ಮಹಿಳೆ ಮೇಲೆ ಅತ್ಯಾಚಾರ ಆರೋಪಿಗಳಿಬ್ಬರ ಬಂಧನ
ಮಹಿಳೆ ಮೇಲೆ ಅತ್ಯಾಚಾರ ಆರೋಪಿಗಳಿಬ್ಬರ ಬಂಧನ
yadgiri, ಶಹಾಪುರಃ ರವಿವಾರ ಅಮಾವಾಸ್ಯೆ ನಿಮಿತ್ತ ದೇವಸ್ಥಾನಕ್ಕೆ ಹೋಗಿ ವಾಪಸ್ ತೆರಳುತ್ತಿರುವ ವೇಳೆ ಬೈಕ್ ಅಡ್ಡಗಟ್ಟಿದ ಕಾಮುಕರಿಬ್ಬರು ಬೈಕ್ ಸವಾರನನ್ನು ಥಳಿಸಿ ಚಾವಿ ಕಿತ್ತುಕೊಂಡು ಆಟೋದಲ್ಲಿ ಮಹಿಳೆಯನ್ನು ಹೊತ್ತೊಯೊದ್ದು ನಿರ್ಜನ ಪ್ರದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಆಕೆಯ ಮೈಮೇಲಿನ ಬಟ್ಟೆಗಳನ್ನು ನೀರಿನಲ್ಲಿ ತೊಳಿಸಿ ಆಕೆಯನ್ನು ಅಲ್ಲಿಯೇ ಬಿಟ್ಟು ತೆರಳಿದ ದುರ್ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ.
ಸಂತ್ರಸ್ತೆ ಶಹಾಪುರ ಠಾಣೆಗೆ ಆಗಮಿಸಿ ದೂರು ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಬೆಳಗಾಗುವಷ್ಟರಲ್ಲಿ ಆರೋಪಿಗಳಿಬ್ಬರನ್ನು ಬಂಧಿಸಿ ಡ್ರೀಲ್ ಮಾಡಿದ್ದಾರೆ.
ಆರೋಪಿಗಳಿಬ್ಬರು ನಗರದ ಫಿಲ್ಟರ್ ಬೆಡ್ಡ ನಿವಾಸಿಗಳಾಗಿದ್ದು, ರಾತ್ರಿ ಆಟೋದಲ್ಲಿ ಕುಡಿಯುತ್ತಾ ಕುಳಿತಿದ್ದು, ತಡ ರಾತ್ರಿ ಬೈಕ್ ಮೇಲೆ ದೇವಸ್ಥಾನದಿಂದ ಹೊರಟಿದ್ದ ಇವರನ್ನು ಹಿಂಬಾಲಿಸಿ ಕುಡಿದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಶಹಾಪುರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.