ಕಾವ್ಯ
‘ಪೋಷಾಕುಗಳು’ ಕವಿ ರವಿ ಹಿರೇಮಠ ಕಾವ್ಯ ಬರಹ
ಪೋಷಾಕುಗಳು
ಗತ ಇತಿಹಾಸ ನೆನಪಿಸುವ
ಸ್ಮಾರಕಗಳ ಅವಸಾನ.
ನವಯುಗದ ಹೊಸ
ಪೋಷಾಕಗಳು.
ಯಾವುದರಿಂದ ನಾವು
ಗುರುತಿಸಿ ಕೊಳ್ಳೋಣ.
ವಜ್ರ’ ವೈಡುರ್ಯ ಅಳೆದು ತೂಗಿದರು.
ಅದೇ ನೆಲದ ಮಣ್ಣು’ ಗಾರೆಗಳು
ಪಾಚಿಗಟ್ಟಿ ನೆಲ ಸಮವಾಗುತ್ತಿವೆ.
ನಮ್ಮ ಪೋಷಾಗಳು ಮಿಂಚುತ್ತಿವೆ.
ಹರಿದು ಚಿಂದಿಯಾಗುವ ಅರಿವೆಗಳು.
ಭವಿಷ್ಯದ ಜನರಿಗೆ…..
ಉಳಿಸಬೇಕಾಗಿದೆ ಗತಕಾಲದ ಸ್ಮಾರಕ
ಉಳಿಯದಿದ್ದರು ನಡೆಯುತ್ತದೆ..
ನಮ್ಮ ಪೋಷಾಕುಗಳು.
ಉಳಿಯಬೇಕಾಗಿದೆ ಸ್ಮಾರಕಗಳು.
ರಚನೆ : ರವಿ ಹಿರೇಮಠ ಶಹಾಪುರ ಮೋ : 9448651520.