಕಟ್ಟೆಗಳು ಮತ್ತು ಹೊಳೆ, ನದಿಗಳು ತುಂಬಿ ಹರಿಯುತ್ತಿರುವದು ಕಾಣಬಹುದಾಗಿದೆ.