ಸಂಕ್ರಾಂತಿ ಸಂಭ್ರಮ, ಪಲ್ಲಕ್ಕಿ ಉತ್ಸವಕ್ಕೆ ಭರ್ಜರಿ ತಯ್ಯಾರಿ
ಬಲಭೀಮೇಶ್ವರ-ಸಂಗಮೇಶ್ವರರ ಪಲ್ಲಕ್ಕಿ ಮೆರವಣಿಗೆಃ ನಗರದಲ್ಲಿ ಸಂಭ್ರಮ
ಮಲ್ಲಿಕಾರ್ಜುನ ಮುದನೂರ
ಯಾದಗಿರಿಃ ಜಿಲ್ಲೆಯ ಶಹಾಪುರ ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಜ.14 ರಂದು ನಗರದಲ್ಲಿ ನಡೆಯುವ ಜೋಡು ಪಲ್ಲಕ್ಕಿ ಉತ್ಸವ ಕಣ್ಮುಂಬಿಕೊಳ್ಳಲು ಜನಸಾಗರವೇ ಹರಿದು ಬರಲಿದೆ.
ಅದರಂತೆ ಭೀಮರಾಯನ ಗುಡಿಯ ಬಲಭೀಮೇಶ್ವರ ಮತ್ತು ದಿಗ್ಗಿಯ ಸಂಗಮೇಶ್ವರರ ಪಲ್ಲಕ್ಕಿಯ ಅದ್ದೂರಿ ಮೆರವಣಿಗೆಗೆ ನಗರದೆಲ್ಲಡೆ ಭಕ್ತಾಧಿಗಳು ಸ್ವಾಗತ ಕಮಾನ ಸೇರಿದಂತೆ ಹನುಮಾನ್ ಕಟೌಟಗಳನ್ನು ಕಟ್ಟಲಾಗಿದೆ. ಪಲ್ಲಕ್ಕಿ ಸಾಗುವ ಮೆರವಣಿಗೆ ಮಾರ್ಗ ಉದ್ದಕ್ಕೂ ಭಗವತಧ್ವಜಗಳು ಸೇರಿದಂತೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.
ಹಲವಾರು ಹಲವಾರು ಮಕರ ಸಂಕ್ರಾಂತಿ ಶುಭಾಶಯಗಳ ಬ್ಯಾನರ್ ರಾರಾಜಿಸುತ್ತಿವೆ. ಈ ಬಾರಿ ವಿಶೇಷವಾಗಿ ಗಂಗಾ ನಗರದ ಯುವಕರ ತಂಡ ಬಸವೇಶ್ವರ ವೃತ್ತದಲ್ಲಿ ಬಂಗಾರ ಬಣ್ಣದ ಸ್ವಾಗತ ಕಮಾನ್ ನಿರ್ಮಿಸಿದ್ದಾರೆ. ಅದು ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ ಅಲ್ಲದೆ ಹಬ್ಬದ ಕಳೆ ಹೆಚ್ಚುವಂತೆ ಮಾಡಿದೆ. ನಗರದಲ್ಲಿ ಕೇಸರಿ ಧ್ವಜಗಳು, ಪರಾರಿ ಹಬ್ಬದ ಶುಭಾಶಯಗಳು ತಿಳಿಸುವ ಬ್ಯಾನರ್ ರಾರಾಜಿಸುತ್ತಿವೆ.
ರವಿವಾರ ಬೆಳಗ್ಗೆ ಪುರ ಪ್ರವೇಶಿಸುವ ದಿಗ್ಗಿ ಸಂಗಮನಾಥ ಮತ್ತು ಭೀ.ಗುಡಿ ಬಲಭೀಮೇಶ್ವರರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಗಳು ನಗರದ ದಿಗ್ಗಿ ಅಗಸಿ ಮಾರ್ಗದ ಮೂಲಕ ಗಾಂಧಿಚೌಕ, ಮೋಚಿಗಡ್ಡಾದಿಂದ ಹಳಿಸಗರ, ಮಡ್ನಾಳ ಮಾರ್ಗ ಹುರಸಗುಂಡಿಗಿ ಭೀಮಾ ನದಿ ತಲುಪಲಿವೆ. ಈ ಸಂದರ್ಭದಲ್ಲಿ ನಗರದಲ್ಲಿ ಭಕ್ತಾಧಿಗಳು ಸಂಪ್ರದಾಯಂತೆ ವಿವಿಧ ಜಾತಿಯ ಎಲ್ಲರೂ ಎರಡು ಪಲ್ಲಕ್ಕಿಗಳಿಗೆ ದಾರಿಯುದ್ದಕ್ಕೂ ನೀರು ನೀಡುವ ಮೂಲಕ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಪಲ್ಲಕ್ಕಿ ಮುಂದುಗಡೆ ತಿತಿ ಹಾಡುವವರು ಅಂದರೆ ಚರ್ಮದ ಚೀಲದಲ್ಲಿ ತುಂಬಿದ ನೀರನ್ನು ಪರಸ್ಪರರು ಸಿಡಿಸುವ ಸ್ಪರ್ಧೆಯೇ ನಡೆಸುವರು. ಅಲ್ಲದೆ ನೆರದ ಭಕ್ತಾಧಿಗಳಿಗೂ ತಣ್ನೀರನ್ನು ಚಿಮುಕಿಉಸ ವಮೂಲಕ ಪವಿತ್ರತೆಯ ಭಾವನೆ ಮೂಡಿಸುವರು.
