ಪ್ರಮುಖ ಸುದ್ದಿ
ರಸ್ತೆಗಿಳಿಯದ ಸರ್ಕಾರಿ ಬಸ್ಃ ನಿಲ್ದಾಣ ಸ್ತಬ್ಧ, ಪ್ರಯಾಣಿಕರ ಪರದಾಟ
ರಸ್ತೆಗಿಳಿಯದ ಸರ್ಕಾರಿ ಬಸ್ಃ ನಿಲ್ದಾಣ ಸ್ತಬ್ಧ, ಪ್ರಯಾಣಿಕರ ಪರದಾಟ
ಶಹಾಪುರಃ ರಾಜ್ಯ ಸಾರಿಗೆ ಸಂಸ್ಥೆ ನೌಕರರು 6 ನೇ ವೇತನ ಜಾರಿಗಾಗಿ ಪಟ್ಟು ಹಿಡಿದು ಇಂದು ಮುಷ್ಕರ ಆರಂಭಿಸಿದ್ದು, ನಗರದ ಬಸ್ ನಿಲ್ದಾಣ ಸರ್ಕಾರಿ ಬಸ್ ಗಳು ಇಲ್ಲದೆ ಬಿಕೋ ಎನ್ನುತ್ತಿದೆ.
ಬಸ್ ಗಳು ಡಿಪೋದಲ್ಲಿ ಶಾಂತವಾಗಿ ನಿಂತಿವೆ. ಇಡಿ ಬಸ್ ನಿಲ್ದಾಣ ಡಿಪೋ ಸ್ತಬ್ಧವಾಗಿವೆ. ನಿಲ್ದಾಣಗಳಲ್ಲಿ ಬಸ್ ಸೌಕರ್ಯ ದೊರೆಯದೇ ದೂರದ ಊರುಗಳಿಗೆ ತೆರಳುವ ಮುಗ್ಧ ಪ್ರಯಾಣಿಕರು ಪರದಾಡುವಂತಾಗಿದೆ.
ಸಾರಿಗೆ ನೌಕರರು ಸಂಘ ಕರೆ ನೀಡಿದಂತೆ ಮುಷ್ಕರಕ್ಕೆ ಓಗೊಟ್ಟು ಯಾರೊಬ್ಬರು ಕೆಲಸಕ್ಕೆ ಹಾಜರಾಗದ ಕಾರಣ ಬಸ್ ಗಳು ಡಿಪೋದಲ್ಲಿ ನಿಂತಿವೆ.