ಉಪ ಸಭಾಪತಿ ಆತ್ಮಹತ್ಯೆಃ ರಾಜಕೀಯ ವಲಯದಲ್ಲಿ ತಲ್ಲಣ
ಉಪ ಸಭಾಪತಿ ಆತ್ಮಹತ್ಯೆಃ ರಾಜಕೀಯ ವಲಯದಲ್ಲಿ ತಲ್ಲಣ
ವಿವಿ ಡೆಸ್ಕ್ಃ ವಿಧಾನ ಪರಿಷತ್ ಉಪ ಸಭಾಪತಿಯಾಗಿದ್ದ ಎಸ್.ಎಲ್.ಧರ್ಮೆಗೌಡ ರೈಲಿನ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಡೂರ ತಾಲೂಕಿನ ಗುಣಸಾಗರದ ಸಮೀಪ ಸೋಮವಾರ ರಾತ್ರಿ ಉಪ ಸಭಾಪತಿ ಎಸ್.ಎಲ್.ಧರ್ಮೆಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಇತ್ತೀಚೆಗೆ ಡಿಸೆಂಬರ್ 15 ರಂದು ಪರಿಷತ್ ನಲ್ಲಿ ನಡೆದ ಕಲಾಪದಲ್ಲಿ ಗದ್ದಲ ಗಲಾಟೆ ಕುರಿತು ಮನನೊಂದಿದ್ದರು ಎನ್ನಲಾಗಿದೆ.
ಪರಿಷತ್ ನಲ್ಲಿ ಅಂದು ಪರಿಷತ್ ಸದಸ್ಯರು ಅವರನ್ನು ಖುರ್ಚಿ ಮೇಲೆ ಕುಳಿತಿರುವವರನ್ನು ಎಳೆದು ತಂದಿರುವದು ನೂಕಾಟ ತಳ್ಳಾಟ ನಡೆದಿದ್ದು ಅವರ ತೀವ್ರ ನೊಂದಿದ್ದರು ಎನ್ನಲಾಗಿದೆ. ಈ ಕುರಿತು ಡೆತ್ ನೋಟನಲ್ಲೂ ಪೂರಕ ಮಾಹಿತಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ ತಮ್ಮ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗಳಿಗೂ ಆಸ್ತಿಯಲ್ಲಿ ಪಾಲು ನೀಡುವಂತೆ ಮಗನಿಗೆ ಸೂಚನೆ ನೀಡಿರುವ ಕುರಿತು ಡೆತ್ ನೋಟ್ ನಲ್ಲಿ ಬರೆದಿದ್ದಾರೆ ಎನ್ನಲಾಗಿದೆ.
ಓರ್ವ ಸಹಕಾರಿ ಧುರೀಣ, ಉಒ ಸಭಾಪತಿ ಆತ್ಮಹತ್ಯೆ ಯಂತಹ ದಾರಿ ತುಳಿದಿರುವದು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.
ಪರಿಷತ್ ನಲ್ಲಿನಡೆದ ಘಟನೆಯೇ ಇವರ ಆತ್ಮಹತ್ಯೆ ಗೆ ಕಾರಣವಾಯಿತಾ.? ಎಂಬ ಪ್ರಶ್ನೆಗಳು ಉದ್ಭವವಾಗಿವೆ. ಹೀಗಾಗಿ ಕರ್ನಾಟಕ ರಾಜಕೀಯ ಪಾಲಿಗೆ ಈ ಘಟನೆ ಕಳಂಕ, ಕಪ್ಪುಚುಕ್ಕೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಬಿಳಕಲ್ ಗ್ರಾಮದ ಗ್ರಾಪಂ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದ್ದ ಇವರು, ಚಿಕ್ಕಮಗಳೂರು ಟಿಎಪಿಸಿಎಂಎಸ್ ಅಧ್ಯಕ್ಷರಾಗಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷರಾಗಿ ಉದ್ದೇಬಿರನಹಳ್ಳಿ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ,ಹಾಲು ಒಕ್ಮೂಟ ಚಿಕ್ಕಮಗಳೂರ ಜಿಲ್ಲಾ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷಾರಗಿ, ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷ ರಾಗಿ, ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ದೆಹಲಿಯ ಕ್ರಿಬ್ಕೋ ಸಂಸ್ಥೆಯ ನಿರ್ದೇಶಕರಾಗಿ ಹಲವಾರು ರಾಜಕೀಯ ಉನ್ನತ ಸ್ಥಾನಮಾನಗಳನ್ನು ಪಡೆದು ನಿಭಾಯಿಸಿದ್ದು, ಅಲ್ಲದೆ ಜಿಪಂ ಎರಡು ಬಾರಿ ಸದಸ್ಯರಾಗಿ, ಜೆಡಿಎಸ್ ಬೀರೂರು ವಿಧಾನಸಭೆ ಸದಸ್ಯರಾಗಿ ಮತ್ತು ಇಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಅವರು ಕೆಲಸ ಮಾಡಿದ್ದಾರೆ.
ಇಂತಹ ರಾಜಕೀಯ ಸಾಮಾಜಿಕ ಬದ್ಧತೆ ಹೊಂದಿದ್ದ ಶಾಸಕರೇ ಆತ್ಮಹತ್ಯೆ ಯಂಥ ಕೃತ್ಯಕ್ಕೆ ಇಳಿಯಬೇಕಾದರೆ ರಾಜಕೀಯ ಕುಟೀಲತನಕ್ಕೆ ಇಂದು ಉತ್ತಮ ವ್ಯಕ್ತಿಯನ್ನ ರಾಜ್ಯ ಕಳೆದು ಕೊಂಡಂತಾಗಿದೆ ಎಂದರೆ ತಪ್ಪಿಲ್ಲ.