ಪ್ರಮುಖ ಸುದ್ದಿ
DRUGS CASE- ಜಾಮೀನು ಮುಂದೂಡಿಕೆ ಆರೋಪಿಗಳಲ್ಲಿ ಡವಡವ
ಚಂದನವನ ಡ್ರಗ್ಸ್ ಮಾಫಿಯಾ ಪ್ರಕರಣಃ ಆರೋಪಿಗಳ ಜಾಮೀನು ಅರ್ಜಿ ಮುಂದೂಡಿಕೆ
ಬೆಂಗಳೂರಃ ಚಂದನವನ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿ ಸೇರಿದಂತೆ ಐವರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.16 ರವರೆಗೂ ನ್ಯಾಯಾಲಯ ಮುಂದೂಡಿದೆ.
ನಟಿ ರಾಗಿಣಿ, ರಾಹುಲ್, ವೈಭವ್ ಶೆಟ್ಟಿ, ಶಿವಪ್ರಕಾಶ, ವಿನಯಕುಮಾರ ಇವರ ಜಾಮೀನು ಅರ್ಜಿ ಸೆ.16 ಕ್ಕೆ ಮುಂದೂಡಿ ಡಿಪಿಎಸ್ ನ್ಯಾಯಾಲಯ ಆದೇಶ ಹೊರಡಿಸಿದೆ ಎನ್ನಲಾಗಿದೆ.
ಹೀಗಾಗಿ ಸಹಜವಾಗಿ ಆರೋಪಿಗಳಲ್ಲಿ ಇನ್ನು ದುಗುಡ ಹೆಚ್ವಾಗಿದೆ. ಜಾಮೀನು ಸಿಗುತ್ತೋ ಅಥವಾ ಸಾಕ್ಷಿ ಆಧಾರ ಕಲೆಹಾಕಿ ಜೈಲೇ ಖಾಯಂ ಆಗುತ್ತಾ ಎಂಬ ಆತಂಕದಲ್ಲಿ ಆರೋಪಿಗಳಿದ್ದಾರೆ ಎನ್ನಲಾಗುತ್ತಿದೆ.