ಅಂಕಣಬಸವಭಕ್ತಿ

ಸಗರ ಯಲ್ಲಮ್ಮ ಜಾತ್ರೆಗೆ ಸೌಲಭ್ಯ ಕಲ್ಪಿಸದ ತಾಲೂಕು ಆಡಳಿತ

ಫೆ.19 ರಂದು ಸಗರ ಯಲ್ಲಮ್ಮದೇವಿ ಜಾತ್ರೆ

ಬೆಟ್ಟದ ಹಾದಿ ದುರ್ಗಮ, ದರ್ಶನಕ್ಕೆ ಹರಸಾಹಸ, ಅಸಂಖ್ಯಾತ ಭಕ್ತರ ಆಗಮನ, ಸಿದ್ಧಗೊಳ್ಳದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ

ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ, ಶಹಾಪುರಃ ತಾಲೂಕಿನ ಸಗರ ಗ್ರಾಮದ ಗ್ರಾಮ ದೇವತೆ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ವರ್ಷದಲ್ಲಿ ಎರಡು ಬಾರಿ ನಡೆಯುವುದು ವಿಶೇಷವಾಗಿದೆ. ಅದರಂತೆ ಫೆ.19 ರಂದು ಜಾತ್ರೆ ಆರಂಭವಾಗಲಿದೆ.
ಆದರೆ ದೇವಸ್ಥಾನ ಮುಜರಾಯಿ ಖಾತೆಗೆ ಒಳಪಟ್ಟಿದ್ದು, ತಾಲೂಕು ಆಡಳಿತದ ತಹಶೀಲ್ದಾರರು ದೇವಸ್ಥಾನ ಕಮೀಟಿ ಅಧ್ಯಕ್ಷರಾಗಿದ್ದಾರೆ.

