ನೂತನ ಸಚಿವರ ಪಟ್ಟಿ : ಹದಿನೇಳು ಶಾಸಕರಿಗೆ ಮಂತ್ರಿ ಭಾಗ್ಯ!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟದಲ್ಲಿ ಒಟ್ಟು 17ಜನ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಚಿವ ಲೀಸ್ಟ್ ಫೈನಲ್ ಆಗಿದ್ದು ಇಂದು 10ಗಂಟೆಯಿಂದ 11ಗಂಟೆವರೆಗೆ ರಾಜಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ನೂತನ ಸಚಿವರ ಪಟ್ಟಿ ಇಲ್ಲಿದೆ.
1) ಗೋವಿಂದ ಕಾರಜೋಳ – ಮುಧೋಳ ಕ್ಷೇತ್ರ
2) ಡಾ.ಸಿ.ಎನ್. ಅಶ್ವತ್ಥನಾರಾಯಣ್ – ಮಲ್ಲೇಶ್ವರಂ
3) ಲಕ್ಷ್ಮಣ್ ಸವದಿ – ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ
4) ಕೆ.ಎಸ್. ಈಶ್ವರಪ್ಪ – ಶಿವಮೊಗ್ಗ
5) ಆರ್. ಅಶೋಕ್ – ಪದ್ಮನಾಭನಗರ
6) ಜಗದೀಶ್ ಶೆಟ್ಟರ್ – ಹುಬ್ಬಳ್ಳಿ-ಧಾರವಾಡ ಕೇಂದ್ರ
7) ಬಿ. ಶ್ರೀರಾಮುಲು – ಮೊಳಕಾಲ್ಮೂರು
8) ಎಸ್. ಸುರೇಶ್‌ಕುಮಾರ್ – ರಾಜಾಜಿನಗರ
9) ವಿ.ಸೋಮಣ್ಣ – ಗೋವಿಂದರಾಜನಗರ
10) ಸಿ.ಟಿ. ರವಿ – ಚಿಕ್ಕಮಗಳೂರು
11) ಬಸವರಾಜ್ ಬೊಮ್ಮಾಯಿ – ಶಿಗ್ಗಾಂವಿ
12) ಕೋಟಾ ಶ್ರೀನಿವಾಸ ಪೂಜಾರಿ – ವಿಧಾನಪರಿಷತ್ ವಿಪಕ್ಷ ನಾಯಕ
13) ಜೆ.ಸಿ.ಮಾದುಸ್ವಾಮಿ – ಚಿಕ್ಕನಾಯಕನಹಳ್ಳಿ
14) ಸಿ.ಸಿ. ಪಾಟೀಲ್ – ನರಗುಂದ
15) ಹೆಚ್.ನಾಗೇಶ್ – ಮುಳಬಾಗಿಲು (ಪಕ್ಷೇತರ)
16) ಪ್ರಭು ಚೌಹಾಣ್ – ಔರದ್
17) ಶಶಿಕಲಾ ಜೊಲ್ಲೆ – ನಿಪ್ಪಾಣಿ