ಪ್ರಮುಖ ಸುದ್ದಿಬಸವಭಕ್ತಿ
ನ.10 ರಿಂದ ಸಗರ ಸೂಫಿ ಸರಮಸ್ತ್ ಸಾಬ ದರ್ಗಾ ಉರುಸ್

ಸಗರ ಸೂಫಿ ಸರಮಸ್ತ್ ಸಾಬ ದರ್ಗಾ ಉರುಸ್
yadgiri, ಶಹಾಪುರಃ ತಾಲೂಕಿನ ಸುಕ್ಷೇತ್ರ ಸಗರ ಗ್ರಾಮದ ಸೂಫಿ ಸರಮಸ್ತ್ ಸಾಬ ದರ್ಗಾ ಉರುಸ್ ಪ್ರತಿ ವರ್ಷದಂತೆ ಈ ವರ್ಷವು ನಡೆಯಲಿದ್ದು, ಆದರೆ ಕೋವಿಡ್ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ದರ್ಗಾದ ಪೀಠಾಧಿಪತಿ ಸಯ್ಯದ್ ಶಹಾ ಮುಜೀಬುದ್ದೀನ್ ಸರಮಸ್ತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ. 10 ರಂದು ಗಂಧ, 11 ರಂದು ದೀಪ ಮತ್ತು 12 ರಂದು ಜಿಯಾರತ್ ನಡೆಯಲಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸದೆ ಶ್ರದ್ಧಾ ಭಕ್ತಿಯಿಂದ ಸರಳವಾಗಿ ಉರುಸ್ ನಡೆಯಲಿದೆ.
ಭಕ್ತಾಧಿಗಳು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕು. ಗುಂಪಾಗಿ ಸೇರಬಾರದು, ಮಾಸ್ಕ್ ಧರಿಸಿರಲೇಬೇಕು. ಸ್ವಚ್ಛತೆ ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ. ಕೋವಿಡ್ ಹಿನ್ನೆಲೆ ಸರಳವಾಗಿ ಉರುಸ್ ನಡೆಯಲಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.