ಇನ್ನೂ ಕೆಲವೇ ದಿನಗಳಲ್ಲಿ ಜಾತ್ರೆ ಆರಂಭವಾಗಲಿದೆ. ಆದರೆ ಜವಬ್ದಾರಿ ಹೊಂದಿ ತಾಲೂಕು ಆಡಳಿತ ಇದುವರೆಗೂ ಜಾತ್ರಾ ಅಂಗವಾಗಿ ಯಾವುದೇ ಮುಂಜಾಗೃತ ಕ್ರಮ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳದಿರವದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾತ್ರೆಗೆ ಸಹಸ್ರಾರು ಭಕ್ತಾಧಿಗಳು ಆಗಮಿಸಲಿದ್ದು, ಮುಂಜಾಗೃತವಾಗಿ ರಸ್ತೆ, ಕುಡಿಯುವ ನೀರು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕಿದೆ. ಆದರೆ ಇದುವರೆಗೂ ತಹಶೀಲ್ದಾರರು ಯಾವುದೇ ಕ್ರಮಕೈಗೊಂಡಿಲ್ಲ. ಜಾತ್ರೆ ವೇಳೆ ಬರುವ ಜನರು ತೊಂದರೆ ಅನುಭವಿಸಬಾಕಗುತ್ತದೆ ಎಂದು ಭಕ್ತಾಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಟ್ಟದ ಮೇಲಿರುವ ರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆಯಲು ಸಮರ್ಪಕ ರಸ್ತೆ ಇಲ್ಲ. ಮೆಟ್ಟಿಲುಗಳು ನೆಲಕ್ಕುರುಳಿವೆ. ರಸ್ತೆ ಹದಗೆಟ್ಟಿದೆ. ಕಳೆದ ವರ್ಷವೇ ರಸ್ತೆ ಮೆಟ್ಟಿಲು ನೆಲಕ್ಕೆ ಉರುಳಿ ಜನರು ಪರದಾಡುವಂತಾಗಿದೆ. ಇದನ್ನು ಕಂಡಿದ್ದ ದೇವಸ್ಥಾನ ಕಮೀಟಿ ತಾಲೂಕು ಆಡಳಿತ ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳದಿವುರು ಭಕ್ತಾಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ದೇವಿ ವಾರವಿಡಿದು ಭಕ್ತಾಧಿಗಳು ಪ್ರತಿ ಮಂಗಳವಾರ ದೇವಸ್ಥಾನಕ್ಕೆ ನೈವೇದ್ಯ ಕಾಯಿ, ಕರ್ಪೂರ ಉಡಿ ತುಂಬುವ ಕಾರ್ಯ ನಡೆದಿದೆ. ಆದಾಗ್ಯು ತಾಲೂಕು ಆಡಳಿತ ದೇವಸ್ಥಾನ ಅಭಿವೃದ್ಧಿಗೆ ಸಮರ್ಪಕ ಅನುದಾನದ ಕೊರತೆ ಹೆಸರಿನಲ್ಲಿ ಹಿಂದೇಟು ಹಾಕುತ್ತಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ವರ್ಷದಲ್ಲಿ ಎರಡು ಬಾರಿ ಜಾತ್ರೆಃ ಪ್ರತಿವರ್ಷ ಭಾರತ ಹುಣ್ಣಿಮೆಯ ಮುನ್ನವೇ ಬರುವ ಮಂಗಳವಾರ ಹಾಗೂ ಪ್ರತಿ ಸಲ ಹೋಳಿ ಹುಣ್ಣಿಮೆಯ ಮುನ್ನ ಬರುವ ಶುಕ್ರವಾರ ಹೀಗೆ ಎರಡು ಬಾರಿ ಜಾತ್ರೆ ನಡೆಯುವದು ಇಲ್ಲಿನ ವಿಶೇಷ.
ಎರಡು ಬಾರಿ ಜಾತ್ರೆಯಲ್ಲಿ ಅಸಂಖ್ಯಾತ ಜನ ಸೇರಲಿದೆ. ಆಂದ್ರ, ಮಹಾರಾಷ್ಟ್ರ ರಾಜ್ಯಗಳಿಂದಲೂ ಭಕ್ತಾಧಿಗಳು ಜಾತ್ರೆಗೆ ಆಗಮಿಸುತ್ತಾರೆ. ಮುಜರಾಯಿ ಖಾತೆ ಅಧಿಕಾರಿಗಳ ಪ್ರಕಾರ 25 ಲಕ್ಷ ರೂ. ಅನುದಾನವಿದ್ದು, ಅಭಿವೃದ್ಧಿ ಕಾರ್ಯಕ್ಕೆ ಇಷ್ಟೊಂದು ಹಣ ಸಾಲುವದಿಲ್ಲ ಎಂಬ ನೆಪ ಹೇಳುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

————-

ಈಗಾಗಲೇ ಜಾತ್ರೆ ಕುರಿತು ಸಭೆ ಕರೆದು ಸಂಬಂಧಿಸಿದ ಅಯಾ ಇಲಾಖೆ ವಿವಿಧ ಸೌಲಭ್ಯ ಕಲ್ಪಿಸಲು ಸೂಚಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ರಸ್ತೆ ದುರಸ್ತಿ, ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ಶೌಚಾಲಯ, ಸ್ವಚ್ಛತೆ ಕುರಿತು ಜವಬ್ದರಿವಹಿಸಲಾಗಿದೆ. ಕುಡಿಯುವ ನೀರು ಇತರೆ ಸೌಕರ್ಯಗಳ ಒದಗಿಸುವ ಕುರಿತು ಸಭೆಯಲ್ಲಿ ಕ್ರಮಕ್ಕೆ ಸೂಚಿಸಲಾಗಿದೆ. ಸೂಕ್ತ ಪೊಲೀಸ್  ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ. 
-ಸಂಗಮೇಶ ಜಿಡಗಾ. ತಹಶೀಲ್ದಾರ. ಶಹಾಪುರ.

Related Articles

Leave a Reply

Your email address will not be published. Required fields are marked *

Back to top button