ಪ್ರಮುಖ ಸುದ್ದಿ

ಪ್ರಗತಿಗೆ ಸಮಗ್ರ ಕೃಷಿ ಅಭಿಯಾನ ಸಹಕಾರಿ – ದರ್ಶನಾಪುರ

ಸಮಗ್ರ ಕೃಷಿಯಿಂದ ರೈತರ ಬಾಳು ಹಸನು

 

ಸಮಗ್ರ ಕೃಷಿಯಿಂದ ರೈತರ ಬಾಳು ಹಸನು – ದರ್ಶನಾಪುರ

yadgiri, ಶಹಾಪುರಃ ರೈತರು ಏಕ ಬೆಳೆ ಪದ್ಧತಿ ಅನುಸರಿಸದೆ ವಿನೂತನವಾದ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಸಲಹೆ ನೀಡಿದರು.
ನಗರದ ಕೃಷಿ ಇಲಾಖೆ ಆವರಣದಲ್ಲಿ ಆಯೋಜಿಸಲಾದ ಸಮಗ್ರ ಕೃಷಿ ಅಭಿಯಾನದ ಕೃಷಿ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಕರು ಹಳೆಯ ಏಕ ಬೆಳೆ ಪದ್ಧತಿಗೆ ದುಂಬಾಲು ಬೀಳದೆ, ಸಮಗ್ರ ಸಾವಯವ ಕೃಷಿಯತ್ತ ತಮ್ಮ ಚಿತ್ತಹರಸಿದರೆ, ಆರ್ಥಿಕವಾಗಿ ಸದೃಢರಾಗುವುದು ನಿಶ್ಚಿತ. ಅನ್ನದಾತರ ಬಾಳು ಹಸನಾಗಲು ಸಮಗ್ರ ಕೃಷಿ ಅಭಿಯಾನ ಸಹಕಾರಿಯಾಗಲಿದೆ.
ಕೃಷಿ ಅಭಿಯಾನದಡಿ ಸಮರ್ಪಕ ಮಾಹಿತಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಮಗ್ರ ಕೃಷಿ ಅಭಿಯಾನದ ವಾಹನವು, ಗ್ರಾಮ-ಗ್ರಾಮಗಳಲ್ಲಿ ರೈತರ ಮನೆ ಬಾಗಿಲಿಗೆ ತೆರಳಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸುತ್ತದೆ. ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆ ಮಾಡಿಸಿ ಮಣ್ಣಿಗನುಗುಣವಾಗಿ ಬೀಜ ಬಿತ್ತನೆ ಮಾಡಬೇಕು. ಗೊಬ್ಬರ, ಬೀಜಗಳ, ಕ್ರಿಮಿನಾಶಕಗಳ, ಕೃಷಿ ಯಂತ್ರೋಪಕರಣಗಳ ಹಾಗೂ ರೈತರ ಜಮೀನುಗಳ ವಿಮೆಯ ಬಗ್ಗೆ ಮಾಹಿತಿ ಒದಗಿಸುತ್ತದೆ. ಇದನ್ನು ಪ್ರತಿಯೊಬ್ಬ ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಬೀದ್ ಎಸ್. ಮಾತನಾಡಿ, ರೈತರು ಭೂಮಿಗೆ ಅತಿಯಾದ ರಸಗೊಬ್ಬರ ಕ್ರಿಮಿನಾಶಕ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಈಗಿನಿಂದಲೇ ನೆಲ-ಜಲ ಸಂರಕ್ಷಣೆಗೆ ಮುಂದಾಗದಿದ್ದಲ್ಲಿ ಮುಂದೆ ಆಹಾರ ಭದ್ರತೆಗೆ ಧಕ್ಕೆ ಉಂಟಾಗಲಿದೆ ಎಂದು ಎಚ್ಚರಿಸಿ ರೈತರು ಒಂದೇ ಬೆಳೆಗೆ ಜೋತು ಬೀಳದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್ ಕುಮಾರ್ ಮಾತನಾಡಿ, ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಮಾಡಿದರೆ, ರೈತರಿಗೆ ಹೆಚ್ಚು ಲಾಭವಾಗಲಿದೆ. ಇಲ್ಲಿ ಖರ್ಚು ಕಡಿಮೆ ಬರಲಿದೆ. ರೋಗ ಮತ್ತು ಕೀಟ ಬಾಧೆ ನಿಯಂತ್ರಣದಲ್ಲಿರುತ್ತದೆ. ಅμÉ್ಟ ಅಲ್ಲ ಸಮಗ್ರ ಪೋಷಕಾಂಶಗಳು, ಬೆಳೆಗಳಿಗೆ ಸರಳವಾಗಿ ದೊರೆಯುತ್ತದೆ. ಭೂಮಿ ಮತ್ತಷ್ಟು ಫಲವತ್ತಾಗುತ್ತದೆ ಎಂದರು.

ಕೃಷಿ ಅಧಿಕಾರಿ ಡಾ. ರೂಪದೇವಿ ಮಾಹಿತಿ ನೀಡುತ್ತಾ, ಕೀಟ ಮತ್ತು ರೋಗ ಬಾಧೆ ಕುರಿತು ತಿಳಿಸಿದರು. ಸಾವಯವ ಕೃಷಿಯಲ್ಲಿ ಕೀಟ ಮತ್ತು ರೋಗ ಬಾಧೆಯನ್ನ ಕಡಿಮೆ ಖರ್ಚಿನಲ್ಲಿ ನಿಯಂತ್ರಿಸಬಹುದು. ಇದರಿಂದ ಕೃಷಿ ಭೂಮಿ ತನ್ನ ಫಲವತ್ತತೆ ಕಳೆದುಕೊಳ್ಳುವುದಿಲ್ಲ. ಜತೆಗೆ ಬೆಳೆಗಳ ರೋಗ ನಿರೋಧಕ ಶಕ್ತಿಗೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಹೀಗಾಗಿ ಸರಳವಾಗಿ ಸಾವಯವ ಕೃಷಿಯಲ್ಲಿ ಸಮಗ್ರ ಬೆಳೆಗಳನ್ನ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸೋಮಣ್ಣಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ.ಮುತ್ತುರಾಜ್, ಕೃಷಿ ವಿಜ್ಞಾನ ಕೇಂದ್ರದ ವಿಸ್ತರಣಾಧಿಕಾರಿ ಮುಖ್ಯಸ್ಥ ಡಾ. ಹೊನ್ನಳ್ಳಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಷಣ್ಮುಖ, ನಾಗನಟಿಗಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬ್ಲಮ್ಮ ಎಲ್ಲಪ್ಪ, ರೈತ ಮುಖಂಡ ಚನ್ನಪ್ಪ ಆನೇಗುಂದಿ, ಅಶೋಕ್ ಮಲ್ಲಾಬಾದಿ, ದೇವರಾಜ್ ನಾಯಕ್, ಭೀಮರಾಯ ಹಳಿಸಗರ, ಎಸ್.ಎಂ. ಸಾಗರ್, ಕೃಷಿ ಇಲಾಖೆಯ ಟೆಕ್ನಿಕಲ್ ಅಧಿಕಾರಿ ಮಾರುತಿ ಸೇರಿದಂತೆ ಕೃಷಿ ಇಲಾಖೆ ಸಿಬ್ಬಂದಿಗಳು ರೈತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button