ಪ್ರಮುಖ ಸುದ್ದಿ

ಶಹಾಪುರಃ ಮುಸ್ಲಿಂ ಬಾಂಧವರಿಂದ ಎಳ್ಳು ಬೆಲ್ಲ ವಿತರಣೆ

ಶಹಾಪುರಃ ಮುಸ್ಲಿಂ ಬಾಂಧವರಿಂದ ಎಳ್ಳು ಬೆಲ್ಲ ವಿತರಣೆ

ಶಹಾಪುರಃ ಸಂಕ್ರಾಂತಿ ಹಬ್ಬದಂಗವಾಗಿ ನಗರದಲ್ಲಿ ಜ.15 ರ ಆಹೋರಾತ್ರಿ ಭೀಮರಾಯನ ಗುಡಿ ಬಲಭೀಮೇಶ್ವರ‌ ಮತ್ತು ದಿಗ್ಗಿಯ ಸಂಗಮೇಶ್ವರರ ಪಲ್ಲಕ್ಕಿ ಮೆರವಣಿಗೆ ವೇಳೆ ಇಲ್ಲಿನ ಮಾನವೀಯ ಸೇವಾ ಸಮಿತಿ ಪ್ರತಿವರ್ಷದಂತೆ ಈ ಬಾರಿಯು ಎಳ್ಳು ಬೆಲ್ಲ‌ ವಿತರಿಸುವ ಮೂಲಕ ಭಾವೈಕ್ಯತೆ ಮೆರೆದರು.

ಅಷ್ಟೆ ಅಲ್ಲದೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಉಚಿತ ಚಿಕಿತ್ಸೆ ನೀಡುವ ಮೂಲಕ ಬಂದ ಭಕ್ತರಿಗೆ ಅನುಕೂಲ ಕಲ್ಪಿಸಿದರು. ಕಳೆದ 6 ವರ್ಷದಿಂದ ಮಾನವೀಯ ಸೇವಾ ಸಮಿತಿ ಹಬ್ಬ ಹರಿದಿನ‌ ಜಾತ್ರಾ ಸಂದರ್ಭದಲ್ಲಿ ಮಾನವೀಯ ಕಾರ್ಯಗಳನ್ನು ಮಾಡುತ್ತಾ ಬರುತ್ತಿದೆ.

ಗಣೇಶೋತ್ಸವ, ಚರಬಸವೇಶ್ವರರ ಜಾತ್ರಾ‌ ಮಹೋತ್ಸವ, ಸಂಕ್ರಾಂತಿ ಹೀಗೆ ಹಲವಾರು‌ ಹಬ್ಬಗಳ ವೇಳೆ ಹಿಂದು-ಮುಸ್ಲಿಂ ಸಹೋದರತೆ ಬಾಂಧವ್ಯ ವೃದ್ಧಿಸುವ ಕೆಲಸ ಮಾಡುತ್ತಿದೆ. ಭಾರತದ ಜಾತ್ಯಾತೀತ, ಧರ್ಮಾತೀತ ತತ್ವವನ್ನು ಸಮರ್ಪಕವಾಗಿ ಸಾರುತ್ತಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸಯ್ಯದ್ ಅಲಿಮುದ್ದೀನ್ ಖಾದ್ರಿ, ಮುಖಂಡ ಸಯ್ಯದ್ ಸೈದುದ್ದೀನ್ ಖಾದ್ರಿ, ಸಿಎಚ್ಓ ಮಂಜುನಾಥ, ಸಿಎಚ್ಓ ಸೋಹಿಲ್, ಎಂಡಿ ಗೌಸ್ ಖುರೇಶಿ, ಅಬ್ದುಲ್ ಸಮದ್, ಸಯ್ಯದ್ ಕೈಫ್ ಖಾದ್ರಿ, ಮಹ್ಮದ್ ಗಾಜಿಬಾಬಾ ಮಹ್ಮದ್ ಇಮ್ರಾನ್ ಇತರರಿದ್ದರು.

Related Articles

Leave a Reply

Your email address will not be published. Required fields are marked *

Back to top button