ನಂತರ ಭೀಮಾನದಿಗೆ ತೆರಳಲಿರುವ ಪಲ್ಲಕ್ಕಿ ಮತ್ತು ಉತ್ಸವ ಮೂರ್ತಿಗಳಿಗೆ ಅಲ್ಲಿ ಗಂಗಾ ಸ್ನಾನ ನೆರವೇರಲಿದೆ. ನಂತರ ಧಾರ್ಮಿಕ ವಿಧಿವಿಧಾನದಂತೆ ಪೂಜೆ ಪುನಸ್ಕಾರ ನಡೆಯಲಿದೆ. ಅಲ್ಲಿಂದ ವಾಪಾಸ್ ಮೂಲ ಸ್ಥಾನಗಳಿಗೆ ತೆರಳುವ ಸಮಯ ಮತ್ತೇ ಪುರ ಪ್ರವೇಶ ಸಂದರ್ಭದಲ್ಲಿ ನಗರದ ಪ್ರಮುಖ ಬೀದಿಗಳ ಮೂಲಕ ಅದ್ದೂರಿ ಮೆರವಣಿಗೆ ನಡೆಯಲಿದೆ.
ಆ ಕಾರಣಕ್ಕೆ ನಗರದ ಭಕ್ತಾಧಿಗಳು ಗಂಗಾ ನಗರ, ದಿಗ್ಗಿ ಬೇಸ್ ಮತ್ತು ಹಳಿಸಗರ ಭಾಗದಲ್ಲಿ ಸ್ವಾಗತ ಕಮಾನಗಳು ಬ್ಯಾನರ್, ಸೇರಿದಂತೆ ಕೇಸರಿ ಧ್ವಜಗಳು, ಪರಾರಿಗಳನ್ನು ಕಟ್ಟಿದ್ದು, ಎರಡು ಪಲ್ಲಕ್ಕಿಗಳನ್ನು ಭಕ್ತಿ ಭಾವದಿಂದ ಬರಮಾಡಿಕೊಳ್ಳುತ್ತಾರೆ.
ಹರಕೆ ತೀರಿಸುವುದುಃ ನಗರದ ಮಾರುತಿ ಮಂದಿರ ಕಟ್ಟೆಗೆ ಬಂದು ಕುಳಿತ ಬಲಭೀಮೇಶ್ವರರಿಗೆ ವಿವಿಧ ಗ್ರಾಮಗಳಿಂದ ಹೊರ ರಾಜ್ಯದಿಂದ ಆಗಮಿಸಿದ ಭಕ್ತಾಧಿಗಳು ವಿವಿಧ ಹರಕೆಯನ್ನುನೈವೇದ್ಯ ಅರ್ಪಿಸುತ್ತಾರೆ. ಕೆಲವರು ತಮ್ಮ ಮನೆಯಿಂದ ಮಾರುತಿ ಮಂದಿರದವರೆಗೂ ದೀಡ ನಮಸ್ಕಾರಗಳನ್ನು ಹಾಕುತ್ತಾರೆ.
