ಸಚಿವ ರೇವಣ್ಣ ಬಿಸ್ಕೆಟ್ ಸ್ಟೇಟ್ ಮೆಂಟ್
ಬೇಕು ಅಂತಲೇ ಬಿಸ್ಕೆಟ್ ಎಸೆದಿಲ್ಲ-ರೇವಣ್ಣ
ಬೆಂಗಳೂರಃ ಹಾಸನದ ರಾಮನಾಥಪುರ ಗ್ರಾಮದಲ್ಲಿ ಸಚಿವ ರೇವಣ್ಣ ನಿರಾಶ್ರಿತ ಕೇಂದ್ರಕ್ಕೆ ತೆರಳಿ ಅಲ್ಲಿನ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು.
ಇಂದು ನಗರದಲ್ಲಿ ಮಾಧ್ಯಮದವರಿಗೆ ಸಮಜಾಯಿಷಿ ನೀಡಿದ ಸಚಿವ ರೇವಣ್ಣ, ನಾನು ಬೇಕು ಅಂತಲೇ ಬಿಸ್ಕಿಟ್ ಎಸೆದಿಲ್ಲ.
ಸಂತ್ರಸ್ಥರು ಏಕಕಾಲಕ್ಕರ ಬಿಸ್ಕೆಟ್ ಬೇಕು ಬೇಕು ಎನ್ನುತ್ತಿದ್ದರು ಆ ಕಾರಣಿಕ್ಕೆ ಎಲ್ಲರಿಗೂ ಸಾಲಾಗಿ ಬಂದು ತೆಗೆದುಕೊಂಡು ಹೋಗಿ ಎನ್ನಲು ಆಗಲ್ಲ. ಅಲ್ಲದೆ ಅವರ ಹೊಟ್ಟೆ ಬೇರೆ ಹಸಿದಿದೆ.
ಹೀಗಾಗಿ ಅಲ್ಲಿಂದಲೇ ಕೊಡಲು ಪ್ರಯತ್ನ ಮಾಡಿದೆ.
ಅವರಿದ್ದಲ್ಲಿಗೆ ಹೋಗಿ ಕೊಡುವಂತ ಸ್ಥಿತಿ ಅಲ್ಲಿರಲಿಲ್ಲ. ಸ್ವಲ್ಪ ತಡವಾದರೂ ಬಿಸ್ಕೆಡ್ ಬಾಸ್ಕ್ ಚಿಲ್ಲಾಪಿಲ್ಲಿ ಆದರೂ ಅಚ್ವರಿ ಪಡಬೇಕಿಲ್ಲ ಅಂತಹ ವತಾವರಣವಿತ್ತು ಎನ್ನುವಷ್ಡು ವಿವಿರ ನೀಡಲು ಮುಂದಾಗಿದ್ದರು.
ಆದಾಗ್ಯು ಬಿಜೆಪಿ ಇದನ್ನೆ ರಾಜಕೀಯಕ್ಕೆ ಬಳಸಿಕೊಂಡು ರಂಪಾಟ ಮಾಡ್ತಾ ಇದ್ದಾರೆ.
ರಾಜೀನಾಮೆ ಕೇಳುತ್ತಿದ್ದಾರೆ. ಸಂತ್ರಸ್ಥರಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸುತಗತಿದ್ದಾರೆ. ನನ್ನಿಂದ ತಪ್ಪಾಗಿದೆ ಎಂದ್ರೆ ಕ್ಷಮೆ ಕೇಳುತ್ತೇನೆ. ಆದರೆ ಇದರಲ್ಲಿ ರಾಜಕೀಯ ಬೇಡ ಎಂದು ತಿಳಿಸಿದ್ದಾರೆ.