ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ, ಆ ಮಹಿಳೆ ಯಾರು ಗೊತ್ತಿಲ್ಲ – ಜಾರಕಿಹೊಳಿ ಹೇಳಿಕೆ
ತಪ್ಪು ಮಾಡಿದ್ದರೆ ಗಲ್ಲಿಗೇರಿಸಲಿ, ಆ ಮಹಿಳೆ ಯಾರು ಗೊತ್ತಿಲ್ಲ – ಜಾರಕಿಹೊಳಿ ಹೇಳಿಕೆ
ವಿವಿ ಡೆಸ್ಕ್ಃ ನಾನು ತಪ್ಪು ಮಾಡಿಲ್ಲ. ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಹೊರ ಬರುವಷ್ಟರಲ್ಲಿ ಟಿವಿ ಯಲ್ಲಿ ಈ ರೀತಿ ಬರ್ತಾ ಇದೆ ಎಂಬುದು ಗೊತ್ತಾಯಿತು. ಆಗ ನಾನು ಶಾಕ್ ಆದೆ. ಆ ಯುವತಿ ಯಾರು ಅಂತಾನೆ ಗೊತ್ತಿಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು.

ಮುಂದುವರೆದು ಮಾತನಾಡಿದ ಅವರು ಆ ಯುವತಿ ಯಾರು, ಕಲ್ಲಹಳ್ಳಿ ಯಾರು ಅಂತಾನೆ ಗೊತ್ತಿಲ್ಲ ನನಗೆ, ನಾನು ತಪ್ಪು ಮಾಡಿಲ್ಲ ಯುವತಿಗೆ ದ್ರೋಹ ಮಾಡಿಲ್ಲ. ನಮ್ಮದು ದೊಡ್ಡ ಕುಟುಂಬ ಅದರಲ್ಲಿ ನಾನು ಅತಿ ಸೂಕ್ಷ್ಮ ಮನಸ್ಸಿನವ, ಇದು ಯಾರ ಷಡ್ಯಂತರ ಏನು ಗೊತ್ತಿಲ್ಲ.
ನಾನು ನೇರವಾಗಿ ರಾಜಕೀಯ ಮಾಡಿದವ, ಇಂತಹ ಷಡ್ಯಂತರ ನಮಗೆ ಗೊತ್ತಿಲ್ಲ. ಸಿಎಂ ಜೊತೆ ಮಾತನಾಡಿದ್ದೇನೆ. ಸಮಗ್ರ ತನಿಖೆಯಾಗಲಿ ಸತ್ಯಾಂಶ ಹೊರ ಬರಬೇಕಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಿ ಎಂದರು.
ಮಾಧ್ಯಮದವರು ರಾಜೀನಾಮೆ ನೀಡತ್ತೀರೋ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸ್ಥಾನಕ್ಕೇನು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವೆ.
ನಾನು ದೈವವನ್ನು ನಂಬಿರುವವನು. ತನಿಖೆ ನಡೆಯಲಿ ತಪ್ಪಿದ್ದರೆ ನಾನು ರಾಜೀನಾಮೆ ಏನು ರಾಜಕೀಯದಿಂದಲೇ ನಿವೃತ್ತಿ ಹೊಂದುವೆ ಎಂದಿದ್ದಾರೆ.