ಹೂವಿನ ಚಾಧಾರ ಪಲ್ಲಕ್ಕಿ ಮೇಲೆ ಹಾಸುತ್ತಾರೆ. ಅಲ್ಲದೆ ಹೂವಿನಿಂದ ತಯಾರಿಸಿದರ ಛತ್ರಿ ನೀಡುವುದು ವಿಷೇಶ. ಅಲ್ಲದೆ ಇಷ್ಠಾರ್ಥ ಈಡೇರಿದ ಭಕ್ತರು ಬೇಡಿಕೊಂಡ ಬೆಳ್ಳಿಯ ಛತ್ರಿ, ಬಂಗಾರದ ಛತ್ರಿಗಳನ್ನು ಸಹ ಪಲ್ಲಕ್ಕಿಗೆ ಅರ್ಪಿಸುತ್ತಾರೆ. ಬೆಳ್ಳಿ, ಬಂಗಾರದ ಛತ್ರಿ ನೀಡುವವರು ಈ ಮೊದಲೇ ಆಯ ದೇವಸ್ಥಾನದಲ್ಲಿ ಸಂಬಂಧಿಸಿದ ಅರ್ಚಕರು ಆಡಳಿತ ಮಂಡಳಿ ಸಮ್ಮುಖದಲ್ಲಿ ಅರ್ಪಿಸುತ್ತಾರೆ. ಇನ್ನೂ ಕಾಯಿ ಕರ್ಪೂರ ಸಾಮಾನ್ಯವಾಗಿ ಎಲ್ಲರೂ ಅರ್ಪಿಸುತ್ತಾರೆ.
ದಿವಟಿಗೆ ಮೆರವಣಿಗೆಃ ತಿಂಗಳ ಮೊದಲೇ ಭಕ್ತಾಧಿಗಳು ಹಳೇ ಬಟ್ಟೆ, ಕೌದಿಗಳನ್ನು ಸಂಗ್ರಹಿಸಿ ತಯಾರಿಸಿದ ಸಿಂಬಿಗಳಿಗೆ ಬೆಂಕಿಹಾಕಿದ ದಿವಟಿಗೆ ಬೆಳಕಿನಲ್ಲಿ ಜೋಡು ಪಲ್ಲಕ್ಕಿಗಳ ಅಬ್ಬರದ ಮೆರವಣಿಗೆ ನಡೆಯುತ್ತದೆ. ಈ ಮೆರವಣಿಗೆ ನೋಡಲು ಎರಡು ಕಣ್ಣು ಸಾಲದು. ಈ ನಡುವೆ ಸಿಡಿಮದ್ದುಗಳ ಅಬ್ಬರ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ. ಸಹಸ್ರಾರು ಜನ ಭಕ್ತರ ಪಾಲ್ಗೊಳ್ಳತ್ತಾರೆ. ಒಟ್ಟಾರೆ ಶ್ರದ್ಧಾಭಕ್ತಿ ಪೂರ್ವಕ ಮೆರವಣಿಗೆ ಕಾಣಬಹುದು. ಮಹಿಳೆಯರು ಮಕ್ಕಳು ಸರ್ವ ಸಮುದಾಯದವರು ಭಾಗವಹಿಸುತ್ತಾರೆ.
ದೇವರ ಹೇಳಿಕೆಃ ಜ.15 ಸೋಮವಾರ ಬೆಳಗಿನ ಜಾವ ನಗರದ ದಿಗ್ಗಿ ಬೇಸ್ ದಾಟುವ ಸಂದರ್ಭ ಭೀ.ಗುಡಿಯ ಅರ್ಚಕರು, ಪ್ರಮುಖ ಭಕ್ತಾಧಿಗಳಿಂದ ಹೇಳಿಕೆ ನಡೆಯುತ್ತದೆ. ಈ ವರ್ಷದ ಬೆಳೆ ಸಮೃದ್ಧಿ ಕುರಿತು ರೈತರ ಸ್ಥಿತಿ ಕುರಿತು ಹೇಳಿಕೆ ನಡೆಯಲಿದೆ. ದೇವರ ಹೇಳಿಕೆ ಆಧರಿಸಿ ರೈತರು ಬಿತ್ತನೆ ಕಾರ್ಯಕೈಗೊಳ್ಳುವರು. ಹೀಗಾಗಿ ಈ ದೇವರ ಹೇಳಿಕೆ ಕೇಳಲು ಗ್ರಾಮೀಣ ಭಾಗದ ರೈತಾಪಿ ಜನ ನೆರದಿರುತ್ತದೆ.
ಬಲಭೀಮೇಶ್ವರ ಹಾಗೂ ಸಂಗಮೇಶ್ವರ ರ ಇತಿಹಾಸ ತಿಳಿಸಿದಕ್ಕೆ ಧನ್ಯವಾದಗಳು ಸರ್