ಪ್ರಮುಖ ಸುದ್ದಿ
ತಾಲೂಕಿನಾದ್ಯಂತ ರಂಜಾನ್ ಹಬ್ಬದ ಸಡಗರ
ಶಹಾಪುರದಲ್ಲಿ ರಂಜಾನ್ ಸಂಭ್ರಮ
ಶಹಾಪುರಃ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಪರಸ್ಪರರಿಂದ ಹಬ್ಬದ ಶುಭಾಶಯಗಳನ್ನು ವಿನಿಮಯ ನಡೆಯಿತು. ಅದರಂತೆ ಸಗರ ಗ್ರಾಮದ ಜಾಮೀಯ ಮಸೀದಿ ಮತ್ತು ಈದ್ಗಾ ಆವರಣದಲ್ಲಿ ಮುಸ್ಲಿಂ ಸಮುದಾಯದ ಜನ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ಚಿಣ್ಣರು ಪರಸ್ಪರ ಹಬ್ಬದ ಶುಭಾಶಯವನ್ನು ಆಲಿಂಗನ ಮಾಡಿಕೊಳ್ಳುವ ಮೂಲಕ ವಿನಿಮಯ ಮಾಡಿಕೊಂಡರು.
ಯಾವುದೇ ಮತ ಧರ್ಮ ಬೇಧವಿಲ್ಲದೆ ಎಲ್ಲರನ್ನು ಆಹ್ವಾನಿಸಿ ಹಬ್ಬದ ಊಟವನ್ನು ಮುಸ್ಲಿಂ ಸಹೋದರರು ಮಾಡಿಸಿದರು.
ಹಿಂದೂ ಬಾಂಧವರು ಸಹ ರಂಜಾನ್ ಹಬ್ಬದ ಶುಭಾಶಯಗಳನ್ನು ಸಹ ಕೋರಿದರು. ತಾಲೂಕಿನ ಖಾನಾಪುರ, ದೋರನಹಳ್್ಳಳಿ, ಗೋಗಿ ಸೇರಿದಂತೆ ಎಲ್ಲೆಡೆ ಹಬ್ಬದ ಸಡಗರ ಕಂಡು ಬಂದಿತು.