ಡ್ಯಾನ್ಸ್ ಮೂಲಕ ಸೋಂಕಿತರನ್ನು ರಂಜಿಸಿದ ರೇಣುಕಾಚಾರ್ಯ ದಂಪತಿ
ಡ್ಯಾನ್ಸ್ ಮೂಲಕ ಸೋಂಕಿತರನ್ನು ರಂಜಿಸಿದ ರೇಣುಕಾಚಾರ್ಯ ದಂಪತಿ
ದಾವಣಗೆರೆಃ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ ಗೆ ನಿನ್ನೆ ರಾತ್ರಿ ಭೇಟಿ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ ದಂಪತಿ, ಕೋವಿಡ್ ಸೋಂಕಿತರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲು ಚಿಂತೆ ಮರೆತು ಖುಷಿಯಿಂದ ಇರಿ ಸಮರ್ಪಕ ಚಿಕಿತ್ಸೆ ಸಮಯಕ್ಕನುಸಾರ ಊಟ, ತಪಾಸಣೆ ಮತ್ತು ಔಷಧಿ ಸೇವನೆ ಮಾಡಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೋವಿಡ್ ಸೋಂಕಿತರನ್ನು ರಂಜಿಸಲು ದಂಪತಿಗಳು ಕುಲದಲ್ಲಿ ಕೀಳ್ಯಾವದೋ ಹುಚ್ವಪ್ಪ ಸೇರಿದಂತೆ ಯಾರೇ ನೀನು ರೋಜಾ ಹೂವೆ.. ಇತರೆ ಕನ್ನಡ ಹಾಡುಗಳಿಗೆ ಭರ್ಜರಿ ಹೆಜ್ಜೆ ಹಾಕಿ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿಸಿದರು.
ಸೋಂಕಿತರು ಸಹ ಶಾಸಕ ರೇಣುಕಾಚಾರ್ಯ ದಂಪತಿಯೊಂದಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಸೋಂಕಿತರ ನೋವು ಮರೆಸುವ ಮೂಲಕ ಅವರನ್ನು ಭಯ, ಆತಂಕದಿಂದ ಹೊರ ಬರುವಂತೆ ಮಾಡಿದರು.
ಎಲ್ಲರೂ ಊಟ, ಔಷಧಿ ಪಡೆದು ನಿತ್ಯ ಯೋಗ, ವ್ಯಾಯಮ ಅಥವಾ ಡ್ಯಾನ್ಸ್ ಮಾಡುವ ಮೂಲಕ ಶೀಘ್ರ ಚೇತರಿಕೆ ಹೊಂದಿ ಗುಣಮುಖರಾಗ್ತೀರ ಯಾವುದೆ ಭಯಬೇಡ ಎಂದು ಸೋಂಕಿತರಿಗೆ ಅವರು ಮನವರಿಕೆ ಮಾಡಿದರು.