ದೇವರಿಗೆ ಬುದ್ಧಿ ಇದೆಯಾ.? ಅದ್ಭುತ ಕಥೆ ಮಕ್ಕಳಿಗೆ ಓದಿ ತಿಳಿಸಿ
ದೇವರಿಗೆ ಬುದ್ಧಿ ಇದೆಯಾ?
ಒಮ್ಮೆ ಒಬ್ಬ ದಾರಿಹೋಕ ಬಹಳದೂರದಿಂದ ನಡೆದು ಬಂದು ಬಹಳ ಸುಸ್ತಾಗಿ ದಣಿವಾರಿಸಿಕೊಳ್ಳಲು ಒಂದು ವಿಶಾಲವಾದ ಆಲದ ಮರದ ನೆರಳಲ್ಲಿ ಮಲಗುವನು. ಸ್ವಲ್ಪ ಸಮಯದ ನಂತರ ಅವನ ದಣಿವು ಕಮ್ಮಿ ಆಗುತ್ತೆ. ಆಗ ಅವನು ಅತ್ತ ಇತ್ತ ತಲೆ ಆಡಿಸಿ ಸುತ್ತಲೂ ಒಮ್ಮೆ ಅಲ್ಲಿನ ಪ್ರದೇಶವನ್ನೆಲ್ಲಾ ನೋಡುತ್ತಾನೆ.
ಅಲ್ಲೇ ಸ್ವಲ್ಪ ದೂರದಲ್ಲಿ ಒಂದು ಗುಂಡಿಯಲ್ಲಿ ಒಂದು ಕುಂಬಳಕಾಯಿ ಬಳ್ಳಿ ಬಹಳ ಚನ್ನಾಗಿ ಬೆಳೆದಿರುತ್ತೆ. ಆ ಕುಂಬಳ ಬಳ್ಳಿ ತುಂಬಾ ದೊಡ್ಡ ಗಾತ್ರದ ಕುಂಬಳ ಕಾಯಿಗಳು ಇರುತ್ತವೆ. ಅದೇ ರೀತಿ ಅವನು ಮಲಗಿದ್ದ ಆಲದ ಮರವನ್ನು ನೋಡುತ್ತಾನೆ. ಅಷ್ಟು ದೊಡ್ಡಗಾತ್ರದ ಮರ ಆದರೆ ಆ ಮರದಲ್ಲಿ ಒಂದು ಗೋಲಿ ಗಾತ್ರದ ಕಾಯಿಗಳು ಕಾಣುತ್ತವೆ. ಅದನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ಸಂದೇಹ ಮೂಡುತ್ತೆ.
ದೇವರಿಗೆ ಬುದ್ಧಿ ಇದೆಯಾ? ಎಂದು. ಯಾಕೆಂದರೆ ಅಲ್ಲಿ ಪಕ್ಕದಲ್ಲಿ ಇದ್ದ ಕುಂಬಳಗಿಡಕ್ಕೆ ಅಷ್ಟು ದೊಡ್ಡ ಗಾತ್ರದ ಕಾಯಿ ಮತ್ತು ಇಷ್ಟು ದೊಡ್ಡ ಗಾತ್ರದ ಆಲದ ಮರಕ್ಕೆ ಸಣ್ಣ ಕಾಯಿ ಇಟ್ಟಿರುವನು. ಎಂದು ಯೋಚಿಸುತ್ತಿದ್ದಾಗ, ಆಲದ ಮರದ ಕಾಯಿಯೊಂದು ಅವನ ಮೂಗಿನ ಮೇಲೆ ಬೀಳುತ್ತೆ.
ಆ ಕಾಯಿಬಿದ್ದಿದ್ದೇ ತಡ ಅವನು ಟಣಾರನೆ ಎದ್ದು ಕುಳಿತು ಬಿಡುವನು. ಆಗ ಅವನು ನಿಜವಾಗಲು ದೇವರು ಬುದ್ದಿವಂತ, ಯಾರು ಯಾರನ್ನು ಯಾವು ಯಾವುದನ್ನು ಎಲ್ಲೆಲ್ಲಿ ಇರಿಸಬೇಕೋ ಅಲ್ಲಲ್ಲೇ ಇಟ್ಟಿದ್ದಾನೆ. ಒಂದು ವೇಳೆ ನಾನು ಅಂದು ಕೊಂಡ ಹಾಗೆ ಈ ಕುಂಬಳಕಾಯಿಯನ್ನು ಈ ಆಲದ ಮರದಲ್ಲಿ ಇಟ್ಟಿದ್ದರೆ ಈ ದಿನ ನಾನು ಶಿವನ ಪಾದ ಸೇರಬೇಕಿತ್ತು ಎಂದು ಕೊಳ್ಳುತ್ತಾನೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.